ಬೀದರ :—– ನಗರದ ನೂತನ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಗಣೇಶ್ ಮೈದಾನದ ಫೂಟ್ ಪಾತ್ ಮೇಲೆ ಗಟ್ಟಿಯಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪ್ರಕರಣವೊಂದು ದಾಖಲಾದ 24 ಗಂಟೆ ಒಳಗಾಗಿ ಬೀದರ್ ಪೊಲೀಸರು ಸಿನಿಮಯ ರೀತಿಯಲ್ಲಿ ಪ್ರಕರಣದ ಬೆನ್ನುಹತ್ತಿ ಆರೋಪಿಯನ್ನು ಬಂಧಿಸಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರದೀಪ್ ಗುಂಟಿಯವರ ಮಾರ್ಗದರ್ಶನದಲ್ಲಿ ಮಹೇಶ್ ಮೇಘಣ್ಣನವರ್ ಹೆಚ್ಚುವರಿ ಎಸ್ಪಿ, ಚಂದ್ರ್ಕಾಂತ್ ಪೂಜಾರಿ ಹೆಚ್ಚುವರಿ ಅಧೀಕ್ಷಕರು, ಶಿವಾನಂದ ಗೌಡ ಪಾಟೀಲ್ ಉಪಾಧೀಕ್ಷಕರು, ಇವರ ಮುಂದಾಳತ್ವದಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪಿಎಸ್ಐ ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ನಿಂಗಪ್ಪ, ಭರತ್, ಗಾಂಧಿ ಗಂಜ್ ಠಾಣೆ ಸಿಬ್ಬಂದಿ ನವೀನ್, ಗಂಗಾಧರ್, ಸುಧಾಕರ್ ರವರನ್ನೊಳಗೊಂಡ ತಂಡವೊಂದನ್ನು ರಚಿಸಿ ಕಾರ್ಯ ಪ್ರವೃತ್ತರಾಗಿ ಅತ್ಯಂತ ಚಾಣಾಕ್ಷತನದಿಂದ ವೈಜ್ಞಾನಿಕ ಸಾಕ್ಷಿಗಳ ನೆರವು ಮತ್ತು ಪೊಲೀಸ್ ಬಾತ್ಮಿದ್ದಾರರಿಂದ ಮಾಹಿತಿ ಸಂಗ್ರಹಿಸಿ ಕೇವಲ 24 ಗಂಟೆ ಒಳಗಾಗಿ ಇಬ್ಬರು ಆರೋಪಿತರನ್ನು ಬೀದರ್ ವಿದ್ಯಾನಗರ ಕಾಲೋನಿ ಯಿಂದ ದಸ್ತಗಿರ್ ಮಾಡಿ ನ್ಯಾಯಾಂಗ ಬಂಧನ ಕೊಪ್ಪಿಸಲಾಗಿದೆ. ಪೊಲೀಸರ ಈ ಕಾರ್ಯಕ್ಷಮತೆಗೆ ಸಾರ್ವಜನಿಕರ ಪ್ರಶಂಸನೆಗಳು ಹರಿದು ಬಂದಿದ್ದು, ಈ ಪ್ರಯುಕ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ವರದಿಯಾಗಿದೆ.

