ಸತ್ಯಕಾಮ ವಾರ್ತೆ ಯಾದಗಿರಿ :
ಕ್ರಿಕೆಟ್ ಗೆ ಸಿಗುವಷ್ಟು ಮಹತ್ವ ದೇಶೀಯ ಕ್ರೀಡೆ ಕಬಡ್ಡಿಗೆ ಸಿಗಬೇಕು. ದೇಶಿಯ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹಗಳು ಸಿಗಬೇಕು, ಹಳಿಗೇರಾ ಗ್ರಾಮದ ಯುವಕರು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದು ಸಂತಸವಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಮತಕ್ಷೇತ್ರದ ಹಳಿಗೇರಾ ಗ್ರಾಮದಲ್ಲಿ ಮೈಲಾಪೂರ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
- Advertisement -
ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಬರಲಿದ್ದು, ಅವೆಲ್ಲವನ್ನು ಮೆಟ್ಟಿ ನಿಂತು ಸಾಧನೆಗೈವುದು ಅತೀ ಮುಖ್ಯ ಎಂದು ಹೇಳಿದರು.
ಕಳೆದೆರಡು ದಶಕಗಳಿಂದ ಕಬ್ಬಡ್ಡಿ ಸೇರಿದಂತೆ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನಮ್ಮ ಕುಟುಂಬದ ವತಿಯಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವಂತೆ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದು, ಮುಂದಿನ ದಿನದಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಭೀಮರಾಯ ಮಾನಿ ಹಳಿಗೇರಾ, ಸಿದ್ದಪ್ಪ ಧರ್ಮಣ್ಣೋರ್, ಶೇಷಪ್ಪ ಹಾವನೋರ್, ನಾಗನಗೌಡ ಹಳಿಗೇರಾ, ಬಸವರಾಜ ಖಂಡಪ್ಪನೋರ್, ಜಗದೀಶ ನಾಯಕ, ಶರಣಪ್ಪಗೌಡ ಆರ್. ಹೊಸಳ್ಳಿ, ದೇವಿಂದ್ರಪ್ಪ ಗೌಡಗೇರಾ ಸೇರಿದಂತೆ ಇತರರಿದ್ದರು.
- Advertisement -

