ಸತ್ಯಕಾಮ ವಾರ್ತೆ ಯಾದಗಿರಿ:
ನಿಗದಿತ ಅವಧಿಯಲ್ಲಿ ಕಾಮಗಾರಿಮುಗಿಸಬೇಕು ಮತ್ತು ಗುಣಮಟ್ಟದಲ್ಲಿ ಆಗಬೇಕು. ಈ ಕಟ್ಟಡ ಬಹುಕಾಲ ಬಾಳಿಕೆ ಬರುವಂತೆಯೇ ನಿರ್ಮಿಸಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ರಾಮಸಮುದ್ರದಲ್ಲಿಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ 2023-24 ನೇ ಸಾಲಿನ ಆರ್ ಡಿಪಿಐ ಯೋಜನೆಯಡಿ ಸುಮಾರು 47.79 ಲಕ್ಷ ರೂ.ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಳ್ಳಿಗಳ ರೈತಾಪಿ ವರ್ಗದ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗಬೇಕು. ಇಲಾಖೆ ವೈದ್ಯಕೀಯ ಸೌಲಭ್ಯವಿರುವ ವಾಹನಗಳೊಂದಿಗೆ ವೈದ್ಯರು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ರಾಜ್ಯ ಸರ್ಕಾರ ಕೃಷಿ ಮತ್ತು ಪಶು ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಇದರ ಉಪಯೋಗ ಮಾಡಿಕೊಳ್ಳಬೇಕು ಮತ್ತು ಅಧಿಕಾರಿಗಳು ಸಹ ಸೌಲಭ್ಯಗಳನ್ನು ಕಾಲ,ಕಾಲಕ್ಕೆ ಮುಟ್ಟಿಸಬೇಕೆಂದು ಶಾಸಕರು ಹೇಳಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಂದಮ್ಮ, ಹಿರಿಯ ಮುಖಂಡ ಡಾ.ಶರಣಭೂಪಾಲರಡ್ಡಿ ಪಾಟೀಲ್, ಇಲಾಖೆ ಅಧಿಕಾರಿ ಡಾ.ದೇಶಮುಖ್, ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಈಟೆ, ದೇವೆಂದ್ರಪ್ಪ, ಹಣಮಂತ, ರಾಮು, ಸೇರಿದಂತೆಯೆ ಇತರರಿದ್ದರು.

