ಗುರುಮಠಕಲ್ :— ತಾಲೂಕಿನ ಕೊಂಕಲ್ ಗ್ರಾಮದಲ್ಲಿ ದಿನಾಂಕ 16 .06 .2023 ರಂದು ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಸಾಕಿನ್ ಕೊಂಕಲ ಗ್ರಾಮ ಈತನ ಮೃತ ದೇಹ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ದೊರೆತಿದ್ದರಿಂದ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮೃತನ ಅಕ್ಕ ಕಾಶಮ್ಮ ಗಂಡ ರಾಜು ಕುಡ್ಲೂರು ಸಾಕಿನ್ ತೊಟ್ಟೂರ್ ಇವರ ಫಿರ್ಯಾದಿನ ಮೇರೆಗೆ ಇವರ ತಮ್ಮನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುಡಿಆರ್ ಸಂಖ್ಯೆ 08/2023 ಕಲಂ 174( ಸಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.
ಯಾದ್ಗೀರ್ ಪೊಲೀಸ್ ಅಧೀಕ್ಷಕರು ಹಾಗೂ ಉಪವಿಭಾಗ ಡಿಎಸ್ಪಿ ಯವರ ಘನ ಮಾರ್ಗದರ್ಶನದಲ್ಲಿ ದೌಲತ್ ಎನ್ಕೆ ಗುರುಮಿಟ್ಕಲ್ ಠಾಣೆ ಇವರ ನೇತೃತ್ವದಲ್ಲಿ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ್ ವಿಶ್ವನಾಥ್ ರೆಡ್ಡಿ ದೇವೇಂದ್ರ ನಾಗೇಂದ್ರ ರೆಡ್ಡಿ ರಹೀಮ್ ಮೊಹಮ್ಮದ್ ಶರೀಫ್ ನರಸರೆಡ್ಡಿ ಸಾಹೇಬ್ ರೆಡ್ಡಿ ಅಶೋಕ್ ಮತ್ತು ರಾಮಲಿಂಗಪ್ಪ ಇವರನ್ನೊಳಗೊಂಡ ತಂಡವನ್ನು ರಚಿಸಿದರು.
ಸಾರಾಂಶ :- ಪ್ರಕರಣದ ಜಾಲವನ್ನು ಹಿಡಿದು ವ್ಯಾಪಕ ತನಿಖೆ ಕೈಕೊಂಡು ದಿನಾಂಕ್ 21.07.2023 ರಂದು ಮೃತನ ಹೆಂಡತಿ ಅನಿತಾ ಗಂಡ ಕಾಶಪ್ಪ ಸಾಕಿನ್ ಕೊಂಕಲ್ ಮತ್ತು ನಾಗರಾಜ್ ಅಲಿಯಾಸ್ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿ ಇವರಿಬ್ಬರನ್ನು ದಸ್ತಗೀರ್ ಮಾಡಿ ವಶಕ್ಕೆ ಪಡೆದುಕೊಂಡು ವ್ಯಾಪಕ ತನಿಖೆಗೊಳಪಡಿಸಿದಾಗ ಇವರಿಬ್ಬರು ಸೇರಿ ದಿನಾಂಕ 15 .6. 2023 ರಂದು ರಾತ್ರಿ ವೇಳೆಯಲ್ಲಿ ಕಾಶಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಸಿನಿಮಯ ಶೈಲಿಯಲ್ಲಿ ಆತನ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ನಂತರ ಸಾಕ್ಷಾಧಾರಗಳನ್ನು ನಾಶಪಡಿಸಿದ ನಂತರ ನಾಗರಾಜ್ ತನ್ನ ಮೋಟರ್ ಸೈಕಲ್ ಮೇಲೆ ಶವ ವನ್ನು ತೆಗೆದುಕೊಂಡು ಹೋಗಿ ಕೊಂಕಲ್ ಗ್ರಾಮದ ಸೀಮೆಯಲ್ಲಿರುವ ಹೊಲಕ್ಕೆ ಸಾಗಿಸಿ ಗಿಡವೊಂದಕ್ಕೆ ಕಾಶಪ್ಪನೆ ಸ್ವತಃ ನೇಣು ಹಾಕಿಕೊಂಡು ವೃತ್ತಪಟ್ಟಿರುವಂತೆ ಸೀನ್ ಕ್ರಿಯೇಟ್ ಮಾಡಿ ಹೆಣವನ್ನು ತೂಗಿ ಹಾಕಿದ್ದಾಗಿ, ತನಿಖೆ ಯಿಂದ ತಿಳಿದು ಬಂದಿದೆ. ಈ ಕೊಲೆಗೆ ಅನಿತಾ ಮತ್ತು ನಾಗರಾಜನ ಅನೈತಿಕ ಸಂಬಂಧ ಇರುವದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಸದರಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗೀರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
- Advertisement -

