ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸದರ ದರ್ವಾಜ ನಗರದ ನುಸ್ಸರ್ತ ತಂದೆ ಮೈಹಿಬೂಬ ಕುರೇಶಿ ಕಾಣೆಯಾದ ಮಹಿಳೆ 2024ರ ನವೆಂಬರ್ 12ರ ಮಂಗಳವಾರ ರಂದು ಬೆಳಿಗ್ಗೆ ಮನೆಯಿಂದ ಊಟ ಮಾಡಿ ಹೊರಗಡೆ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ ಹಿನ್ನೆಲೆ ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ಅವರು ತಿಳಿಸಿದ್ದಾರೆ.
ಮನೆಯಲ್ಲಿ ಊಟ ಮಾಡಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಮ್ಮ ಅಕ್ಕ ಶಮಿಬೇಗಂ ಇವರ ಮನೆಗೆ ಊಟಕೊಟು ಬರಲು ನಮ್ಮ ತಾಯಿ ಕಳಿಸಿದ್ದು, ಇನ್ನೂ ಸಂಜೆ 6 ಗಂಟೆಯಾದರು ಇನ್ನೂ ಮನೆಗೆ ಬಂದಿರುವುದಿಲ್ಲ, ಅಂತ ನಮ್ಮ ಅಕ್ಕ ಶಮೀಬೇಗಂ ಇವರಿಗೆ ಪೋನ್ ಮಾಡಿ ವಿಚಾರಿಸಲಾಗಿ ನುಸ್ಸರ್ತ ನಮ್ಮ ಮನೆಗೆ ಇವತ್ತು ಬಂದಿರುವುದಿಲ್ಲ, ಅಂತ ತಿಳಿಸಿದಳು. ಆಗ ನಾನು ನಮ್ಮ ಅಕ್ಕ ಶಮೀಬೇಗಂ ನಮ್ಮ ತಾಯಿ ಎಲ್ಲಾರು ಗಾಬರಿಯಾಗಿ ಯಾದಗಿರಿ ನಗರದಲ್ಲಿ ಹುಡುಗಾಡಲಾಗಿ ಸಿಗದ ಕಾರಣ ನಮ್ಮ ಸಂಬAಧಿಕರಿಗೆ ನುಸ್ಸರ್ತ ಇಮ್ಮಲ್ಲಿಗೆ ಬಂದಿರುವ ಬಗ್ಗೆ ವಿಚಾರಿಸಲಾಗಿ ಬಂದಿರುವುದಿಲ್ಲ ಅಂತ ತಿಳಿಸಿದರು, ನಾವು 2024ರ ನವೆಂಬರ್ 12 ರಿಂದ ಇಲ್ಲಿಯ ವರೆಗೆ ನುಸ್ಸರ್ತಳು ಹುಡಿಕಾಡಿಲಾಗಿ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ಬಂದಿರುವುದಿಲ್ಲ, ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ಫರ‍್ಯಾದಿ ಸಲ್ಲಿಸಿದ್ದು, ಇರುತ್ತದೆ.
ಮಹಿಳೆಯ ಚಹರೆ ಪಟ್ಟಿ 25 ವರ್ಷ ಇದ್ದು, ಅಂದಾಜು 5 ಫೀಟ್ ಎತ್ತರ ಇದ್ದು, ನುಸ್ಸರ್ತ ಇವಳಿಗೆ ಮಾನಸಿಕ ಅಸ್ವಸಂತ್ತಾಳಾಗಿದ್ದಳು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಮಹಿಳೆಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಯಾದಗಿರಿ ನಗರ ಠಾಣೆಗೆ ಅಥವಾ ಯಾದಗಿರಿ ಮೊ.ನಂ.8147108970 ಕರೆ ಮಾಡಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

