ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲಾದ್ಯಂತ ಕಳಪೆ ಗುಣಮಟ್ಟದ ನೀರಾವರಿ ಸ್ಪಿಂಕ್ಲರ್ ಪೈಪ್ ಗಳನ್ನು ವಿವಿಧ ಕಂಪನಿಯವರು ಪೂರೈಸಿದ್ದು ಈ ಬ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವಾಸುದೇವ ಮೇಟಿ ಬಣದ ಜಿಲ್ಲಾದ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದ್ದಾರೆ.
ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿ ಇಲಾಖೆಯವರ ಮೂಲಕ ಜಿಲ್ಲಾದ್ಯಂತ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್ ಗಳು ಕಳಪೆ ಮಟ್ಟದಿಂದ ಕೂಡಿವೆ ಇದರಿಂದಾಗಿ ಸರ್ಕರಗಳ ಯೋಜನೆಗಳು ರೈತರಿಗೆ ತಲುಪುವ ವೇಳೆಗೆ ಅತ್ಯಂತ ಬ್ರಷ್ಟಾಚಾರ ನಡೆದು ರೈತರಿಗೆ ಕಳಪೆ ಸಾಮಗ್ರಿಗಳು ಪೂರೈಕೆ ಯಾಗುತ್ತಿವೆ.
- Advertisement -
ವಿಶೇಷವಾಗಿ ವಿಶಕರ್ಮ ಡೀಲರ್ಸ್, ಪ್ರಗತಿ ಡೀಲರ್ಸ್ ಮತ್ತು ಕೆ.ಎಸ್.ಆಯ್ ಡೀಲರ್ಸ್ ರವರು ಜಿಲ್ಲೆಯ ರೈತರನ್ನು ವಂಚಿಸುತ್ತಿದ್ದಾರೆ. ಒಮ್ಮೆ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಿದರೆ ಪುನಃ 7 ವರ್ಷಗಳವರೆಗೆ ಸ್ಪಿಂಕ್ಲರ್ ಪೈಪ್ ಗಳನ್ನು ಸರ್ಕಾರ ವಿತರಿಸುವದಿಲ್ಲ. ಈಗ ರೈತರಿಗೆ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್‌ಗಳು ತಿಂಗಳು ಹೆಚ್ಚೆಂದರೆ 1 ವರ್ಷಗಳವರೆಗೆ ಮಾತ್ರ ಬಾಳಿಕೆ ಬರುತ್ತವೆ. ಮುಂದೆ ರೈತರು ಹೊರಗಡೆ ಮಾರುಕಟ್ಟೆಯಲ್ಲಿ ದುಬಾರಿ ಹಣ ಕೊಟ್ಟು ಖರೀದಿ ಮಾಡಬೇಕಾಗುತ್ತದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಕಳಪೆ ಸ್ಪಿಂಕರ್ ಪಂಪ್ ಗಳನ್ನು ತಯಾರಿಸಿ ಕೊಡುತ್ತಿರುವ ಕಂಪನಿಗಳಿAದ ರೈತರಿಗೆ ಭಾರಿ ಮೋಸ ವಂಚನೆಯಾಗುತ್ತಿದೆ.
ಇತ್ತೀಚೆಗೆ ಸಿಂಕರ್ ಪೈಪ್‌ಗಳು ಕಂಪನಿಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಹೊಸದಾಗಿ ಹೆಚ್ಚು ಕಂಪನಿಗಳು ಹುಟ್ಟಿಕೊಳ್ಳುತ್ತಿರುವದರಿಂದ ಕಳಪೆ ಮಟ್ಟದ ಸ್ಪಿಂಕರ್ ಪೈಪ್‌ಗನ್ನು ಸಬ್ಸಿಡಿ ರೂಪದಲ್ಲಿ ಅನ್ನದಾತರಿಗೆ ಒದಗಿಸಲು ಕಂಪನಿಗಳು ವ್ಯವಸ್ಥಿತ ರೀತಿಯಲ್ಲಿ ಲೂಟಿ ಮಾಡಲು ಮುಂದಾಗಿವೆ. ಇದು ಕೆಲವಲ ಯಾದಗಿರಿ ಜಿಲ್ಲೆಗೆ ಸೀಮಿತವಲ್ಲ ಇದು ರಾಜ್ಯಾದ್ಯಂತ ನಡೆಯುತ್ತಿರುವ ಬ್ರಹ್ಮಾಂಡ ಬ್ರಷ್ಟಾಚಾರದ ಕೂಪವಾಗಿದೆ ಎಂದು ಅವರು ದೂರಿದ್ದಾರೆ.
- Advertisement -
ರೈತ ಸಂಪರ್ಕ ಕೇಂದ್ರದಿAದ ಕೃಷಿ ಇಲಾಖೆಯವರು ನೇರವಾಗಿ ರೈತರಿಗೆ ರೈತರು ತಂದ ವಾಹನಗಳಲ್ಲಿ_ ಸರಬರಾಜು ಮಾಡುವುದು ಕಾನೂನು ಬಾಹೀರವಾಗಿದೆ. ಕೃಷಿ ಇಲಾಖೆಯ ನಿಯಮದ ಪ್ರಕಾರ ರೈತರ ಜಮೀನಿಗೆ ತೆರಳಿ ಪೂರ್ವ ಸಮೀಕ್ಷೆ ಮಾಡಿ ನಂತರ ನಿಯಮಾನುಸಾರ ಸ್ಪಿಂಕ್ಲರ್ ಪೈಪ್ ಗಳ ರೈತರ ಹೊಲದಲ್ಲಿ ಅಳವಡಿಸಿ ಜಿ.ಪಿ.ಎಸ್ ಮಾಡಬೇಕು ಮತ್ತೆ ಮುಂದೆ ಮುಂದಿನ ಸಮೀಕ ಮಾಡಿ ಸ್ಪಿಂಕ್ಲರ್ ಪೈಪ್ ಗಳು ಕಾರ್ಯ ನಿರ್ವಹಣೆ ಸಂತೃಪ್ತಿ ಇರುವದನ್ನು ರೈತರಿಂದ ಖಾತಿ ಪಡೆಸಿಕೊಂಡು ಸ್ಪಿಂಕ್ಲರ್ ಪೈಪ್‌ಗಳು ತಯಾರಿಸಿ ಸರಬರಾಜು ಮಾಡಿದ ಕಂಪನಿಗಳಿಗೆ ನಂತ ಬಿಲ್ಲನ್ನು ಪಾವತಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ರಾಜಾರೋಷವಾಗಿ ನಿಯಮ ಉಲ್ಲಂಘಿಸುತ್ತಿರುವ ಅಧಿಕಾರಿಗಳಿಂದಾಗಿ ರೈತರಿಗೆ ಘೋರ ಅನ್ಯಾಯ ಆಗುತ್ತಿದೆ.
ಆದರೆ ಇಲ್ಲಯವರೆಗೂ ಜಿಲ್ಲೆಯ ಎಲ್ಲ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕಂಪನಿಗೆ ಬೇಟಿ ನೀಡಿ ವೈಪ್‌ಗಳು ಕಚ್ಚಾ ವಸ್ತುಗಳ ಬಿ.ಎಸ್.ಬಿ. ಬಿಲೆಗಳನ್ನು ಮತ್ತು ಕಂಪನಿಯವರು ಉಪಯೋಗಿಸುತ್ತಿರುವ ಕಚ್ಚಾವಸ್ತುಗಳ ಮಾದರಿ ಕಲೆ ಹಾಕಿ ಸಿವೆಟ್ ಸಂಸ್ಥೆಗೆ ಕಳುಹಿಸಿರುವ ಉದಾಹರಣೆಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -
ಆಗ್ರಹ:
- 1 ಸ್ಪಿಂಕ್ಲರ್ ಪೈಪ್‌ಗಳು ಕಂಪನಿಗಳು ಮತ್ತು ಕೃಷಿ ಇಲಾಖೆಯವರು ಜಂಟಿಯಾಗಿ ರೈತರ ಸಮ್ಮುಖದಲ್ಲಿ & ಕನ್ಸೆಕ್ಷನ್ ಮತ್ತು ಜೊತೆಯಾಗಿ ರೈತನ ಜೊತೆ ಜಿ.ಪಿ.ಎಸ್ ಸಹಿತ ಭಾವಚಿತ್ರ ತೆಗೆದುಕೊಳ್ಳಬೇಕು.
- 2) ಪೈಪ್‌ಗಳು ಕಂಪನಿಯವರು ಸ್ಪಿಂಕರ್ ಪೈಪ್ ಗಳು ಮತ್ತು ಇತರೆ ಎಲ್ಲ ಸಲಕರಣೆಗಳನ್ನು ಖುದ್ದು ರೈತರ ಹೊಲಕ್ಕೆ ಹೋಗಿ ಅಳವಡಿಸಿ, ವೈಪ್‌ಗಳ ನಿರ್ವಹಣಿ ತೃಪ್ತಿಕರವಾಗಿರುವುದನ್ನು ರೈತರ ಸಮ್ಮುಖದಲ್ಲಿ ಖಾತ್ರಿ ಮಾಡಿಕೊಂಡು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಅರ್ಹ ರೈತನ ಜೊತೆ ಜಿ.ಪಿ.ಎಸ್ ಸಹಿತ ಭಾವಚಿತ್ರವನ್ನು ತೆಗೆದುಕೊಳ್ಳಬೇಕು.
- 3. ಕಂಪನಿಯವರು ಸ್ಪಿಂಕರ್ ಪೈವ್ ಗಳನ್ನು ಅಳವಡಿಸಿ ಸಿಂಕರ್ ಪೈಪ್ ಗಳು ಮತ್ತು ಸಲಕರಣೆಗಳು ತೃಪ್ತಿಕರವಾಗಿ ಕೆಲಸ ನಿರ್ವಹಿಸಿದ ನಂತರ ಪ್ರತಿ ರೈತರ ಹೆಸರಿನಲ್ಲಿ ಪ್ರತ್ಯೇಕವಾಗಿ ಇವೇ ಬಿಲನ್ನು ನಿಯಮಾನುಸಾರ ಕೃಷಿ ಇಲಾಖೆಗೆ ಬದಲಿಸಬೇಕು.
- 4) ಯಾವುದೇ ಕಾರಣಕ್ಕೂ ಕಂಪನಿಯವರು ರೈತ ಸಂಪರ್ಕ ಕೇಂದ್ರಕ್ಕೆ ತಮ್ಮ ತಮ್ಮ ಸ್ವಿಂಕಲ್ ಪೈಪ್ ಗಳ ದಾಸ್ತಾನು ಮಾಡಬಾರದು. ನಿಯಮಾನುಸಾರ ಪ್ರಕಾರ ಅರ್ಹ ರೈತರ ಹೊಲಕೆ, ನೇರವಾಗಿ ಸದರಿ ಕಂಪನಿಯವರು ಸ್ಪಿಂಕ್ಲರ್ ಪೈಪ್ ಗಳನ್ನು ಒದಗಿಸಿ ನಿಯಮಾನುಸಾರ ರೈತರ ಹೊಲದಲ್ಲಿಯೇ ಅಳವಡಿಸಬೇಕು. ಮತ್ತು ಅದರ ನಿರ್ವಹಣೆ ತೃಪ್ತಿಕರವಾಗಿರುವುದನ್ನು ಸದರಿ ರೈತರ ಸಮ್ಮುಖದಲ್ಲಿ ಖಾತ್ರಿ ಪಡಿಸಿಕೊಳ್ಳಬೇಕು. ರೈತ ಸಂಪರ್ಕದವರು ಯಾವುದೇ ಕಾರಣಕ್ಕೂ ಸ್ಪಿಂಕ್ಲರ್ ಪೈನ್‌ಗಳ ದಾಸ್ತಾನು ಮಾಡಬಾರದು ಮತ್ತು ಕಂಪನಿಗಳು ಕೃಷಿ ಇಲಾಖೆ ಅಧಿಕಾರಿ ಎ.ಡಿ.ಎ ಹೆಸರಿನಲಿ ಬಿಲನ್ನು ಪಡೆಯುತ್ತಿರುವುದು ಕಾನೂನು ಬಾಹಿರವಾಗಿದೆ. ಕರ್ನಾಟಕ ಫ್ರಾನ ಪರೆನ್ಸಿ ತನ್ ಪಬ್ಲಿಕ್ ಪ್ರಾಕ್ಯೂರಮೆಂಟ್ ಆಕ್ಸ್ 1000 ಮತ್ತು ಬಿ.ಎಸ್. ಕಾನೂನ ವಿರುದ್ಧವಾಗಿದೆ
- 5) ಕೇಂದ್ರ ಮತ್ತು ರಾಜ್ಯ ಕೃಷಿ ಇಲಾಖೆ ನಿಯಮಾನುಸಾರ ಸ್ಪಿಂಕ್ಲರ್ ಸೈಸ್ ಗಳ ಗುಣಮಟ್ಟ ಪರ್ಲಕ್ಷೆಯಲ್ಲಿ ವಿಫಲವಾದಲ್ಲಿ 1) ಒಂದು ಸಲ ಗುಣಮಟ್ಟ ಪಲಂಕ್ಷೆಯಲ್ಲಿ ವಿಫಲವಾದರೆ (ಎಚ್ಚರಿಕೆ ಪತ್ರ ಮತ್ತು ಸದಲ ಗುಣಮಟ್ಟ ಸಲಪಡಿಸರ್ಬೇಕು), 2) ಎರಡನೇಯ ಪಾಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ( ಪ್ರತಿಶತ 10% ದಂಡ ಮತ್ತು ಎಚ್ಚರಿಕೆ ಪತ್ರ) 3) ಮೂದನೆ ಬಾಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ (ಪ್ರತಿಶತ 25% ದಂಡ ಮತ್ತು ಎಚ್ಚರಿಕೆ ಪತ್ರ) 4) ನಾಲ್ಕನೇಯ ಬಾರಿ ಗುಣಮಟ್ಟ ವಲಂಣೆಯಲ್ಲಿ ವಿಫಲವಾದರೆ ಸದರಿ ಕಂಪನಿಯನ್ನು ಕಪ್ಪು ಪಟ್ಟಿಗೆ ಎಸ್.ಎಲ್.ಎಲ್.ಸಿ ಯಲ್ಲಿ ನಿರ್ಣಯ ಮಾಡುವುದರ ಜೊತೆಗೆ ದಂಡವನ್ನು ಸಹ ಹಾಕಲೇಬೇಕು. ಸ್ಪಿಂಕ್ಲರ್ ಪೈಪ್ ಗಳ ಒಂದೇ ಪ್ಯಾಚ್ ನಲ್ಲಿ ಸಾವಿರಾರು ಸ್ಪಿಂಕ್ಲರ್ ಪೈಪ್ ಗಳ ಸೆಟ್ ಅನ್ನು ಉತ್ಪಾದನೆ ಮಾತ್ತು ಸರಬರಾಗಿರುತ್ತದೆ. ಇದರಲ್ಲಿ ಒಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ, ಉಳಿದೆಲ್ಲವೂ ವಿಫಲವಾಗಿವೆ ಎಂದರ್ಥ ಅಥವಾ ಎಲ್ಲವನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿಲ್ಲ ಎಂದರ್ಥ
- 6) ಕೃಷಿ ಇಲಾಖೆ ಎ.ಡಿ.ಎ ಹೆಸರಿನಲ್ಲಿ ಕಂಪನಿಗಳು ನಕಲಿ ಜಿಲ್ಲುಗಳನ್ನು ಒದಗಿಸುತ್ತಿರುವುದ. ಕಾನೂನಿನ ವಿರುದ್ಧವಾಗಿದೆ. ಒಂದು ವೇಳೆ ಕೃಷಿ ಇಲಾಖೆಯ ಎ.ಡಿ.ಎ ಅಧಿಕಾರಿ ಹೆಸರಿನಲ್ಲಿ ಕಂಪುರಿಗಳು ಬಿಲ್ಲನ್ನು ಮಾಡಿದ್ದೆ ಆದರೆ, ಸದಲ ಕೃಷಿ ಇಲಾಖೆಯು ಜಿ.ಎಸ್.ಟಿ ಯನ್ನು ಕಟ್ಟಬೇಕ ಮತ್ತು ಜಿ.ಎಸ್.ಬಿ ಫೈಲಿಂಗ್ ಸಹ ಮಾಡಬೇಕು. ಆದರೆ ಕೇಂದ್ರ ಮತ್ತು ರಾಜು ಸರಕಾರದ ನಿಯಮಾವಣ ಪ್ರಕಾರ ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ಅಧಿಕಾರಿ ಎ.ಡಿ.ಎ ಹೆಸರಿನಲ್ಲಿ ಬಿಲ್ಲನ್ನು ತೆಗೆದುಕೊಳ್ಳಲು ಅವಕಾಶವೇ ಇದುವುದಿಲ್ಲ
- 7) ರೂ.5000/- ಕ್ಕಿಂತ ಹೆಚ್ಚು ಬೆಲೆ ಬಾಳುವ ಕೃಷಿಗೆ ಸಂಬAಧಪಟ್ಟ ಸಲಕರಣೆಗಳನ್ನು ರೈತ್ಯ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲೇಬಾರದು ಎಂಬ ನಿಯಮವಿದೆ. ಒಂದು ವೇಣಿ ದಾಸ್ತಾನು ಮಾಡಿದ್ರೆ ಆದಲ್ಲಿ ಕೇಂದ್ರ ರಾಜ್ಯ ಸರಕಾರದ ಮತ್ತು ಕರ್ನಾಟಕ ಟಾನ ಪರೆನ್ಸಿ ಇನ್ ಪಬ್ಲಿಕ್ ಪ್ರಾಕ್ಯೂರಮೆಂಟ್ ಆಕ್ಟ್ 1990 ಕಾನೂನುಗಳ ವಿರುದ್ಧವಾಗಿರುತ್ತದೆ.
- 8) ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷೆ
- 9. ಕಳಪೆ ಗುಣಮಟ್ಟದ ಸ್ಪಿಂಕರ್ ಪೈಪ್ ಗಳನ್ನು ವಾಸನೆ ಗ್ರಹಿಸಿದರೆ ಅಥವಾ ಸುಟ್ಟರೆ ಅದರ ಗುಣಮಟ್ಟ ಗೊತ್ತಾಗುತ್ತದೆ. ಅದೇ ಒಳ್ಳೆಯ ಕಚ್ಚಾ ವಸ್ತುಗಳಿಂದ ಉತ್ಪಾದರೆ ಮಾಡಿದ್ರೆ ಆದರೆ ಯಾವುದೇ ಉತಿಯ ವಾಸನೆ ಬರುವುದಿಲ್ಲ ಇದು ಸಾಮಾನ್ಯರಿಗೂ ಸಹ ಗೊತ್ತಾಗುವಂತಹ ವಿಷಯ
ಈ ಮೇಲ್ಕಾಣಿಸಿದ ಅಂಶಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ತನಿಖೆ ಮಾಡಿ ತಪ್ಪಿತಸ್ಸ ಸಿಂಕರ್, ಪೈಪ್ ತಯಾರಿಸುವ ನೋಂದಾಯಿತ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಒಓ ಕಚೇರಿ ಮುಂದೆ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

