ಸತ್ಯಕಾಮ ವಾರ್ತೆ ಯಾದಗಿರಿ:
ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಗೂಡೂರು ಗ್ರಾಮದ ಮದ್ಯದ ಹೊರಹೊಲಯದ ಹೊಲದ ಹತ್ತಿರ ಫೆಬ್ರವರಿ, 13, 2024 ರಲ್ಲಿ ಆಟೋರಿಕ್ಷಾದಲ್ಲಿ ನಡೆದ ಅಪಘಾತದಲ್ಲಿ ಮಹಿಳೆ ಕಮಲಮ್ಮ ಗಂಡ ನಾರಾಯಣ ಮಲಗಣಿ ಸಾ.ಮಡ್ಡಿಪೇಟ ಸಾವಿಗೆ ಕಾರಣವಾದ ಆರೋಪಿ ಮಹಾದೇವ ತಂದೆ ಬೀಗಯ್ಯ ಗುಲ್ಲೆ ಎಂಬಾತನಿಗೆ ಯಾದಗಿರಿಯ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳು ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ರಾಹುಲ್ ಚಾಂಬಾರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ರಾಯಚೂರು ತಾಲೂಕಿನ ಚಂದ್ರಬAಡಾ ಗ್ರಾಮದವರಾಗಿದ್ದು, ಆರೋಪಿತನ ಟಂಟA ಆಟೋವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿ, ಆಟೋ ಮೇಲೆ ನಿಯಂತ್ರಣ ತಪ್ಪಿ ತಿರುವು ಮತ್ತು ಇಳಿಜಾರು ರಸ್ತೆಯ ಮೇಲೆ ಪಲ್ಟಿ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಕಮಲಮ್ಮ ಈಕೆಗೆ ಎಡ ಕಿವಿಗೆ ಹರಿದ ರಕ್ತ ಗಾಯ, ಎಡಗಡೆ ತಲೆಗೆ ಭಾರಿ ಒಳಪೆಟ್ಟಾಗಿ ಬಾವು ಬಂದು, ಎಡಗೈ ರಟ್ಟೆಗೆ ಭಾರೀ ತರಚಿದ ರಕ್ತಗಾಯ ಮತ್ತು ಹೊಟ್ಟೆಯಿಂದ ಟೊಂಕದವರೆಗೆ ಗಾಯಗಳಾದಾಗ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.
ಸದರಿ ಅಪಘಾತ ನಡೆಸಿ ಆರೋಪಿತನು ಆಟೋವನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿರುತ್ತಾನೆ. ಆಟೋ ಓಡಿಸಲು ಅನುಮತಿ ಪತ್ರವು ಇರುವುದಿಲ್ಲ, ನೋಂದಣಿ ಮಾಡಿಸಿರುವುದಿಲ್ಲ. ಆಟೋದಲ್ಲಿ ಆಸನದ ಅರ್ಹತೆ ಮೀರಿ ಹೆಚ್ಚಿನ ಜನರನ್ನು ಸಾಗಿಸಿದ್ದರಿಂದ ಆರೋಪಿತನು ಅಪರಾಧ ಎಸಗಿರುತ್ತಾನೆ ಎಂದು ಪ್ರಕರಣದ ತನಿಖೆ ಹಾಗೂ ಸಾಕ್ಷಾಧಾರಗಳಿಂದ ಅಪರಾಧ ದೃಢಪಟ್ಟಿರುತ್ತದೆ.
ಆದ್ದರಿಂದ ಆರೋಪಿತನ ವಿರುದ್ಧ 279, 337, 304 (ಎ) ಐಪಿಸಿ ಮತ್ತು 187, 192 (ಎ), 177 ಐ.ಎಮ್.ವಿ ಆ್ಯಕ್ಟ್ ದೋಷಾರೋಪಣೆ ಪತ್ರವನ್ನು ಸೈದಾಪುರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಎಎಸ್‌ಐ ಬಾಲಚಂದ್ರ ಮತ್ತು ಗುರುಮಿಠಕಲ್ ತನಿಖಾಧಿಕಾರಿ ಸಿಪಿಐ ಪಿ.ಕೆ ಚೌಧರಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಸದರಿ ಪ್ರಕರಣವು ಅಧಿವಿಚಾರಣೆ ಮಾಡಿ ಆರೋಪಿ ಮಾಡಿರುವ ಆರೋಪ ಸಾಬೀತಾಗಿದ್ದರಿಂದ ಈತನ ವಿರುದ್ದ ಕಲಂ 279 ರ ಅಡಿಪಾಯ ಅಪರಾಧಕ್ಕಾಗಿ 1 ತಿಂಗಳ ಸಾಧಾರಣ ಶಿಕ್ಷೆ ಮತ್ತು 1 ಸಾವಿರ ದಂಡ. 337 ರ ಅಡಿಯಲ್ಲಿ ಅಪರಾಧಕ್ಕಾಗಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 500 ರೂ ದಂಡ, 304(ಎ) ಐಪಿಸಿ ಅಪರಾಧಕ್ಕಾಗಿ 1 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ಸದರಿಜುಲ್ಮಾನೆ ಪಾವತಿಸಲು ತಪ್ಪಿದ್ದಲ್ಲಿ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು, 187 ಐ ಎಮ್ ವಿ ಆ್ಯಕ್ಟ್ ಅಪರಾಧಕ್ಕಾಗಿ 5 ನೂರು ರೂಪಾಯಿ ದಂಡ ವಿಧಿಸಿದ್ದು, ಜುಲ್ಮಾನೆ ತಪ್ಪಿದಲ್ಲಿ 1 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುನಂದ ಆರ್ ಅವರು ವಾದವನ್ನು ಮಂಡಿಸಿರುತ್ತಾರೆ.

Total Visits: 25

All time total visits: 13319