ಸತ್ಯಕಾಮ ವಾರ್ತೆ ಮುದ್ದೇಬಿಹಾಳ:
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಆರಂಭಿಸಲಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಸಿದ್ಧಸಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಚರಣೆಗೆ ಸಮ್ಮತಿ ಪತ್ರ ನೀಡುವಂತೆ ಹೈಕೋರ್ಟ್ ಆದೇಶಿಸಿದ್ದರೂ ರಾಜ್ಯದ ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಿಯ ಎಂದು ಮಾಜಿ ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ರೈತರಿಗೆ ಕಬ್ಬು ನುರಿಅಲು ಅನುಕೂಲ ಆಗಲೆಂದು ಪ್ರಾರಂಭವಾಗಿದೆ. ಈ ಕಾರ್ಖಾನೆ ಆರಂಭ ಮಾಡಿದರೆ ಈ ಭಾಗದ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. ಇದರಿಂದ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಉತ್ತಮ ಬೆಂಬಲ ಬೆಲೆ ಸೇರಿ ಹಲವು ಅನುಕೂಲ ಆಗಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ವಾಯುಮಾಲಿನ್ಯದ ನೆಪ ಹೇಳಿ ಕಾರ್ಖಾನೆ ಬಂದ್ ಮಾಡಿಸಿದೆ. ಸಿದ್ಧಸಿರಿ ಕಾರ್ಖಾನೆಯಿಂದ ಮಾತ್ರ ಮಾಲಿನ್ಯ ಆಗುತ್ತಿದೆಯಾ? ಸಿಮೆಂಟ್ ಕಾರ್ಖಾನೆಗಳು, ಪವರ್ ಪ್ಲಾಂಟ್‌ಗಳು ಸೇರಿ ಇತರೆ ಕಂಪನಿಗಳಿಂದ ಮಾಲಿನ್ಯ ಆಗುತ್ತಿಲ್ಲವೇ ಎಂದು ದೇಸಾಯಿ ಅಭಿಮಾನಿಗಳು ಪ್ರಶ್ನಿಸಿದರು.
- Advertisement -
ಕಾರ್ಖಾನೆ ಆರಂಭಿಸಿದರೆ 2 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಸಾವಿರಾರು ರೈತರಿಗೆ ಲಾಭವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಮರು ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಿದೆ ಎಂದರು.
ಇದು ಕೇವಲ ರಾಜಕೀಯ ಪ್ರೇರಿತ. ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ರೈತರು ಗಮನಿಸುತ್ತಿದ್ದಾರೆ. ಕಾರ್ಖಾನೆ ಬಂದ್ ಆದ ಪರಿಣಾಮ ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ಈ ಕೂಡಲೇ ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ಕೋರ್ಟ್‌ನ ಆದೇಶ ಪಾಲಿಸಿ ಅನುಮತಿ ನೀಡಬೇಕು ಎಂದು ಪ್ರಭುಗೌಡ ದೇಸಾಯಿ ಅಭಿಮಾನಿಗಳು ಆಗ್ರಹಿಸಿದರು.
- Advertisement -
ಸಿಎಂ ಸಿದ್ದರಾಮಯ್ಯ ಯಾರಿಗೂ ಬಗ್ಗದೆ, ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರು ನಿಮ್ಮ ಅಧಿಕಾರಿಗಳಿಗೆ ರಾಜಕೀಯ ಮಾಡುವುದನ್ನು ಬಿಟ್ಟು ಯತ್ನಾಳವರ ಕಾರ್ಖಾನೆ ಪ್ರಾರಂಭ ಮಾಡಲು ಸೂಚನೆ ನೀಡಿ, ಪ್ರಾರಂಭ ಮಾಡಲು ಅನುಮತಿ ನೀಡದೆ ಇದ್ದರೆ ನಿಮ್ಮ ವಿರುದ್ಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುದ್ದೇಬಿಹಾಳ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಭುಗೌಡ ದೇಸಾಯಿ ಅಭಿಮಾನಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಪ್ರಕಾಶ್ ಗೌಡ ಪಾಟೀಲ್ ಶಿವು ದಡ್ಡಿ, ಶಶಿಧರ ಹಿರೇಮಠ, ಬಸಯ್ಯ ಹಿರೇಮಠ ಇದ್ದರು.
ಯಾವುದೇ ಸರ್ಕಾರವಿರಲಿ, ಎಲ್ಲ ಸರ್ಕಾರಗಳು ರೈತರ ಹಿತಕ್ಕಾಗಿ ಇದೆ. ಆದರೇ ಅದೆಲ್ಲವನ್ನು ಬಿಟ್ಟು ರೈತರ ಕೃಷಿ ಜೀವನದ ಜತೆಗೆ ಆಟವಾಡುವಲ್ಲಿ ಸರ್ಕಾರ ಸಾಮಥ್ರ್ಯ ತೋರುತ್ತಿದೆ. ಪಕ್ಷಬೇಧ ಮರೆತು ಸರ್ಕಾರ ರೈತರ ಹಿತದೃಷ್ಟಿಯನ್ನು ಕಾಪಾಡಬೇಕೆಂದರೆ, ಸಿದ್ದಸಿರಿ ಇಥೆನಾಲ್ ಘಟಕ ಪ್ರಾರಂಭಗೊಳಿಸಿಬೇಕು.
- Advertisement -
ಭೀಮನಗೌಡ ಟಕ್ಕಳಕಿ

