ಸತ್ಯಕಾಮ ವಾರ್ತೆ ಯಾದಗಿರಿ:
ಮಾಜಿ ಶಾಸಕರು ಹಾಗೂ ಜನಪ್ರೀಯ ನಾಯಕರಾದ ದಿವಂಗತ ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಇರದೇ ಪ್ರಬಲ ಶಕ್ತಿ ಆಗಿದ್ದರು ಎಂದು ತಾಲೂಕು ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಹೇಳಿದರು.
ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಮುದ್ನಾಳ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ದಿ ವೆಂಕಟರೆಡ್ಡಿ ಗೌಡ ಮುದ್ನಾಳ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜಿಗಾಗಿ ಮತ್ತು ಜಿಲ್ಲಾ ಕೇಂದ್ರವಾಗಲು ಅವರು ಮಾಡಿದ ಹೋರಾಟ ಮರೆಯಲಾಗದು ಅವರ ರಾಜಕೀಯ ಸಾಮಾಜಿಕ ಶೈಕ್ಷಣಿಕ ಸಾಹಿತಿಕ ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಗಾದವಾದದು ಎಂದರು.
- Advertisement -
ಹಿರಿಯರಾದ ಸಿ ಎಮ್ ಪಟ್ಟೆದಾರ ಮಾತನಾಡಿ ನೇರ ನುಡಿ ಧೀರ ನಡೆ ಅವರ ಸರಳ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲಿ ಅಚ್ಚಳೆಯದೆ ಉಳಿದಿದೆ ಯಾದಗಿರಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಜಾತ್ಯತೀತ ವ್ಯಕ್ತಿಯಾಗಿ ಬಾಳಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಧ್ಯಾಕ್ಷರಾದ ಬಸವರಾಜ ಮೋಟ್ನಳ್ಳಿ. ಕಸಾಪ ಗೌರವ ಕಾರ್ಯದರ್ಶಿಯಾದ ಡಾ. ಭೀಮರಾಯ ಲಿಂಗೇರಿ. ಡಾ. ಎಸ್ ಎಸ್ ನಾಯಕ ಮಾತನಾಡಿ ನುಡಿ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸೋಮಶೇಖರ್ ಮಣ್ಣೂರ. ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಚನ್ನಪ್ಪ ಸಾಹುಕಾರ ಠಾಣಗುಂದಿ. ಚಂದ್ರಶೇಖರ ಅರಳಿ. ಮಹೇಶ ಹಿರೇಮಠ. ವೆಂಕಟೇಶ ಕಲಕಂಬ. ಮಹೇಶ್ ಪಾಟೀಲ. ಸುಬಾಶರೆಡ್ಡಿ. ನೀಲಕಂಠ ಶಿಲವಂತ. ಡಾ. ರವಿಂದ್ರ ಹೊಸಮನಿ. ವಿಶ್ವನಾಥ ಕಾಜಗಾರ. ರಾಮಚಂದ್ರ ದಿಲ್ಲಿಕರ್. ಬಸವಂತ್ರಾಯಗೌಡ ಮಾಲಿ ಪಾಟೀಲ. ದೇವಿಂದ್ರರೆಡ್ಡಿ ಯಡ್ಡಳ್ಳಿ. ನಾಗೇಂದ್ರ ಜಾಜಿ. ಶರಣು ಇಡ್ಲೂರ. ಮಲ್ಲು ಹಳಕಟ್ಟಿ. ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಮುದ್ನಾಳ ಅಭಿಮಾನಿಗಳು ಪಾಲ್ಗೊಂಡರು.

