ಸತ್ಯಕಾಮ ವಾರ್ತೆ ಶಹಾಪುರ:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನ್ಯ ಭಾಷೆಗಳ ಕಲಿಕೆಯ ಜೊತೆಗೆ ನಮ್ಮ ಕನ್ನಡದ ಭಾಷಾಭಿಮಾನ ಬೆಳೆಸಿಕೊಳ್ಳುವುದು ಅತ್ಯಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ ಹೇಳಿದರು.
ತಾಲೂಕಿನ ರಸ್ತಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ “ಮಾತೃ ಭಾಷೆ ಮತ್ತು ಶಿಕ್ಷಣ” ಎಂಬ ವಿಚಾರ ಸಂಕಿರಣ ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು,ನಮ್ಮ ಮಾತೃಭಾಷೆ ಕನ್ನಡವಾಗಿರುವುದರಿಂದ ಸ್ವಾಭಿಮಾನಕ್ಕಾಗಿ ಇಂದು ನಾವು ನೀವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನುಡಿದರು.
ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆ:ಗಂಗಾಧರ ಸ್ವಾಮೀಜಿ ಅಭಿಮತ
ಮಾತೃಭಾಷೆ ಮತ್ತು ಶಿಕ್ಷಣ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಡಾ. ಸುಭಾಷ್ ಚಂದ್ರ ಕೌಲಗಿ ಮಾತನಾಡುತ್ತಾ,ಪ್ರಾಥಮಿಕ ಹಂತದಲ್ಲಿ ಮಗುವಿಗೆ ಮಾತೃಭಾಷೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು,ಜಾಗತೀಕರಣದ ಪ್ರಭಾವಕ್ಕೆ ಕನ್ನಡವು ಸೇರಿದಂತೆ ಹಲವು ಭಾಷೆಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು,ಮಾತೃಭಾಷೆಯಲ್ಲಿ ಮಗುವಿಗೆ ಶಿಕ್ಷಣವನ್ನು ನೀಡಿದಾಗ ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದುವರೆಯುವುದಕ್ಕೆ ಸಹಾಯವಾಗುತ್ತದೆ ಎಂದರು.
- Advertisement -
ಕನ್ನಡ ಕಲಿಕೆಯನ್ನು ಮೈಗೂಡಿಸಿಕೊಂಡಿದ್ದೆ ಆದರೆ ನಮ್ಮೊಳಗೆ ಅಂತರಂಗದ ಅರಿವು ಉತ್ತಮಗೊಳ್ಳುವುದಲ್ಲದೆ, ಭಾವನಾತ್ಮಕ ಸಂಬಂಧಗಳು ಬೆಸೆಯುವುದರ ಜೊತೆಗೆ ವ್ಯಕ್ತಿತ್ವದ ವಿಕಾಸನಕ್ಕೆ ಪೂರಕವಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ರವೀಂದ್ರನಾಥ್ ಹೊಸಮನಿ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಶಂಕರ್ ರೆಡ್ಡಿ,ಸುರೇಶಕುಮಾರ,ದೈಹಿಕ ಶಿಕ್ಷಕ ಚಂದ್ರಶೇಖರ್ ವೈದ್ಯ,ಸೇರಿದಂತೆ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸತ್ಕರಿಸಲಾಯಿತು,
ಬಡಜನರ ಸಮಸ್ಯೆ ಅಂತಃಕರಣದಿಂದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ
ಈ ಸಮಾರಂಭದ ವೇದಿಕೆಯ ಮೇಲೆ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತರಾಯ ಸೋಂಪುರ, ಸಗರ ವಲಯ ಕಸಾಪ ಅಧ್ಯಕ್ಷ ಡಾ: ದೇವೇಂದ್ರಪ್ಪ ಹಡಪದ,ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ, ಶ್ರೀಕಾಂತ ಜುಗೇರಿ, ಅಯ್ಯಾಳಪ್ಪ,ಚಂದ್ರಶೇಖರ್ ಪತ್ತಾರ,ಮುಂತಾದವರು ಉಪಸ್ಥಿತರಿದ್ದರು,ಶಾಲೆಯ ಮುಖ್ಯ ಗುರುಗಳಾದ ವಾಣಿಶ್ರೀ ಅಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ರವಿಕಾಂತ್ ಸ್ವಾಗತಿಸಿದರು ಮಾನಪ್ಪ ನಿರೂಪಿಸಿದರು ಶರಣಬಸಪ್ಪ ವಂದಿಸಿದರು,

