- ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ
ಸತ್ಯಕಾಮ ವಾರ್ತೆ ಯಾದಗಿರಿ:-
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ನೈತಿಕ ಹೊಣೆ ಹೊತ್ತು, ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ ಹಿನ್ನೆಲೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದು, ನವರ ತಲೆದಂಡವಾದರೆ ಸಾಲದು, ಈ ಹಗರಣದ ಕಿಂಗ್ ಪಿನ್ ಯಾರು ಎಂಬುದು ಬಯಲಾಗಬೇಕು, ಆತ್ಮಹತ್ಯೆ ಮಾಡಿಕೊಂಡ ಕಚೇರಿ ಅಧೀಕ್ಷಕ ಚಂದ್ರಶೇಖರ ಕುಟುಂಬಕ್ಕೆ ನ್ಯಾಯ ಸಿಗಬೇಕು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅನುಮಾನವಿದೆ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
- Advertisement -
ಕೇವಲ ಭ್ರಷ್ಟಾಚಾರ ಅಲ್ಲ ಇದು, ಬುಡಕಟ್ಟು ಸಮುದಾಯಗಳ ಹಣವನ್ನು ಕಳ್ಳತನ ಮಾಡಿದ ಸರ್ಕಾರವಿದು, ಇದರ ಕಿಂಗ್ ಪಿನ್ ಯಾರು ಎಂಬುದು ತನಿಖೆಯಾಗಬೇಕು ಎಂದಿದ್ದಾರೆ.
ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಯಂಕ್ಷಿಂತಿ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಹೈದರಾಬಾದ್ ಮೂಲದ ವಿವಿಧ ಕಂಪೆನಿಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಹಣ ಡ್ರಾ ಮಾಡಿ, ಲೋಕಸಭೆ ಚುನಾವಣೆಗೆ ಬಳಸಿದ್ದು ಹಣ ದುರುಪಯೋಗ ಆಗಿದೆ ಹಾಗೂ ಬಾರ್‌ನಲ್ಲಿ ಕುಳಿತು ಕುಡಿದ ಬಿಲ್ ನಿಗಮದ ಹಣ ನೀಡಿ ದುರುಪಯೋಗ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ, ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ,ಪರುಶುರಾಮ ಕುರಕುಂದಿ,ಮೆಲಪ್ಪ ಗುಳಗಿ,ದೆವಿಂದ್ರನಾಥ ನಾದ,ವೆಂಕಟರಡ್ಡಿ ಅಬ್ಬೆತುಮಕೂರು,ಬಸವರಾಜ ವಿಭೂತಿಹಳ್ಳಿ,ದೇವರಾಜ ನಾಯಕ, ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸ್ವಾಮಿದೇವ ದಾಸನಕೇರಿ, ಶ್ರೀದೇವಿ ಶೆಟ್ಟಿಹಳ್ಳಿ,ಮಂಜುನಾಥ ಜಡಿ, ವೀಣಾ ಮೋದಿ, ಶಂಕರ್ ಕರಣಗಿ,
ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಶಹಾಪುರ ಮಂಡಲ ಅಧ್ಯಕ್ಷ ಚಂದ್ರಶೇಖರ ಕಂಬಾರ, ಮಲ್ಲಿಕಾರ್ಜುನ ಕಟ್ಟಿಮನಿ,ಕರಬಸಪ್ಪ ಬಿಳಾರ, ಗೋವಿಂದಪ್ಪ ಖಾನಾಪುರ, ಶಿವು ಕೊಂಕಲ,ರಾಜು ಸ್ವಾಮಿ ಅಲಂಪಲ್ಲಿ, ಪ್ರಭಾವತಿ ಕಲಾಲ,ಭೀಮಬಾಯಿ ಶೆಂಡಿಗಿ, ಮಲ್ಲು ಕೋಲಿವಾಡ,ಸಾಬು ಚಂಡ್ರಕಿ ಸೇರಿದಂತೆ ಅನೇಕರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -

