ಸತ್ಯಕಾಮ ವಾರ್ತೆ ಯಾದಗಿರ:-
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪ್ರಸ್ತಾವನೆ ಓದಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಈ ದೇಶದಲ್ಲಿ ಜಾರಿಗೊಳಿಸಿದ ದಿನವಾದ ನ 26 ನ್ನು ಇಡೀ ದೇಶ ಸಂಭ್ರಮದಿಂದ ಸಂವಿಧಾನ ದಿನ ಎಂದು ಆಚರಣೆ ಮಾಡುವಂತೆ ಸರಕಾರಿ ಕಾರ್ಯಕ್ರಮ ಆಗಿ ಆದೇಶ ಮಾಡಿದವರು ಪ್ರಧಾನಿ ನರೇಂದ್ರ ಮೋದಿ,ಅವರು ಪ್ರಧಾನಿ ಯಾದ ನಂತರ 2015 ರಲ್ಲಿ ಮಾಡಿದ ಮೊದಲ ಕೆಲಸ ಇದಾಗಿದ್ದು. ಅಂದಿನಿಂದ ಪ್ರತಿವರ್ಷ ಸಂವಿಧಾನ ದಿನ ಎಂದು ಆಚರಿಸಿಕೊಂಡು ಬಂದಿದೆಯೆಂದು ಹೇಳಿದ್ದಾರೆ.
ಸಂವಿಧಾನವನ್ನು ಆಡಳಿತದ ಧರ್ಮ ಗ್ರಂಥವಾಗಿದೆ ಇದನ್ನು ರಚಿಸಿ ಭಾರತ ಸರ್ಕಾರಕ್ಕೆ ಸಮರ್ಪಿಸಿದ ಅತ್ಯಂತ ಸ್ಮರಣೀಯ ದಿನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿದ ಅವರು ಇತ್ತೀಚಿಗೆ ಸಂವಿಧಾನದ ತಿದ್ದುಪಡಿ ಬಗ್ಗೆ ಅಥವಾ ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ರಾಜಕೀಯ ವಲಯ ಹಾಗೂ ಸಾಮಾಜಿಕ ವಲಯಗಳಲ್ಲಿ ನಡೆಯುತ್ತಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ಪ್ರಚಾರ ಸಭೆಗಳಲ್ಲಿ ಭಾರತ ಸಂವಿಧಾನದ ಸಣ್ಣ ಪುಸ್ತಕವನ್ನು ಕೈಯಲ್ಲಿ ಹಿಡಿದು ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಹಾಗೂ ಈಗ ಇರುವ ರಿಸರ್ವೇಶನ್ ತೆಗೆಯುತ್ತಾರೆ ಎಂದು ವಿಷ ಬೀಜ ಬಿತ್ತಿದರು ಎಂದರು.
ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿದ ಅವರು ಕಾಂಗ್ರೆಸ್ ಪಾರ್ಟಿ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ ಸಂವಿಧಾನದ ತಿದ್ದುಪಡಿ ಮಾಡಿರುವುದನ್ನು, ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾಗಿ ನಡೆದುಕೊಂಡಿರುವುದನ್ನು ಜನರಿಗೆ ತಿಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ,ವೆಂಕಟರೆಡ್ಡಿ ಅಬ್ಬೆತುಮಕೂಮಕೂರಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ,ಬಸವರಾಜ್ ಚಂಡರಕಿ,ಜಿಲ್ಲಾ ಬಿಜೆಪಿ ವಕ್ತಾರರಾದ ಹಣಮಂತ ಇಟಗಿ,ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಸೊನ್ನದ ಮತ್ತು ಮಾರುತಿ ಕಲಾಲ್ ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಗೇರಿ,ಮೌನೇಶ್ ಬೆಳಗೆರೆ,ಸ್ನೇಹ ರಾಸಳಕರ,ರಾಜಶೇಖರ ಕಾಡಮನೋರ, ಗೋಪಾಲ ದಾಸನಕೇರಿ,ಮಲ್ಲಿಕಾರ್ಜುನ ಜಲ್ಲಪ್ಪನೂರ,ಚಂದ್ರಶೇಖರ ಕಡೆಸೂರ,ಭೀಮಬಾಯಿ,ನಾಗಪ್ಪ ಗಚ್ಚಿನಮನಿ,ಶ್ರೀಕಾಂತ್ ಸುಂಗಲ್ಕರ,ನಾಗರೆಡ್ಡಿ ಸೇರಿದಂತೆ ಅನೇಕಕಾರ್ಯಕರ್ತರು ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

