ವರದಿ; ಶ್ರೀಶೈಲ್ ಪೂಜಾರಿ
ಮುದ್ದೇಬಿಹಾಳ; ತಾಲೂಕಿನ ಕುಂಟೋಜಿ ಗ್ರಾಮದ ಸಮೀಪ ಬೈಕ್ ಗುದ್ದಿದ ಪರಿಣಾಮವಾಗಿ ಸವಾರರು ಹಾಗೂ ಪಾದಚಾರಿ ಸೇರಿ ಮೂವರು ಮೂವರು ಮೃತಪಟ್ಟರೆ, ನಾಲ್ವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮೃತಪಟ್ಟ ಮೂವರಲ್ಲಿ ಬೈಕ್ ಸವಾರ ನಿಂಗರಾಜ ಚೌದರಿ(22) ತಾಳಿಕೋಟಿ ತಾಲೂಕಿನ ಗೊಟಗುನಕಿ ಗ್ರಾಮ, ಬೈಕ್ ನ ಹಿಂಬದಿ ಸವಾರ ಅನಿಲ ವನೂರು (27) ದೇವರ ಹಿಪ್ಪರಗಿ ತಾಲೂಕಿನ ಹಂಚಿನಾಳ ಗ್ರಾಮ, ಪಾದಾಚಾರಿ ಕುಮಾರ ಪ್ಯಾಟಿ(18) ಮಲಗಲದಿನ್ನಿ ಗ್ರಾಮದವನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ ಯುವಕನ ಹೆಸರು ತಿಳಿದುಬಂದಿಲ್ಲ.
- Advertisement -
ಶಾಹೀದ್ ಹುನಗುಂದ(19), ಪ್ರಶಾಂತ ಕುರುಬಗೌಡರ(16), ಹಣಮಂತ ಕುರುಬಗೌಡರ(18), ರಾಯಪ್ಪ ಬಾಗೇವಾಡಿ(24) ಅವರ ಆರೋಗ್ಯ ಚಿಂತಾಜನಕವಾಗಿದೆ. ಈ ನಾಲ್ವರು ಮಲಗದಿನ್ನಿ ಗ್ರಾಮದವರಾಗಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಳಿಕೋಟಿಯಿಂದ ಮುದ್ದೇಬಿಹಾಳಕ್ಕೆ ಬೈಕ್ ಸವಾರರು ಎನ್.ಎಸ್ 200 ಬೈಕ್ ನಲ್ಲಿ ಕುಂಟೋಜಿ ಗ್ರಾಮವನ್ನು ದಾಟಿ ಮುದ್ದೇಬಿಹಾಳಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.
ಕುಂಟೋಜಿ ಗ್ರಾಮದಲ್ಲಿ ಬಸವಣ್ಣನ ಜಾತ್ರೆ ನಿಮಿತ್ಯ ವಿವಿಧ ಮನರಂಜನೆ ಹಾಗೂ ಸ್ಪರ್ಧೆಗಳು ಇದ್ದವು. ಇವುಗಳನ್ನು ನೋಡಲು ಮಲಗಲದಿನ್ನಿ ಗ್ರಾಮದಿಂದ ಟಾಟಾ ಎಸ್ ನಲ್ಲಿ ಬಂದಿದ್ದರು. ಮಲಗಲದಿನ್ನಿ ಯುವಕರು ಶೌಚಾಲಯಕ್ಕೆ ಹೋಗಿ ರಸ್ತೆ ಪಕ್ಕದಲ್ಲಿ ಬರುವಾಗ ಬೈಕ್ ಸವಾರನ ಓವರ್ ಸ್ಪೀಡ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಒಟ್ಟು 6 ಪಾದಚಾರಿಗಳಿಗೆ ಈ ಬೈಕ್ ಗುದ್ದಿದ್ದು, ಬೈಕ್ ಸವಾರರು ಇಬ್ಬರು ಹಾಗೂ ಇಬ್ಬರು ಪಾದಚಾರಿಗಳು ಇಬ್ಬರು ಮೃತಪಟ್ಟಿದ್ದಾರೆ. ಪಾದಾಚಾರಿ ಒಬ್ಬರು ಆರೋಗ್ಯಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಈ ನಾಲ್ವರಲ್ಲಿ ಒಬ್ಬರು ಮೃತಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸ್ ಇಲಾಖೆ ಈ ಮಾಹಿತಿಯನ್ನು ತಳ್ಳಿ ಹಾಕಿದೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಎಸ್.ಪಿ ಎಸ್.ಕೆ ಮಾರಿಹಾಳ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜೀವ್ ತಿಪ್ಪಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.
- Advertisement -

