ಸತ್ಯಕಾಮ ವಾರ್ತೆ ಯಾದಗಿರಿ:
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನದಿನ ಹಾಗೂ ಸಂಸ್ಥಾಪಕರಾದ ಜಗದ್ಗುರು ಲಿಂ. ಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109 ನೇ ಜಯಂತಿ ಅಂಗವಾಗಿ ಆ. 29 ಗುರವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ವಚನ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಪೂಜ್ಯ ಶಾಂತವೀರ ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶರಣ ಕುಪೇಂದ್ರ ವಠಾರ ಅವರು ಈ ಕಾರ್ಯಕ್ರವನ್ನು ಉದ್ಘಾಟಿಸಲಿದ್ದಾರೆ. ಸಿದ್ದಪ್ಪ ಎಸ್ ಹೊಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಮಹಿಪಾಲ ರೆಡ್ಡಿ ಮುನ್ನೂರು. ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣ ವೆಂಕಟಗಿರಿ ದೇಶಪಾಂಡೆ ಹಾಗೂ ಶರಣ ಪ್ರಕಾಶ ಅಂಗಡಿ ಕನ್ನಳ್ಳಿ ಅವರ ಅತಿಥಿಗಳಾಗಿ ಭಾಗವಹಿಸುವವರು. ಶರಣ ಡಾ. ಸುಭಾಷ ಚಂದ್ರ ಕೌಲಗಿ ಅವರು ಪ್ರಾಸ್ತಾವಿಕ ಮಾತನಾಡುತ್ತಾರೆ. ಶರಣ ಅಖಂಡೇಶ್ವರ ಹಿರೇಮಠ ಅವರಯ ಗೌರವ ಉಪಸ್ಥಿತಿ ಇರಲಿದ್ದಾರೆ. ಶರಣ ನಾಗಪ್ಪ ಮಾಲಿ ಪಾಟೀಲ ಪತ್ರಕರ್ತರು ಇವರನ್ನ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿದ್ದೇವೆ ಮತ್ತು ಯಡಿಯೂರ ಸಿರಿ ಸಂಗೀತ ಪಾಠಶಾಲೆ ಯಾದಗಿರಿ ಇವರಿಂದ ವಚನ ಗಾಯನ ಕಾರ್ಯಕ್ರಮ ಆಯೋಜಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಅಯ್ಯಣ್ಣ ಹುಂಡೇಕಾರ. ಡಾ. ಸುಭಾಷ ಚಂದ್ರ ಕೌಲಗಿ. ಡಾ. ಭೀಮರಾಯ ಲಿಂಗೇರಿ . ದೇವಿಂದ್ರರೆಡ್ಡಿ ಯಡ್ಡಳ್ಳಿ ಇದ್ದರು.

