ಸತ್ಯಕಾಮ ವಾರ್ತೆ ವಡಗೇರಾ:
ತಾಲೂಕಿನ ವಡಗೇರಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ಬೆಳೆಯಲ್ಲಿ ಹತ್ತಿ ಕಾಯಿಕೊರಕ ರಬ್ಬರ ಹುಳುವಿನ ಹಾವಳಿ ಹೆಚ್ಚಾಗಿದ್ದು, ರೈತರು ಹುಳುಗಳನ್ನು ನಿಯಂತ್ರಿಸಲು ಕೀಟನಾಶಕ ಸಿಂಪರಣೆ ಮಾಡಿ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಕ್ಲೋರಂಟ್ರಾನಿಲಿಪ್ರೋಲ್+ ಲ್ಯಾಂಬ್ಡಾ ಸೈಹಾಲೋಥ್ರೀನ್ ಕೀಟನಾಶಕ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು. ಮತ್ತೆ ಹತ್ತು ದಿನಗಳ ನಂತರ, ಪ್ರೊಫೆನೊಪೊಸ್ +ಸೈಪರ್ಮೆಥ್ರಿನ್ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು.ಅಸೆಟಾಮಿಪ್ರಿಡ್ + ಬೈಫೆಂತ್ರಿನ್ ಜೊತೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು ಮತ್ತೆ ಹತ್ತು ದಿನಗಳ ನಂತರ, ರೈತರು ಪ್ರತಿ ಎಕರೆಗೆ ಈ ಮೇಲ್ಕಂಡ ಕೀಟನಾಶಕವನ್ನು 200 ಮೀ.ಲೀ ಕಡ್ಡಾಯವಾಗಿ ಸಿಂಪರಣೆಯನ್ನು ಮಾಡಬೇಕು ಎಂದಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಿಳಿಸಿದ್ದಾರೆ.

