ಸತ್ಯಕಾಮ ವಾರ್ತೆ ಗುರುಮಠಕಲ್:
ವೈಭವಯುತವಾಗಿ ವೈಕುಂಠ ಏಕಾದಶಿ ಹಿನ್ನೆಲೆ ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ಹೇಳಿದರು.
ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಏಕಾದಶಿ ಪವಿತ್ರ ದಿನವಾಗಿದ್ದು, ಇದರ ಮಹತ್ವವನ್ನು ಜನರಿಗೆ ಸಾರುವ ಉದ್ದೇಶದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ವೈಕುಂಠದ್ವಾರವನ್ನು ಯಾದಗಿರಿ ಅಪಾರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
- Advertisement -
ಜ.೧೦ರಂದು ಬೆಳಿಗ್ಗೆ ೫;೩೦ ಸುಪ್ರಭಾತ ಸೇವೆ ನಂತರ ೯ಗಂಟೆಗೆ ವೈಕುಂಠದ್ವಾರ ಉದ್ಘಾಟನೆ. ಸಂಜೆ ೬ಗಂಟೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಲಕ್ಷಿö್ಮ ತಿಮ್ಮಪ್ಪ ದೇವರಿಗೆ ಪಲ್ಲಕಿ ಸೇವೆ ಬಳಿಕ ಮಹಾಮಂಗಳ ಆರತಿ ನೆರವೇರಲಿದೆ ಎಂದು ವಿವರಿಸಿದರು.
ಹಿಂದುಗಳ ಪವಿತ್ರ ದಿನವಾದ ಏಕಾದಶಿಯಂದು ಗುರುಮಠಕಲ್, ಯಾದಗಿರಿ, ರಾಯಚೂರ, ಬೀದರ ಸೇರಿದಂತೆ ನೆರೆಯ ತೆಲಂಗಾಣದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ತಿಳಿಸಿದರು.

