ಸತ್ಯಕಾಮ ವಾರ್ತೆ ಯಾದಗಿರಿ;
ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಮುಟ್ಟಲು ಸತತ ಅಧ್ಯಾಯ, ದೃಢ ವಿಶ್ವಾಸ ನಂಬಿಕೆ ಇರಬೇಕು ಆಗ ಮಾತ್ರ ನಾವು ಗುರಿ ಮುಟ್ಟಲು ಸಾಧ್ಯವೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಯಾದಗಿರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2021-22ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಯಡಿಯಲ್ಲಿ ಮಂಜೂರಾದ ನಗರದ ಗಂಜ್ ಏರಿಯಾದ ಮೆಟ್ರಿಕ್ ನಂತರದ ಮಾದರಿ ಬಾಲಕರ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
- Advertisement -
ಸರ್ಕಾರ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಸದುಪಯೋಗ ಪಡೆಸಿಕೊಂಡು ಉತ್ತರ ಶಿಕ್ಷಣ ಪಡೆದು ಉನ್ನತ ಹುದ್ದೆಗೆಳನ್ನು ಅಲಂಕರಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಉತ್ತಮ ವಸತಿ ನಿಲಯ ನಿಮ್ಮಗಾಗಿ ನಿರ್ಮಾಣಮಾಡಿದ್ದಾರೆ. ನಿಮ್ಮ ಸಮಸ್ಯೆಗಳು ಯಾವುದೇ ಇದ್ದರು ನನ್ನ ಗಮನಕ್ಕೆ ತರುವಂತೆ ಹೇಳಿದ ಅವರು ಹೆಚ್ಚಿನ ಸಮಯ ವಿದ್ಯಾಭಾಸಕ್ಕೆ ನೀಡಬೇಕು ಎಂದು ಹೇಳಿದರು.
- Advertisement -
ವಸತಿ ನಿಯಮದಲ್ಲಿ ವಾರ್ಡ್ ಇರುವುದೇ ಇಲ್ಲಾ ಈ ಕುರಿತು ಅನೇಕ ದುರುಗಳು ಬರುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳು ಯಾರಿಗೆ ಹೇಳಬೇಕು. ವಸತ ನಿಲಯದಲ್ಲಿ ವಾರ್ಡ್ ಇಲ್ಲದೆ ಹೋದರೆ ನೇರವಾಗಿ ನನ್ನಗೆ ಪೋನ್ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕರು ಹೇಳಿದರು.
ಶೌಚಾಲಯ, ವಸತಿ ನಿಲಯ, ಕಂಪ್ಯೂಟರ್ ಕೋಟೆಗಳನ್ನು ಶಾಸಕರು ವಿಕ್ಷಣೆ ಮಾಡಿದರು. ಇನ್ನೂ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ಪೂರ್ಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
- Advertisement -
ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂತೋಷ ರೆಡ್ಡಿ ಮಾತನಾಡಿ, ವಸತಿ ನಿಯದ ಅವಶ್ಯಕತೆ ನಮ್ಮ ಇತ್ತು. ಇಂದು ಉದ್ಘಾಟನೆಗೊಂಡಿರುವ ವಸತಿ ನಿಲಯದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಂಡು ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಯಮಿತ ಇಲಾಖೆಯ ಕಾರ್ಯ ಪಾಲಕ ಅಭಿಯಂತರರಾದ ಧನಂಜಯ ಆರ್ , ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಶಿವರಾಜ ಹಿಡೇದ, ಇಂಜನೀಯರ ಹೋನಪ್ಪ ಪೂಜಾರಿ, ಸುರೇಶ ರೆಡ್ಡಿ ದೇಸಾಯಿ ಸೇರಿದಂತೆ ವಸತಿ ನಿಲಯ ಮೇಲ್ವಿಚಾರಣೆ ಇದ್ದರು.

