ಸತ್ಯಕಾಮ ವಾರ್ತೆ ಯಾದಗಿರಿ :
ನಗರದ ರಸ್ತೆಗಳಲ್ಲಿ ಬಿದ್ದಿರುವ ತಗ್ಗು, ಗುಂಡಿಗಳನ್ನು ಮುಚ್ಚಿ ಡಾಂಬರಿಕರಣ ಮಾಡಲು ನಗರಸಭೆ ಮುಂದಾಗಿದೆ ಎಂದು ಅಧ್ಯಕ್ಷೆ ಕು. ಲಲಿತಾ ಅನಪುರ ಹೇಳಿದರು.
ಶುಕ್ರವಾರ ನಗರದಲ್ಲಿ ಹದಗೆಟ್ಟ ವಿವಿಧ ರಸ್ತೆಗಳನ್ನು ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ವಿಕ್ಷೀಸಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಏಳು ಲಕ್ಷ ರೂ.ಅಂದಾಜು ಪಟ್ಟಿ ತಯಾರಿಸಲಾಗಿದೆ. ಇನ್ನೂ ಹೆಚ್ಚಿಗೆ ಬೇಕಾದರೂ ಸಹ ಖರ್ಚು ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದೆಂದರು.
- Advertisement -
ನಗರದ ಮೈಲಾಪುರ ಅಗಸಿ, ಗಾಂಧಿ ಚೌಕ್, ಕನಕ ವೃತ್ತ, ಲುಂಬಿಣಿ ಉದ್ಯಾನದ ಮಾರ್ಗ, ಗಂಜ ರಸ್ತೆ, ಲಕ್ಷ್ಮಿ ಗುಡಿ ರಸ್ತೆ ಸೇರಿದಂತೆಯೇ ಸುಮಾರು ಐದಾರು ಕಿಮೀ ರಸ್ತೆಗಳಲ್ಲಿ ಎಲ್ಲ ತಗ್ಗು, ಗುಂಡಿಗಳನ್ನು ಮುಚ್ಚಿಸಲಾಗುವು, ಇದಿನಿಂದಲೇ ಕೆಲಸ ಆರಂಭಿಸಲಾಗಿದೆ. ಈಗ ಮಳೆ ಬರುತ್ತಿರುವುದರಿಂದ ಒಂದೆರಡು ದಿನ ವಿಳಂಬವಾಗಬಹುದು, ಆದರೂ ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳಿಸಲಾಗುವುದೆಂದರು.
ನಗರಸಭೆ ಪೌರಯುಕ್ತ ರಜನಿಕಾಂತ ಕೆಲಸದ ಬಗ್ಗೆ ಮಾಹಿತಿ ನೀಡಿದರು.
ನಗರಸಭೆ ಸದಸ್ಯ ಮತ್ತು ಜಿಲ್ಲಾ ವಕ್ತಾರ ಹಣಮಂತ ಇಟಗಿ,ಮಂಜು ದಾಸನಕೇರಿ,ಮಹೇಶ ಕುರಕುಂಬಾ, ಗುತ್ತಿಗೆದಾರ ಪೀರ್ ಅಹ್ಮದ್ ಸೇರಿದಂತೆಯೇ ಇತರರಿದ್ದರು.
- Advertisement -
——–
ನಗರದ ಈ ಹದಗೆಟ್ಟ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬರದಿದ್ದರೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಈ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಕು.ಲಲಿತಾ ಅನಪುರ
ಅಧ್ಯಕ್ಷರು, ನಗರಸಭೆ ಯಾದಗಿರಿ.

