ಜಿಯೋ ಹೊರತು ಪಡಿಸಿ ಇನ್ನುಳಿದ ಕೇಬಲ್ ಗಳು ಅನಧಿಕೃತ
ಸತ್ಯಕಾಮ ವಾರ್ತೆ ಯಾದಗಿರಿ:
ನಗರದ ರಸ್ತೆ, ಪಾದಚಾರಿ ಮಾರ್ಗ, ಮರ, ವಿದ್ಯುತ್ ಕಂಬ, ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಖಾಸಗಿ ಕೇಬಲ್‌ಗಳು ಮೀನಿನ ಬಲೆಯಂತೆ ವ್ಯಾಪಿಸಿ ನಾಗರಿಕರಿಗೆ ಅಪಾಯ ತಂದೊಡ್ಡಿರುವ ಕಪ್ಪು ಬಣ್ಣದ ಕೇಬಲ್‌ಗಳು ಅನಧಿಕೃತವಾಗಿವೆಂದು ಗೊತ್ತಿದ್ದರೂ ಕೂಡ ಆಡಳಿತ ನಡೆಸುವವರು ಮಾತ್ರ ಇದರ ಬಗ್ಗೆ ಮೌನವಹಿಸಿದ್ದಾರೆ.
ಹೌದು ಈ ಬಗ್ಗೆ ನಗರಸಭೆ ಹಾಗೂ ಜೆಸ್ಕಾಂ ಕಚೇರಿಗೆ ಯಾದಗಿರಿ ನಗರದಲ್ಲಿ ಓಎಫ್‌ಸಿ ಕೇಬಲ್, ಇಂಟರನೆಟ್ ಕೇಬಲ್, ಡಿಷ್ ಟಿವಿ ಕೇಬಲ್, ಫೈಬರ್ ಕೇಬಲಗಳು ಅಳವಡಿಸಲು ಇರುವ ಗೈಡ್ ಲೈನ್ಸ್‌ಗಳ ಪತ್ರದ ಪ್ರತಿ ಹಾಗೂ ಅನುಮತಿ ಪಡೆದವರ ವಿವರಗಳನ್ನು ನೀಡುವಂತೆ ಮಾಹಿತಿ ಹಕ್ಕು ಅಧಿನಿಯಮದ ಅಡಿ ಕೋರಿದ ಮಾಹಿತಿಗೆ ಉತ್ತರ ನೀಡಿದ ಜೆಸ್ಕಾಂ ಹಾಗೂ ನಗರಸಭೆ, ಜಿಲ್ಲೆಯಲ್ಲಿ ಅಧಿಕೃತವಾಗಿ ಇಲಾಖೆಗೆ ಹಣ ಪಾವತಿ ಮಾಡಿದ್ದು ಕೇವಲ ಒಂದೇ ಒಂದು ಕಂಪೆನಿ ಅದೂ ಜಿಯೋ ಮಾತ್ರ ಇನ್ನುಳಿದ ಯಾವುದೇ ಕಂಪನಿಯು ಪರವಾನಿಗೆ ಪಡೆದಿಲ್ಲ ಎಂದು ಉತ್ತರಿಸಿವೆ.
- Advertisement -
ಜಿಲ್ಲೆಯಲ್ಲಿ ಒಎಫ್‌ಸಿ ಕೇಬಲ್ ಅಕ್ರಮವಾಗಿ ಹರಡಿಕೊಂಡಿದ್ದೂ. ಸರ್ಕಾರದ ಇಲಾಖೆಗಳನ್ನು ನಿಯಂತ್ರಿಸುವ ಮಾಫಿಯಾಗಳಲ್ಲಿ ಈ ಒಎಫ್‌ಸಿ ಕೇಬಲ್ ಮಾಫಿಯಾ ಕೂಡ ಒಂದು. ಹೀಗಾಗಿಯೇ ಅಧಿಕಾರಿಗಳು ಅನಧಿಕೃತ ಕೇಬಲ್ ತೆರವುಗೊಳಿಸಲು ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯ ತೋರುತ್ತಿಲ್ಲ.
ಟೆಲಿಕಾಂ ಸೇವಾ ಕಂಪನಿಗಳು 4 ರಿಂದ 6 ಕಿ.ಮೀ ಉದ್ದದ ಒಎಫ್‌ಸಿ ಕೆಬಲ್ ಗೆ ಅನುಮತಿ ಪಡೆದು ಐದು ಪಟ್ಟು ಅಧಿಕ ಡಕ್ಟ್ ಅಳವಡಿಸಿ ಲಕ್ಷಾಂತರ ರೂ. ಶುಲ್ಕ ವಂಚಿಸುತ್ತಿವೆ. ಒಂದು ಸಂಸ್ಥೆಯು ಜಿಲ್ಲೆಯಲ್ಲಿ ಕೇಬಲ್ ಅಳವಡಿಕೆಗೆ ಅನುಮತಿ ಪಡೆದರೆ, ಇತರೆ ಮೂರ್ನಾಲ್ಕು ಸಂಸ್ಥೆಗಳು ಅಕ್ರಮವಾಗಿ ಅದರಲ್ಲಿ ಕೇಬಲ್ ಹಾಕುತ್ತಿವೆ. ಈ ಅಕ್ರಮವನ್ನು ಪರಿಶೀಲಿಸುವ ತಾಂತ್ರಿಕ ನೈಪುಣ್ಯತೆ ಅಧಿಕಾರಿಗಳಿಗಿಲ್ಲ ಈ ಕಾರಣದಿಂದ್ದಾಗಿ ಅಕ್ರಮ ಕಬಲ್ ಮಾಫಿಯಾ ಜಾಲ ವಿಸ್ತಾರಣೆಗೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಮೊಬೈಲ್ ಟವರ್‌ಗಳು, ಬ್ರಾಂಡ್‌ಬ್ಯಾಂಡ್ ಸೇವೆಗಳು ಸಂಪೂರ್ಣವಾಗಿ ಒಎಫ್‌ಸಿಯನ್ನೇ ಅವಲಂಬಿಸಿವೆ. ದೂರ ಸಂಪರ್ಕ ಸೇವೆ ಒದಗಿಸುವ ಸೇವಾದಾರರದ್ದು ಒಂದು ವಿಧವಾದರೆ, ಟಿವಿ ಸೇವೆಯೊಂದಿಗೆ ಅಂತರ್ಜಾಲ ಸೇವೆ ಒದಗಿಸುವರದ್ದು ಇನ್ನೊಂದು ವಿಧ. ಐಎಸ್‌ಪಿ ಸೇವೆ ಒದಗಿಸುವವರು ಒಎಫ್‌ಸಿಯನ್ನು ಮರದಿಂದ ಮರಕ್ಕೆ, ಕಂಬದಿಂದ ಕಂಬಕ್ಕೆ ಎಳೆದು, ರಸ್ತೆಗಳಲ್ಲಿ ತೋರಣ ಕಟ್ಟಿದ್ದಾರೆ!
ಇನ್ನೂ ಒಎಫ್‌ಸಿ ಮಾರ್ಗದ ಶುಲ್ಕದಿಂದ ತಪ್ಪಿಸಿಕೊಳ್ಳಲು ಹಲವು ಸಂಸ್ಥೆಗಳು ಅನುಮತಿ ಪಡೆದಿರುವ ಕಂಪನಿಯೊಂದಿಗೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಹಣ ಉಳ್ಳವರ ಪಾಲಾಗುತ್ತಿದೆ.
ನಗರದಲ್ಲಿ ಬಹುತೇಕ ಕಂಬಗಳು ಕೇಬಲ್‌ನಿಂದ ಆವರಿಸಿದ್ದೂ. ಈ ಕಂಬಗಳಲ್ಲಿ ರಿಪೇರಿ ಇದ್ದರೆ ಲೈನ್‌ಮನ್‌ಗೆ ಕಂಬವೇರುವುದು ತ್ರಾಸದಾಯಕ. ಇದರಿಂದ ಅವಘಡ ಸಾಧ್ಯತೆಯೂ ಹೆಚ್ಚು, ತುರ್ತು ಸಂದರ್ಭಗಳಲ್ಲಿ ಲೈನ್‌ಮನ್ ಗಳು ಕಂಬವೇರಲು ಹರಸಾಹಸ ಪಡಬೇಕಾಗಿದೆ.
- Advertisement -
ನಗರದಲ್ಲಿ ಅಕ್ರಮವಾಗಿ ಒಎಫ್ ಸಿ, ಕೇಬಲ್ ಹಾಕುವಾಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ಅಕ್ರಮ ಒಎಫ್ ಸಿ ಕೇಬಲ್ ಗಳ ಹಾವಳಿ ತಪ್ಪಿಸಬಹುದು. ಆದರೆ ಅಧಿಕಾರಿಗಳು ಈ ಭ್ರಷ್ಟ ವ್ಯವಸ್ಥೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಆಪ್ಟಿಕಲ್ ಕೇಬಲ್ ಹಾವಳಿಗೆ ಕಡಿವಾಣ ಹಾಕಲಾಗುತ್ತಿಲ್ಲ.
ಕೂಡಲೇ ಸಂಬದಪ್ಪಟ್ಟ ಅಧಿಕಾರಿಗಳು ಅನಧಿಕೃತ ಕೇಬಲ್ ಮಾಫಿಯ ಕಡೆ ಗಮನಹರಿಸಿ ಕಡಿವಾಣ ಹಾಕುವರಾ ಎಂಬುದನ್ನ ಕಾದುನೋಡಬೇಕಿದೆ.

