ಅಪರಿಚಿತ ವ್ಯಕ್ತಿ ಸರ್ಕಾರಿ ಅಧಿಕಾರಿ, ನೌಕರರಿಗೆ ಹೆದರಿಸಿ ವಂಚನೆ:
ಸತ್ಯಕಾಮ ವಾರ್ತೆ ಯಾದಗಿರಿ :
ಅಪರಿಚಿತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ, ನೌಕರರ ಹೆಸರು ಮೊಬೈಲ್ ಸಂಖ್ಯೆಗಳನ್ನು ತಿಳಿದುಕೊಂಡು, ಮೊ.ನಂ.9156540734 ಹಾಗೂ ಇತರೆ ನಂಬರಗಳಿಂದ ಕರೆ ಮಾಡಿ ವಂಚನೆ ಮಾಡುತ್ತಿದ್ದಾನೆ ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಆ್ಯಂಟನಿ ಜಾನ್ ಜೆ.ಕೆ ಅವರು ತಿಳಿಸಿದ್ದಾರೆ.
- Advertisement -
ವಂಚನೆ ಮಾಡುವ ಅಪರಿಚಿತ ತಾನು ಡಿ.ಎಸ್.ಪಿ ಲೋಕಾಯುಕ್ತ ಬೆಂಗಳೂರು, ಕಲಬುರಗಿ, ಬೀದರ, ಅಥವಾ ಯಾದಗಿರಿ ಎಂದು ಬಿಂಬಿಸಿಕೊಂಡು ಸರ್ಕಾರಿ ಅಧಿಕಾರಿ, ನೌಕರರಿಗೆ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ಇದೆ ಎಂದು ತಿಳಿಸಿ ತನ್ನನ್ನು ಕಾಣುವಂತೆ ನಿಗದಿತ ಸ್ಥಳಕ್ಕೆ ಬರಲು ತಿಳಿಸಿ ಅಲ್ಲದೆ ಗೂಗಲ್ ಪೇ ಅಥವಾ ಪೋನ್ ಪೇ ಅಥವಾ ಅಕೌಂಟ ನಂಬರಿಗೆ ಮೂಲಕ ಹಣ ಹಾಕಲು ಬೆದರಿಕೆ ಹಾಕುತ್ತಿರುವದು ಅಲ್ಲದೇ ಸರ್ಕಾರಿ ಅಧಿಕಾರಿಯವರಿಗೆ ಒಂದು ವೇಳೆ ತಾನು ತಿಳಿಸಿದ ಸ್ಥಳಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಲೋಕಾಯುಕ್ತ ರೇಡ್ ಅಥವಾ ಟ್ಯಾಂಪ್ ಮಾಡುತ್ತೇವೆ ಅಂತಾ ಹೆದರಿಸುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ.
ಕಾರಣ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿ, ನೌಕರರಿಗೆ ಈ ಮೂಲಕ ಗಮನಕ್ಕೆ ಮೇಲ್ಕಂಡಂತೆ ಈ ರೀತಿಯಾಗಿ ಯಾವುದೇ ಫೋನ್ ಕರೆ ಮಾಡಿ ಲೋಕಾಯುಕ್ತ ಹೆಸರಿನಲ್ಲಿ ನಿಮ್ಮನ್ನು ಹೆದರಿಸುತ್ತಿದ್ದರೆ, ಅದನ್ನು ನಿಮ್ಮ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು ತಕ್ಷಣದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಈ ಬಗ್ಗೆ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಯಾದಗಿರಿ ಮೊ.ನಂ.9364062529, 08473 253802ಗೆ ಮಾಹಿತಿ ಸಲ್ಲಿಸಲು ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

