ಸತ್ಯಕಾಮ ವಾರ್ತೆ ಹುಣಸಗಿ:
ಪಟ್ಟಣದ ವಿವಿಧ ವಾರ್ಡ್ಗಳಿಗೆ ಶನಿವಾರ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿದ ನಂತರ ಮಾತನಾಡಿ, ಪಟ್ಟಣದ ಪ್ರತಿಯೊಂದು ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಪಟ್ಟಣದ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ವಾರ್ಡ್ಗಳ ಸ್ವಚ್ಛತೆ, ಕುಡಿಯುವ ನೀರು ವಿಷಯದಲ್ಲಿ ಜನರಿಗೆ ತಕ್ಷಣ ಸ್ಪಂದಿಸಲು ಅಧಿಕಾರಿಗಳಿಗೆ ಸೂಚಿಸಿದರು.
- Advertisement -
ಹಳ್ಳದ ಆಂಜನೇಯ ದೇವಸ್ಥಾನ ಕಿರು ಸೇತುವೆ ಈಗಾಗಲೇ ಬಿರುಕು ಬಿಟ್ಟಿದು ಅಪಾಯದಲ್ಲಿದೆ. ಭಕ್ತರ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಪ.ಪಂ.ಅನುದಾನದಲ್ಲಿ ಶಾಶ್ವತ ಸೇತುವೆಗೆ ಕ್ರಮಕೈಗೊಳ್ಳಿ ಎಂದು ಪ.ಪಂ.ಮುಖ್ಯಾಧಿಕಾರಿಗೆ ಸೂಚಿಸಿದ ಅವರು ಹೆಚ್ಚಿನ ಅನುದಾನ ಬೇಕಿದ್ದರೆ ಒದಗಿಸುವುದಾಗಿ ತಿಳಿಸಿದರು.
ಚರಂಡಿ ನೀರು ಗದ್ದೆಯಲ್ಲಿ ಹರಿದು ಜನತಾ ಕಾಲೋನಿಯಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಶಾಸಕರ ಗಮನಕ್ಕೆ ನಿವಾಸಿಗರು ತಂದಾಗ ವರದಿ ಆಧಾರಿಸಿ ಸಮಸ್ಯೆ ಪರಿಹರಿಸಲು ಅಧಿಕಾರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ.ಪಂ.ಅಧ್ಯಕ್ಷ ತಿಪ್ಪಣ್ಣ ನಾಯಕ, ಪ.ಪಂ.ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಸದಸ್ಯರಾದ ಶರಣು ದಂಡಿನ್, ಸಿದ್ದು ಮುದಗಲ್, ಕಾಶೀಮ್‌ಸಾಬ ಟೊಣ್ಣೂರು ಹಾಗೂ ಆರ್.ಎಂ.ರೇವಡಿ, ಚನ್ನಯ್ಯಸ್ವಾಮಿ ಹಿರೇಮಠ, ಬಸವರಾಜ ಸಜ್ಜನ್, ಮಹಾದೇವಿ ಬೇನಾಳಮಠ, ಅರುಣ ಮಲಗಲದಿನ್ನಿ ಸೇರಿದಂತೆ ಇತರರಿದ್ದರು.

