ವರದಿ : ಸುರೇಶ ಕೊಟಗಿ.
ಸತ್ಯಕಾಮ ವಾರ್ತೆ ಕಲಬುರಗಿ:
ಅಫ್ಜಲಪುರ ತಾಲೂಕಿನ ಗರೂರ್ (ಬಿ) ಗ್ರಾಮದ ಹಳ್ಳ ಒಂದರಲ್ಲಿ ದೈತ್ಯಾಕಾರದ ಮೊಸಳೆ ಗುರುವಾರ ಬೆಳಗಿನ 3:00ಗೆ ದಿಡೀರನೆ ಪ್ರತ್ಯಕ್ಷವಾಗಿದ್ದ ಹಿನ್ನೆಲೆ ಗ್ರಾಮಸ್ಥರು ಹಾ+ಗೂ ರೈತರು ತುಂಬಾ ಭಯಭೀತರಾದ ಪ್ರಕರಣ ಒಂದು ಜರುಗಿದೆ.
ಗ್ರಾಮಸ್ಥರು ಗುಲ್ಬರ್ಗ ವಿದ್ಯುತ್ ಶಕ್ತಿ ಸರಬರಾಜು ಕಂಪನಿ 33/11 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರ ಗೊಬ್ಬುರ್ ತಾಲೂಕ ಆಫ್ಜಲ್ಪುರ್ ಕಾರ್ಯಾಲಯ ಸಮ್ಮುಖದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಜಮಾಯಿಸಿ ವಿದ್ಯುತ್ ಸರಬರಾಜು ಇಲಾಖೆ ವಿರುದ್ಧ ರಸ್ತೆ ತಡೆ ನಡೆಸಿದರು. ವಿದ್ಯುತ್ ನಿಯಮಿತವಾಗಿ ಸರಬರಾಜು ಆಗದೆ ಇದ್ದ ಕಾರಣ ಹೊಲಗಳಲ್ಲಿ ರಾತ್ರಿ ಕತ್ತಲಲ್ಲಿ ನೀರಿಗಾಗಿ ಕೆಲಸ ಮಾಡಬೇಕಾಗುತ್ತದೆ.ಇಲಾಖೆಯವರು ಸರಬರಾಜು ಸಮಯ ರೈತರ ಗಮನಕ್ಕೆ ತರದೆ ಬದಲಾಯಿಸುವುದರಿಂದ ರೈತರಿಗೆ ಅನಾನುಕೂಲ ಹಾಗೂ ತೊಂದರೆ ಯಾಗುವುದು ಕಟ್ಟಿಟ್ಟ ಬುತ್ತಿ.
- Advertisement -
ಈ ಸಂಬಂಧ ಗ್ರಾಮಸ್ಥರು ಹಾಗೂ ರೈತರು ಎತ್ತಿನ ಬಂಡಿಯಲ್ಲಿ ಬಂಧಿಸಿದ ಮೊಸಳೆ ಸಮೇತ ಉಪಕೇಂದ್ರಕ್ಕೆ ಆಗಮಿಸಿ ಚಳುವಳಿಗೆ ಧುಮುಕಿದರು. ಸುದ್ದಿ ತಿಳಿದ ಗಾಣಿಗಪುರ್ ಠಾಣೆಯ ಪಿಎಸ್ಐ ರಾಹುಲ್ ಘಟನಾ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಸ್ಥಿತಿ ಬಿಗಡಾಯಿಸದಂತೆ ಬಂದೋಬಸ್ತ್ ಮಾಡಿದರು ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೋಸಳೆಯನ್ನು ಹಸ್ತಾಂತರಿಸಲಾಯಿತು.
ಕೆಇಬಿ ಇಲಾಖೆಯವರು ವಿದ್ಯುತ್ ಸರಬರಾಜು ಸಮಯ ಶಿಫ್ಟ್ ಬದಲಾಯಿಸಬೇಕಾದರೆ ಮಾಧ್ಯಮದ ಮೂಲಕ ಅಥವಾ ಗ್ರಾಮದಲ್ಲಿ ಡೊಂಗುರ ಹೊಡೆಸಿ ರೈತರ ಗಮನಕ್ಕೆ ತಂದು ಬದಲಾವಣೆ ಮಾಡಬೇಕು ಆದರೆ ಇಲಾಖೆಯ ಜವಾಬ್ದಾರಿ ಅಧಿಕಾರಿಗಳಾದ ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎ ಇ ಇ ಯಾವುದೇ ಮುಂಜಾಗ್ರತೆ ಕ್ರಮವಹಿಸದೆ ಶಿಫ್ಟ್ ಬದಲಾಯಿಸುವುದು ಮಾಡಿದಲ್ಲಿ ಗಮನಕ್ಕೆ ಬಾರದ ರೈತರ ಜೀವಕ್ಕೆ ಅಪಾಯ ಸಂಭವಿಸಿದರೆ ಇದಕ್ಕೆ ಯಾರು ಹೊಣೆಗಾರರು? ಇನ್ನು ಮುಂದೆಯಾದರೂ ಇಲಾಖೆಯವರು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ಸತ್ಯಕಾಮ ಮೂಲಕ ಮನವಿ ಮಾಡಿದ್ದಾರೆ.

