ಸತ್ಯಕಾಮ ವಾರ್ತೆ ವಡಗೇರಾ:
ಪಡಿತರ ಕಾರ್ಡ ವಿತರಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕ ನೇತೃತ್ವದಲ್ಲಿ ವಡಗೇರಾ ತಹಸೀಲ್ದಾರರಿಗೆ ದೂರು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು ಪಡಿತರ ಚೀಟಿಗಾಗಿ ನೂತನವಾಗಿ ಅರ್ಜಿ ಸಲ್ಲಿಸಿ ಎರಡು ಮೂರು ವರ್ಷಗಳ ಕಳೆದರೂ ಕೂಡಾ ಪಡಿತರ ಚೀಟಿಗಳನ್ನು ನೀಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
- Advertisement -
ತಾಲೂಕಿನ ದೂರದ ಗ್ರಾಮಗಳಿಂದ ದಿನನಿತ್ಯ ನೂರಾರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಪಡಿತರ ಚೀಟಿ ಪಡೆದುಕೊಳ್ಳಲು ಅಲೆದಾಡಿ ಹೈರಾಣಗುತ್ತಿದ್ದಾರೆ ಬಹಳಷ್ಟು ಅರ್ಜಿದಾರರಿಗೆ ಆಸ್ಪತ್ರೆಯ ಚಿಕಿತ್ಸೆಯ ಕೆಲಸಕ್ಕೆ ಪಡಿತರೆ ಚೀಟಿಗೆ ಅವಶ್ಯಕತೆ ಇದೆ ಪಡಿತರ ಚೀಟಿ ಇಲ್ಲದಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪಡಿತರ ಚೀಟಿ ಇಲ್ಲದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾನುಗಟ್ಟಲೆ ಹಣವನ್ನು ಸುರಿಯುತ್ತಿದ್ದಾರೆ ಆದರೆ ಆಹಾರ ಇಲಾ ಅಧಿಕಾರಿಗಳು ತೀವ್ರ ನಿರ್ಲಕ್ಷ ವಹಿಸಿ ಸರ್ವರ್ ನೆಪ ಹೇಳಿ ವಾಪಸ್ ಕಳಿಸುತ್ತಿದ್ದಾರೆ ಹೆಚ್ಚಿನ ದುಡ್ಡು ನೀಡಿದವರಿಗಷ್ಟೇ ಪಡಿತರ ಚೀಟಿ ವಿತರಣೆ ಮಾಡುತ್ತಿರುವುದು ಈಗಾಗಲೇ ನಮ್ಮ ರೈತ ಸಂಘದ ಗಮನಕ್ಕೆ ಬಂದಿದೆ ತಹಸೀಲ್ದಾರರು ತಪ್ಪಿಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬಾಕಿ ಉಳಿದಿರುವ ಪಡಿತರ ಚೀಟಿಗಳನ್ನು ಕೂಡಲೇ ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ತಹಸೀಲ್ದಾರರು ಬಾಕಿ ಪಡಿತರ ಚೀಟಿಗಳ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಯಾರಾದರೂ ಹಣದ ಬೇಡಿಕೆ ಇಟ್ಟಿದ್ದು ಕಂಡುಬAದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
- Advertisement -
ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡರುಗಳಾದ ಶರಣು ಜಡಿ, ಸತೀಶ್ ಪೂಜಾರಿ, ನಿಂಗಪ್ಪ ಕುರ್ಕಳ್ಳಿ, ಅಶೋಕ್ ಚಿನ್ನಿ, ಹಳ್ಳೆಪ್ಪ ತೇಜೇರ, ನಾಗರಾಜ್ ಸ್ವಾಮಿ ಇನ್ನಿತರರು ಇದ್ದರು

