ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ಭಾರಿ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮೈಬೂಬ
ಗೊಳಸಂಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೀತಿ ದೇಗಿನಾಳ ಅವರು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಬಲರಾಮ ಕಟ್ಟಿಮನಿ
ಅವರು ಅಧಿಕೃತ ಘೋಷಿಸಿದ್ದಂತೆ ಪುರಸಭೆಗೆ ಆಗಮಿಸಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಗೌರವಿಸಿ ಅಭಿನಂದಿಸಿದರು.
ಬಳಿಕ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಯಲ್ಲಿ ಮಾತ್ರ ನಾವು ನಮ್ಮ ನಮ್ಮ ಪಕ್ಷ ನಮ್ಮನಮ್ಮ ಬೆಂಬಲಿಗರು ಎಂಬುದು ಮಾತ್ರ ಇರುತ್ತದೆ, ಗೆದ್ದ ನಂತರ ನಾವು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಟ್ಟಣದ ಎಲ್ಲವಾರ್ಡುಗಳನ್ನು ಅಭಿವೃದ್ಧಿಗಾಗಿ ಶ್ರಮಿಸಬೇಕು.
ಕಳೆದ ಒಂದೂವರೇ ವರ್ಷದಿಂದ ಪುರಸಭೆ ಅಧಿಕಾರವಿಲ್ಲದೇ ಅಭಿವೃದ್ಧಿಯಲ್ಲಿ ಸ್ವಲ್ಪ ಕುಂಟಿತಗೊಂಡಿತ್ತು ಆದರೇ ಸಧ್ಯ ಚುನಾವಣೆಗೊಂಡು ನೂತನ
ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡಾಗಿದೆ, ಆದರೇ ಇನ್ನು ಕೇಲವ ಒಂದೇ ವರ್ಷ ಆಡಳಿತ ಮಾಡುವ ಅವಕಾಶವಿದೇ ನಿಮಗಿರುವ ಸಮಯದೊಳಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಪೂರಕ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಾದರಿಯ ಪಟ್ಟಣ ನಿರ್ಮಾಣದ ಗುರಿ ನಿಮ್ಮದಾಗಬೇಕು. ರಾಜ್ಯದಲ್ಲಿ ನಮ್ಮ ಸರಕಾರ ಬಂದು ಒಂದೂವರೇ ವರ್ಷಗಳು ಕಳೆದುಹೋಗಿವೆ ಆದರೇ ಕೇಂದ್ರದ ಬಿಜೆಪಿ ಸರಕಾರ ದೇಶದಲ್ಲೆಡೆ ಏಕಕಾಲಕ್ಕೆ ಒಂದೆ ಚುನಾವಣೆ ನಡೆಸುವ ಕಾನೂನು ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿವೆ ಹಾಗೇನಾದರೂ ಸುಮಾರು ೬ ವರ್ಷಕ್ಕೆÀ ಶಾಸಕರ ಅವಧಿ ಹೆಚ್ಚಾಗಲಿದೆ ಹಾಗೇನಾದರೂ ಕಾನೂನು ಜಾರಿಗೊಂಡರೆ ಈಗಿರುವ ಮೂರುವರೇ ವರ್ಷದ ಬದಲಾಗಿದೆ ನಾಲ್ಕುವರೆ ವರ್ಷ ಅಧಿಕಾರ ನಮಗೆ
ಸಿಗಲಿದೆ.
- Advertisement -
ಸರಕಾರದಿಂದ ಹೆಚ್ಚೇಚ್ಚು ಅನುದಾನ ತರುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಸಮಯ ಸಿಕ್ಕಂತಾಗುತ್ತದೆ ಜೊತೆಗೆ ಜನರ ವಿಶ್ವಾಸಾರ್ಹ
ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನಿ ಇಲ್ಲಿಯವರೆಗೂ ಯಾವೂದೇ ಕಾನೂನು ಬಾಹಿರವಾಗಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಕಾನೂನಿನ ಅಢಿಯಲ್ಲಿಯೇ ನಾನು ನಡೆದುಕೊಂಡು ಬಂದಿದ್ದೇನೆ, ಯಾರೇ ಯಾಗಲಿ ಹೇಳಿಕೆ ಕೊಡಬೇಕಾದರೇ ಯೋಚನೆಯಿಂದ ಹಿರಿತನದ ಜವಾಬ್ದಾರಿಯಿಂದ ಹೇಳಿಕೆ ಕೋಡಬೇಕು ಯಾರನ್ನೋ ತೇಜೋವಧೆ ಮಾಡಲು ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು ಹೆಚ್ಚಿಗೆ ಯಾವೂದನ್ನು ಬಿಡಿಸಿ ನಾನು ಹೇಳಲಾರೆ ಎಂದು ಟಾಂಗ ನೀಡಿದರು.
————-
ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ರಿಯಾಜಹ್ಮದ ಢವಳಗಿ ಹಾಗೂ ಬಿಜೆಪಿ ಸದಸ್ಯ ಬಸವರಾಜ ಮುರಾಳ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್‌ನಿAದ ಭಾರತಿ ಪಾಟೀಲ ಹಾಗೂ ಪ್ರೀತಿ ದೇಗಿನಾಳ ಹಾಗೂ ಬಿಜೆಪಿಯಿಂದ ಸಹನಾ ಬಡಿಗೇರ ಅವರು ನಾಮಪತ್ರ ಸಲ್ಲಿಸಿದ್ದರು.೧೧ಗಂಟೆಗೆ ನಾಮತ್ರ ಸಲ್ಲಿಕೆ, ೧೧ರಿಂದ ೧೧.೩೦ರವೆಗೆ ನಾಮಪತ್ರ ಪರಿಶಿಲನೆ, ೧೧.೩೦ರಿಂದ ೧೨ಗಂಟೆಯವರಗೆ ನಾಮಪತ್ರ ಹಿಂಪಡೆಯಲು ಅವಕಾಶ ಬಳಿಕ ೧೨.೩೦ರಿಂದ
ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಯಿತು. ೮ಜನ ಬಿಜೆಪಿ ಸದಸ್ಯರು, ೮ ಜನ ಕಾಂಗ್ರೇಸ್ ಸದಸ್ಯರು, ೫ ಜನ ಪಕ್ಷೇತರ ಸೇರಿದಂತೆ ಒಟ್ಟು ೨೩ ಸದಸ್ಯರ ಬಲವನ್ನು ಹೊಂದಿದ ಪುರಸಭೆಗೆ ಸದ್ಯ ೫ ಪಕ್ಷೇತರರು ಹಾಗೂ ೮ ಜನ ಬಿಜೆಪಿ ಸದಸ್ಯರು ಪರಸ್ಪರ ಹೊಂದಾಣಿಕೆಯಿAದ ಪಕ್ಷೇತರ ಅಭ್ಯರ್ಥಿ ರಿಯಾಜ್ಮದ ಢವಳಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಒಂದು ಬಣ ಹಾಗೂ ಸಂಪೂರ್ಣ ಕಾಂಗ್ರೇಸ್ ಪಕ್ಷದ ೮ ಜನ ಸದಸ್ಯರ ಹಾಗೂ ೪೦ ಜನ ಪಕ್ಷೇತರ ಬಲದಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಹಾಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಿಯಾಜಹ್ಮದ ಢವಳಗಿಯವರು ಅವರು ಕಾಂಗ್ರೇಸ್ ಪಕ್ಷದೊAದಿಗೆ ಗುರ್ತಿಸಿಕೊಂಡಿರುವುದು ಮಾತ್ರವಲ್ಲದೇ ಕಾಂಗ್ರೇಸ್ ನ ತಾಲೂಕಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದರಿಂದ ಬ್ಲಾಕ್ ಕಾಂಗ್ರೇಸ್ ಗುರು ತಾರನಾಳ ಅವರನ್ನು ಕಳುಹಿಸಿ ಕೆಲ ಹೊತ್ತು ಆಜ್ಞಾತ ಸ್ಥಳಕ್ಕೆ ಕರೆಯಿಸಿಕೊಂಡ ಶಾಸಕ
ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹಾಗೂ ತಾಲೂಕಾ ಪಟ್ಟಣದ ಹಾಗೂ ತಾಲೂಕಿನ ಬಹುತೇಕ ಕಾಂಗ್ರೇಸ್ ಮುಖಂಡರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ರಿಯಾಜ್ ಹಮ್ಮದ ಡವಳಗಿಯವರ ಮನೋಲಿಸಿ ಮೈಬೂಬ ಗೊಳಸಂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸರ್ವ ಸದಸ್ಯರನ್ನು ಒಪ್ಪಗೆ ಪಡೆದು ೧೬ ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದರಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಪ್ರೀತಿ ದೇಗಿನಾಳ ಅವರು ಉಪಾಧ್ಯಕ್ಷರನ್ನಾಗಿ ಆಯ್ಕೆ
ಗೊಂಡಿದ್ದರಿAದ ಬಿಜೆಪಿ ಸದಸ್ಯ ಬಸವರಾಜ ಮುರಾಳ ಅವರು ನೀಡಿದ್ದ ನಾಮಪತ್ರ ಹಿಂಪಡೆದುಕೊಳ್ಳುವAತೆ ಮಾಡಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನ ಎಂದು ಘೊಷಿಸುವ ಬಿಜೆಪಿಯವರಿಗೆ ಕಾಂಗ್ರೇಸ್ ತAತ್ರಗಾರಿಕೆಯಿAದ ಬಿಜೆಪಿಯವರಿಗೆ ಮುಖಭಂಗ ಅನುಭವಿಸುವಂತಾಯಿತು.
ಕಾರ್ಯಕರ್ತರ ಹರ್ಷೋದ್ಘಾರ ವಿಜಯೋತ್ಸವ
- Advertisement -
ಪುರಸಭೆಯ ನೂತನ ಅಧ್ಯಕ್ಷರಾಗಿ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಅವರು ಆಯ್ಕೆಗೊಳ್ಳುತ್ತಿದ್ದಂತೆ ಕಾಂಗ್ರೇಸ್
ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪಟಾಕಿ ಸಿಡಿಸಿ ಪರಸ್ಪರ ಅಪ್ಪಿಕೊಂಡು ವಿಕ್ಟರಿ ಚಿನ್ಹೇ ತೊರಿಸಿ ಕೈ ಮಾಡಿ ಗುಲಾಲು ಎರಚಿ ಮೈಬೂಬ ಗೊಳಸಂಗಿಯವರನ್ನು ಮೇಲಕ್ಕೆ ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಪಾದಯಾತ್ರೆ ಮೂಲಕ ಪಟ್ಟಣದ
ಪ್ರಮುಖ ಬೀದಿಗಳಿಗ ಮೂಲಕ ಹಾಯ್ದು ಸಂಭ್ರಮಿಸಿದರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಹಿರಿಯ ಮುಖಂಡರಾದ ಸಂಗಮೇಶ ಬಿರಾದಾರ(ಜಿಟಿಸಿ) ಎಂ ಬಿ ನಾವದಗಿ, ಗಫೂರಸಾಬ ಮಕಾಂದಾರ, ಸಿಬಿ ಅಸ್ಕೀ, ಸಿಕಂದರ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರಾದ ವಿರೇಶ ಹಡಲಗೇರಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ಸೋನಾಬಾಯಿ ನಾಯಕ, ರಫೀಕ ದ್ರಾಕ್ಷೀ, ಶಿವು ಶಿವಪುರಿ, ಹಣಮಂತ ಭೋವಿ, ಶಾಹಾಜಾದಬಿ ಹುಣಸಗಿ, ಮಹಮ್ಮದರಫೀಕ ಶಿರೋಳ, ಸದ್ದಾಂ ಕುಂಟೋಜಿ,ಕಾಮರಾಜ ಬಿರಾದಾರ, ಸಂಗಪ್ಪ ಮೇಲಿಮನಿ, ಶ್ರೀಕಾಂತ ಚಲವಾದಿ, ಬಸವರಾಜ ಗೊಳನಾಳ ಸೇರಿದಂತೆ ಅನೇಕರು ಇದ್ದರು.
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವೂದೇ ಅಹಿತಕರ ಗಲಾಟೆಯಾಗದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಹಾಗೂ ಪಿಎಸೈ ಸಂಜಯ ತಿಪ್ಪಾರೆಡ್ಡಿ ಹಾಗೂ ತಾಳಿಕೋಟಿ ಪಿಎಸೈ ರಾಮನಗೌಡ ಸಂಕನಾಳ, ಕ್ರೈಂಪಿ.ಎ.ಸೈ ಆರ್.ಎಸ್ ಬಂಗಿ, ಆರ್.ಎಲ್ ಮನ್ನಾಭಾಯಿ, ನೇತೃತ್ವದ ೬೦ಪೋಲಿಸ್ ಸಬ್ಬಂದಿ ಹಾಗೂ ಒಂದು ಡಿ ಆರ್ ತುಕಡಿಯೊಂದಿಗೆ ಪುರಸಭೆ ಕಚೇರಿಯ ಸುತ್ತಲೂ ಬ್ಯಾರಿಕೇಡ ಅಳವಡಿಸಿ ವ್ಯಾಪಕ ಬಗಿ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಚುನಾವಣೆ ಮಗಿಯುವವರೆಗೂ ಪೋಲಿಸ ಸಿಬ್ಬಂದಿಗಳು ಆಗಾಗ ತಪಾಸಣೆ ನಡೆಸುವ ಮೂಲಕ ಜಾಗೃತಿ ವಹಿಸಿಕೊಂಡಿದ್ದು ಕಂಡುಬAತು.
- Advertisement -
————————–
ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್
ನಾಡಗೌಡ(ಅಪ್ಪಾಜಿ)ಯವರ ಹಾಗೂ ತಾಲೂಕಿನ ಬಹುತೇಕ ಎಲ್ಲ ಕಾಂಗ್ರೇಸ್ ಮುಖಂಡ
ಆಶಿರ್ವಾದಿAದ ಇಂದು ನಾನು ಅಧ್ಯಕ್ಷನಾಗಿದ್ದೇನೆ ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ
ಹೊರೆಸಿದ್ದಾರೆ. ನಾನಿರುವ ಅಧಿಕಾರವಧಿಯಲ್ಲಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ
ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಉದ್ಯಾನವನಗಳು
ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಪಟ್ಟಣದ ಅಭಿವೃದ್ಧಿಗೆ ಟೊಂಕ ಕಟ್ಟಿ
ನಿಲ್ಲುತ್ತೇನೆ. ನಾನು ಅಧ್ಯಕ್ಷನಾಗಲು ಶ್ರಮಿಸಿದ ಶಾಸಕರಿಗೂ, ಎಲ್ಲ ಸ್ನೇಹಿತರಿಗೂ,
ಮುಖಂಡರಿಗೂ, ಪುರಸಭೆ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು
ಸಲ್ಲಿಸುತ್ತೇನೆ.
ಪುರಸಭೆ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ.
—————–

