ಸತ್ಯಕಾಮ ವಾರ್ತೆ ಕಲಬುರಗಿ:
ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಇದು ಆಕ್ಸಿಜನ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ ಎಂದು (DHO)ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ರವಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿನ ಆಕ್ಸಿಜನ್ ಪ್ಲ್ಯಾಂಟ್ ನಲ್ಲಿ ಸೋರಿಕೆಯಾಗುತ್ತಿದ್ದೆ ಎಂದು ಪಟ್ಟಣದಾದ್ಯಂತ ಸುದ್ದಿ ಹಬ್ಬಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಶುಕ್ರವಾರವಷ್ಟೆ ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ವೈದ್ಯಕೀಯ ದ್ರವ ಆಮ್ಲಜನಕ ಭರ್ತಿ ಮಾಡಿದೆ. ಟ್ಯಾಂಕ್ ಸಂಪೂರ್ಣ ಭರ್ತಿಯಾದ ನಂತರ ಅದರಲ್ಲಿನ ಆಂತರಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಎ,ಬಿ,ಸಿ ಎಂಬ ವಾಲ್ ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಇದಕ್ಕೆ ಯಾರು ಆತಂಕ ಪಡಬೇಕಿಲ್ಲ. ಇದು ಎಲ್.ಎಂ.ಓ ಟ್ಯಾಂಕ್ ನಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.
- Advertisement -

