
*ಸತ್ಯಕಾಮ ವಾರ್ತೆ ಯಾದಗಿರಿ:*
ಶಹಾಪುರ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಮಿನಾಕ್ಷಿ ಎಂಬುವವರು ಗುತ್ತಿಗೆದಾರರಿಂದ 14ಸಾವಿರ ರೂ ಲಂಚವನ್ನು ರಾಜಾರೋಷವಾಗಿ ಪಡೆದಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಂಡಿದೆ.
ಕಳೆದ ನಾಲ್ಕೈದು ದಿನಗಳಯಿಂದಷ್ಟೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದೂ, ತಾಲೂಕು ಪಂಚಾಯಿತಿ ಕಚೇರಿಯೊಳಗೆ ದ್ವಿತೀಯ ದರ್ಜೆ ಸಹಾಯಕಿ ಗುತ್ತಿಗೆದಾರರು ಮಾತುಕತೆ ನಡೆಸಿ 14ಸಾವಿರ ರೂಪಾಯಿ ಹಣ ನೀಡಿರುವ 6ನಿಮಿಷ 50 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ವಿಡಿಯೋದಲ್ಲಿ ಸರ್ ಗೆ 3% ಎಂದು ಹೇಳಲಾಗಿದ್ದು ಆ ಸರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತಾ. ಪಂಚಾಯತಿಯಲ್ಲಿ ಕಾಮಗಾರಿ ಟೆಂಡರ್ ಪಡೆಯಬೇಕಾದರೆ 4% ಲಂಚ ಅಧಿಕಾರಿಗಳ ಜೇಬಿಗೆ ತುಂಬಿಸಬೇಕಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳತ್ತಿದ್ದಾರೆ.
- Advertisement -

