(ವರದಿ: ಕುದಾನ್ ಸಾಬ್)
ಸತ್ಯಕಾಮ ವಾರ್ತೆ ಯಾದಗಿರಿ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾ ಘಟಕವು ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ದಿ ಮತ್ತು ವೃತ್ತಿಪರ ಉನ್ನತೀಕರಣಕ್ಕೆ ಸಕ್ರೀಯವಾಗಿ ಕೆಲಸ ಮಾಡಬೇಕೇ ಹೊರತು ತಮ್ಮ ಸ್ವಹಿತಾಸಕ್ತಿಗಾಗಿ ನೈಜ ಪತ್ರಕರ್ತರಿಗೆ ಸದಸ್ಯತ್ವ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಉದ್ಭವಿಸಿದೆ.
ಸದಾ ಸಂಘಟನೆಯ ಸ್ಥಾನಮಾನಗಳಲ್ಲೆ ಇರಬೇಕು ಎಂಬ ಹಪಾಹಪಿಗೆ ಬಿದ್ದಿರುವ ಇಲ್ಲಿನ ಸಂಘದ ಜಿಲ್ಲಾಧ್ಯಕ್ಷ ಸದಸ್ಯತ್ವವನ್ನು ಹೊಸಬರಿಗೆ ಸದಸ್ಯತ್ವ ನಿರಾಕರಿಸಿ ಪತ್ರಕರ್ತ ಸಮೂಹದಲ್ಲಿ ಕುತಂತ್ರ ನಡೆಸುತ್ತಿದ್ದಾರೆ ಒಂದರ್ಥದಲ್ಲಿ ಪಟ್ಟ ಭದ್ರ ಮಾಡಿಕೊಳ್ಳುವ ಕುತಂತ್ರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಕಾರ್ಯನಿರತ ಪತ್ರಕರ್ತರು ಆರೋಪಿಸುತ್ತಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಬೇಕಾದಾರೆ ಜಿಲ್ಲೆಯ ಮಾಧ್ಯಮ ಪಟ್ಟಿಯಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಕೊಡಲಾಗುವುದು ಇಲ್ಲದಿದ್ದರೆ ಕೊಡಲು ಸಾಧ್ಯವಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಹೇಳುತ್ತಾರೆ. ಆದರೆ ಈ ಕುರಿತು ಯಾವುದಾದರೂ ಆದೇಶ ಇಲ್ಲವೇ ಪತ್ರಕರ್ತರ ಸಂಘದ ನಿರ್ಣಯ ಇದ್ದರೆ ನೀಡುವಂತೆ ಮಾಡುವ ಮನವಿಗೂ ನಕಾರಾತ್ಮಕವಾಗಿ ಅಸಂಬಂದ್ದ ಉತ್ತರ ನೀಡುತ್ತಾರೆ.
- Advertisement -
ಪತ್ರಕರ್ತರ ಸಂಘದ ಬೈಲಾ ನೀಡುವಂತೆ ಕೇಳಿದರೆ ಕೊಡಲು ಬರುವುದಿಲ್ಲ ಎಂದು ಒಬ್ಬರು ಹೇಳಿದರೆ ಇನ್ನೊಬ್ಬ ಪದಾಧಿಕಾರಿ ರಾಜ್ಯಕ್ಕೆ ಎಲ್ಲ ಕಡೆ ಒಂದೇ ಬೈಲಾ ಇದೆ ಬೇಕಿದ್ದರೆ ಅಲ್ಲಿ ಹೋಗಿ ನೋಡಿಕೊಳ್ಳಿ ಎಂದು ಪರೋಕ್ಷವಾಗಿ ಹೇಳುತ್ತಿರುವುದು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಇದಲ್ಲದೇ ಹೊಸದಾಗಿ ಬಂದ ಪತ್ರಕರ್ತರಿಗೆ ಹಾಗೂ ನೈಜ ಪತ್ರಕರ್ತರಿಗೆ ಸದಸ್ಯತ್ವ ಮಾಡಿಸುವ ಮೂಲಕ ಸಂಘವನ್ನು ಬಲಪಡಿಸಬೇಕಾದ ಜವಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರು ಯಾವುದೇ ಮಾಹಿತಿ ಕೇಳಿದರೆ ಸಾಕು ಸರ್ವಾಧಿಕಾರಿಯಂತೆ ವರ್ತಿಸಿ ಪತ್ರಿಕಾ ಭವನದ ಗ್ರೂಪ್ ನಿಂದ ರಿಮೂವ್ ಮಾಡುವುದು ಪತ್ರಕರ್ತರ ಸಂಘದ ಗ್ರೂಪ್ ನಿಂದ ರಿಮೂವ್ ಮಾಡುವುದು ಮಾಡುವ ಮೂಲಕ ಪತ್ರಕರ್ತರ ವಿರುದ್ಧವೇ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ನಡೆಯುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ಅನ್ಯಾಯದ ಬಗ್ಗೆ ಪ್ರಶ್ನಿಸುವ ಪತ್ರಕರ್ತರ ಸಂಘದಲ್ಲಿಯೇ ಅನ್ಯಾಯ ನಡೆದರೆ ಇನ್ನಾರಿಗೆ ಪ್ರಶ್ನಿಸುವುದು ಎಂಬುದನ್ನು ಸಂಬಂಧಿಸಿದವರೇ ಹೇಳಬೇಕಿದೆ.

