ಜನಪ್ರತಿನಿಧಿಗಳು, ಜೆಸ್ಕಾಂ ಅಧಿಕಾರಿಗಳು ಅವಘಡ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವರೇ?
*ಸತ್ಯಕಾಮ ವಾರ್ತೆ ಯಾದಗಿರಿ:*
ಜಿಲ್ಲೆಯಲ್ಲಿ ಅನದಿಕೃತ ಕೇಬಲ್ ಗಳ ಹಾವಳಿ ಮಿತಿ ಮೀರಿದ್ದು, ಕಳೆದ ಶನಿವಾರ ಸತ್ಯಕಾಮ ಜಿಲ್ಲೆಯಲ್ಲಿ ಅನಧಿಕೃತ ಕೇಬಲ್ ಮಾಫಿಯಾ. ಜಿಯೋ ಹೊರತುಪಡಿಸಿ ಇನ್ನುಳಿದ ಕೇಬಲ್ ಗಳು ಅನದಿಕೃತವೆಂದು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾಗಿ ನಾಲ್ಕೈದು ಐದು ದಿನ ಕಳೆದರೂ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಧಿಕಾರಿಯಾಗಲಿ, ನಗರಸಭೆ ಆಯುಕ್ತರಾಗಲಿ(ಪ್ರ), ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಿದ್ದಾರೆ..?
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಮ್ಮ ಪ್ರತಿನಿಧಿ ಜಿಲ್ಲಾಧಿಕಾರಿ ಡಾ. ಸುಶೀಲಾ. ಬೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದಕ್ಕೆ ಕಾರಣವೇನಿರಬಹುದು.?
- Advertisement -
ಕಾನೂನು ಬದ್ಧವಾಗಿ ಒಎಫ್‌ಸಿ ಅಳವಡಿಕೆಗೆ ನಿರ್ದಿಷ್ಟ ಶುಲ್ಕಗಳನ್ನು ಪಾವತಿಸದೆ, ಅನುಮತಿ ಪಡೆಯದೇ ಕೇಬಲ್ ಗಳನ್ನು ಅಳವಡಿಸಲಾಗಿದೆ. ಕೇಬಲ್ ಗಳಿಂದ ನಗರದ ಸೌಂದ ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆಯೇ ವಿನಾ ಇದರಿಂದ ಸರ್ಕಾರದ ಬೊಕ್ಕಸ ತುಂಬಬೇಕಿದ್ದ ಲಕ್ಷಾಂತರ ರೂಪಾಯಿ ಗುಳುಂ ಆಗುತ್ತಿದೆ.
ನಗರದಲ್ಲಿ ಇತ್ತಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಪಾದಚಾರಿ ಮಾರ್ಗದಲ್ಲಿ ಮರಗಳು, ಕಂಬಗಳು ಜೊತೆಗೆ ಒಎಫ್‌ಸಿ, ಫೋನ್, ಟಿ.ವಿ ಹೀಗೆ ವಿವಿಧ ಕೇಬಲ್‌ಗಳು ನೆಲಕ್ಕೆ ಬಿದ್ದಿವೆ. ಕೆಲವು ಕಡೆ ತುಂಡಾಗಿ ಬಿದ್ದಿದ್ದರೆ, ಇನ್ನು ಕೆಲವೆಡೆ ಕೈಗೆಟುಕುವ ಅಂತರದಲ್ಲಿವೆ. ಕೆಲವು ಕಡೆ ವಿದ್ಯುತ್ ಕಂಬಗಳಲ್ಲಿನ ಕೇಬಲ್ ಬಂಡಲ್ ಗಳು ಜೋತುಬಿದಿದ್ದು,
ರಸ್ತೆ ಮೇಲೆ ವಾಹನ ಸವಾರರು ಸಂಚರಿಸುವಾಗ ಯಾವ ವಾಹನ/, ವ್ಯಕ್ತಿಯ ಮೇಲೆ ಕೇಬಲ್‌ಗಳು ಬೀಳುತ್ತವೆಯೋ ಹೇಳಲಾಗದು.
ನಾಗರಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಧಿಕಾರಿಗಳು ಹಾಗೂ ಜನ್ರತಿನಿಧಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ, ಪ್ರಮುಖವಾಗಿ ವಿದ್ಯುತ್ ಕಂಬದಲ್ಲಿನ ವಿಷಯಕ್ಕೆ ಸಂಬAಧಿಸಿದAತೆ ಜೆಸ್ಕಾಂ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು, ವಿದ್ಯುತ್ ಕಂಬದಿAದ ಸ್ವಲ್ಪ ವ್ಯತ್ಯಾಸವಾದರೂ ಜೀವಹಾನಿ ಸಂಭವಿಸುವ ಅಪಾಯವಿರುತ್ತದೆ. ಇನ್ನೂ ನಿರ್ಲಕ್ಷö್ಯವಹಿಸಿದಿದಲ್ಲಿ ಅದಕ್ಕೆ ಇಲಾಖೆಯೇ ಭಾರಿ ಬೆಲೆತೆತ್ತ ಬೇಕಾಗುತ್ತದೆ!
ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಕಠಿಣ ಕ್ರಮ ವಹಿಸಿದರೆ ಮಾತ್ರ ಕೇಬಲ್ ಮಾಫಿಯಾವನ್ನು ನಿಯಂತ್ರಿಸಲು ಸಾಧ್ಯ. ಜನಜೀವನಕ್ಕೆ ತೊಂದರೆಯಾಗುವAತೆ ಕೇಬಲ್ ಅಳವಡಿಸಿದವರಿಗೆ ಶಿಕ್ಷೆಯಾದಾಗ ಮಾತ್ರ ಸಿಕ್ಕಸಿಕ್ಕಲ್ಲಿ ಕೇಬಲ್ ಅಳವಡಿಸುವುದು ಕಡಿಮೆಯಾಗಲಿದೆ. ಜನರು ದೂರುತ್ತಾರೆಂಬ ಕಾರಣಕ್ಕೆ ನಾಮಕೇವಾಸ್ತೆಗೆ ಅದನ್ನು ಪರಿಶೀಲನೆ, ನೋಟಿಸ್‌ಗಳು ನೀಡಿ ಕೈತೊಳೆದುಕೊಂಡು ಕುಳಿತಲ್ಲಿ ಅಕ್ರಮ ನಿಯಂತ್ರಿಸುವುದು ಕಷ್ಟ ಎಂಬುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ,
ಅವಘಡ ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು,ಜನಪ್ರತಿನಿಧಿಗಳು ದುರ್ಘಟನೆ ನಡೆದಾದ ಮೇಲೆ ಎಚ್ಚೆತ್ತುಕೊಳ್ಳುವವರಾ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡಿದೆ, ಇನ್ನು ಯಾವಾಗ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ.
- Advertisement -

