ಸತ್ಯಕಾಮ ಬೆಂಗಳೂರು :
ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಆಯೆಷಾ ಖಾನಂ ಅವರನ್ನು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪದಾಧಿಕಾರಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆಯೆಷಾ ಖಾನಂ ಅವರು, ಸರಕಾರವು ಮಹಿಳೆಯನ್ನು ಗುರುತಿಸಿ ನೇಮಕ ಮಾಡಿರುವುದು ನನಗೆ ಹೆಮ್ಮೆ ತಂದಿದೆ. ಎಲ್ಲರ ಸಹಕಾರದಿಂದ ಮಾಧ್ಯಮ ಅಕಾಡೆಮಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪಕ್ಷಾತೀತವಾಗಿ ಎಲ್ಲರೂ ನನಗೆ ಅಭಿನಂದಿಸುತ್ತಿರುವುದು ನನಗೆ ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ವೈ.ಪದ್ಮಾ ನಾಗರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನ್ ಸಾಬ್ ಮೋಮಿನ್, ರಾಜ್ಯ ಕಾರ್ಯದರ್ಶಿ ಅನೂಪಕುಮಾರ, ಬೆಂಗಳೂರು ವಿವಿ ಪ್ರೊ.ಡಾ.ಸಮತಾ ದೇಶಮಾನೆ , ಮಲ್ಲಮ್ಮ ನುಡಿ ಸಂಪಾದಕ ರಮೇಶ ರೆಡ್ಡಿ ಬೀದರ ಸೇರಿದಂತೆ ಇನ್ನಿತರರು ಇದ್ದರು.
- Advertisement -

