ಸತ್ಯಕಾಮ ವಾರ್ತೆ ಬೆಂಗಳೂರು:
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆ ರಾಯಚೂರು ಸಂಸದ ಜಿ ಕುಮಾರ ನಾಯಕ ಅವರು ಬೆಂಗಳೂರಿನಲ್ಲಿರುವ ಖರ್ಗೆಯವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಸಂಸದ ಜಿ ಕುಮಾರ ನಾಯಕ ಅವರು ಸಾರ್ವಜನಿಕರ ನೋವಿಗೆ ಸದಾ ಮಿಡಿಯುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತಿರುವ ಖರ್ಗೆ ಅವರಿಗೆ ಶುಭ ಹಾರೈಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ, ಅವರ ಮಾರ್ಗದರ್ಶನದ ಮೂಲಕ ಕಾಂಗ್ರೆಸ್ ಪಕ್ಷ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುತ್ತೇನೆ ಎಂದರು.
- Advertisement -
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ರವರು ಉಪಸ್ಥಿತರಿದ್ದರು.

