ಸತ್ಯಕಾಮ ವಾರ್ತೆ ಶಹಾಪುರ:
ಕರ್ನಾಟಕದ ಅಪರೂಪದ ರಾಜಕೀಯ ಮುತ್ಸದ್ಧಿ, ದೀಮಂತ ನಾಯಕರಾಗಿದ್ದ ಬಾಪುಗೌಡ ದರ್ಶನಾಪುರ ಅವರು ಸತ್ಯ, ಪ್ರಾಮಾಣಿಕತೆ, ದಕ್ಷತೆಯ, ನೇರ ನಡೆನುಡಿಯ ಜನಪರ ಚಿಂತಕ ಹಾಗೂ ದೂರದೃಷ್ಟಿಯ ಅಭಿವೃದ್ಧಿಯ ಹರಿಕಾರರಾಗಿ ಇಂದಿಗೂ ನಾಡಿನ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ ಎಂದು ರೈತ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕರಾದ ಕೇದಾರಲಿಂಗಯ್ಯ ಹಿರೇಮಠ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಜನಾನುರಾಗಿ ಬಾಪುಗೌಡ ದರ್ಶನಾಪುರ ಅವರ ೩೬ನೇ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು ಶಹಾಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಬಾಪುಗೌಡರ ವಿಚಾರಗಳಿಗೆ ಶಾಸನ ಸಭೆಗಳಲ್ಲಿ ತುಂಬಾ ಮಹತ್ವವಿತ್ತು. ಭೀಮರಾಯನಗುಡಿಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಮುಖ್ಯ ಕೇಂದ್ರ ಕಛೇರಿ ಸ್ಥಾಪಿಸಿ ಕಲ್ಯಾಣ ಕರ್ನಾಟಕದ್ಯಾಂತ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಿದರು. ವಸತಿ ಸೌಕರ್ಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರು. ದೀನ-ದಲಿತರ, ಶೋಷಿತರ, ಹಿಂದುಳಿದ ವರ್ಗಗಳ ಸೇರಿದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ರಾಜಕೀಯ ಚೇತನರಾಗಿದ್ದಾರೆ ಎಂದು ಹಲವಾರು ನಿರ್ದೇಶನಗಳ ಮೂಲಕ ತಿಳಿಸಿದರು.
- Advertisement -
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣ ಕಮಕನೂರ ಅವರು ಮಾತನಾಡಿ ಬಹು ಅಂತಃಕರಣವುಳ್ಳ ರಾಜಕಾರಣಿಯಾಗಿದ್ದ ಬಾಪುಗೌಡರ ಸಾಮಾಜಿಕ ಕಳಕಳಿ, ಅಭಿವೃದ್ಧಿಯ ಚಿಂತನೆ, ಕೃಷಿ, ನೀರಾವರಿ, ಶೈಕ್ಷಣಿಕ ಅಭಿವೃದ್ಧಿಯ ಕಾರ್ಯಗಳು ಅವರನ್ನು ಕರ್ನಾಟಕದ ಅಪರೂಪದ ಸಜ್ಜನಿಕೆಯ ರಾಜಕಾರಣಿಯಾಗಿ ಮಾಡಿದವು. ತಂದೆಯ ಹಾದಿಯಲ್ಲಿ ಸಾಗಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ರಾಜ್ಯ ರಾಜಕಾರಣದಲ್ಲಿ ಅಪರೂಪದ ಸರಳ ಸಜ್ಜನಿಕೆಯ ಮಾದರಿ ಜನನಾಯಕರಾಗಿ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ನಾಡಿನ ಅಭಿವೃದ್ಧಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬದ್ಧತೆಯ ಹೆಮ್ಮೆಯ ನಾಯಕರಾಗಿದ್ದಾರೆ. ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಬಸವರಾಜಪ್ಪಗೌಡ ದರ್ಶನಾಪುರ ಅವರ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಚರಬಸವೇಶ್ವರ ಗದ್ದುಗೆ ಸಂಸ್ಥಾನದ ವೇದಾಮೂರ್ತಿ ಬಸವಯ್ಯ ಶರಣರು, ನಾಗನಟಿಗಿಯ ಸಿದ್ಧರಾಮೇಶ್ವರ ಸ್ವಾಮಿಜಿಯವರು ಸಾನಿಧ್ಯ ವಹಿಸಿದ್ದರು. ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ, ಕಲಬುರ್ಗಿ ದಕ್ಷಿಣಕ್ಷೇತ್ರದ ಶಾಸಕ ಅಲಮಪ್ರಭು ಪಾಟೀಲ, ಆರ್.ಎಚ್. ಪಾಟೀಲ, ಚರಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ, ಚಂದ್ರಶೇಖರ ಆರಬೋಳ, ಶಂಕ್ರಣ್ಣ ವಣಿಕ್ಯಾಳ, ಭೀಮರಡ್ಡಿ ಬೈರಡ್ಡಿ, ಶರಣಪ್ಪ ಸಲಾದಪುರ, ವಾಮನರಾವ ದೇಶಪಾಂಡೆ, ಸಿದ್ಧಲಿಂಗಣ್ಣ ಆನೆಗುಂದಿ, ಸಂತೋಷ ದೇವದುರ್ಗ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಸಣ್ಣನಿಂಗಪ್ಪ ನಾಯ್ಕೋಡಿ, ಬಸವರಾಜ ಹಿರೇಮಠ, ಗುಂಡಪ್ಪ ತುಂಬಗಿ, ಬಸವರಾಜ ಹೇರುಂಡಿ, ಅಲ್ಲಾಪಟೇಲ ಮಕ್ತಾಪುರ, ಇಬ್ರಾಹಿಂ ಶಿರವಾಳ, ಇಸ್ಮಾಯಿಲ್ ಚಾಂದ್, ತಲತ್‌ಚಾಂದ್, ಮಲ್ಲಣ್ಣ ಉಳ್ಳುಂಡಗೇರಿ, ಆನಂದ ದೊಡ್ಡಮನಿ, ಬಾಪುಗೌಡ, ವಿಜಯಕುಮಾರ ಎದರಮನಿ, ಮಹಾದೇವಪ್ಪ ಸಾಲಿಮನಿ, ಗುರುಬಾಣತಿಹಾಳ, ಬಸವರಾಜ ಪಾಟೀಲ ಕೆಂಭಾವಿ, ಸಿದ್ಧಣ್ಣ ಗೌಡ, ಹಣಮಂತ್ರಾಯ ದೊರೆ, ಶಾಂತಗೌಡ ನಾಗನಟಗಿ, ಗೌಡಪ್ಪಗೌಡ ಆಲ್ದಾಳ, ಪ್ರೌಢಶಾಲೆಯ ಮುಖ್ಯಗುರು ತಿಪ್ಪಣ್ಣ ಜಮಾದಾರ, ಪಿ.ಯು. ಕಾಲೇಜಿನ ಪ್ರಾಂಶುಪಾಲ ಧರ್ಮಣ್ಣಗೌಡ ಬಿರಾದಾರ ಮುಂತಾದ ಅನೇಕ ರಾಜಕೀಯ ಮುಖಂಡರು ಹಾಗೂ ಬಾಪುಗೌಡ ದರ್ಶನಾಪುರ ಅವರ ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದರು.
- Advertisement -
ಈ ಸಂದರ್ಭದಲ್ಲಿ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಅರುಣಕುಮಾರ ಜೇವರ್ಗಿ ನಿರೂಪಿಸಿದರು. ಶಿಕ್ಷಕ ಶರಣಯ್ಯಸ್ವಾಮಿ ಹಿರೇಮಠ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಶಿವಲಿಂಗಣ್ಣ ಸಾಹು ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸುರೇಶ ದೊರೆ ಮುಡಬೂಳ ವಂದಿಸಿದರು.
ಸಂಗೀತ ಕಲಾವಿದರಾದ ಮಲ್ಲಯ್ಯಸ್ವಾಮಿ ಹಿರೇಮಠ, ಬಸವರಾಜ ವಿಶ್ವಕರ್ಮ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು.
- Advertisement -

