ತಪ್ಪು ಹ್ಯಾಶ್ ಟ್ಯಾಗ್ : ಸಾರ್ವಜನಿಕರಲ್ಲಿ ಗೊಂದಲ
ಮೇಲಧಿಕಾರಿಗಳಿಗಿಂತ ಈತನೇ ದೊಡ್ಡವನಾ.?
ಕಲಬುರ್ಗಿ: ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸರ್ಕಾರದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಪೋಸ್ಟಗಳಲ್ಲಿ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುವುದರಿಂದ ಸಾರ್ವಜನಿಕರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.
- Advertisement -
ಹೌದು ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ರಚಿಸಲಾಗಿರುವ DIPR Kalaburgi ಪೇಜ್ ನಲ್ಲಿ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಅಪ್ಲೋಡ್ ಮಾಡುವ ವೇಳೆ ಇಲಾಖೆಯ ಸಿಬ್ಬಂದಿ ರವಿ ಮೀರಾಸ್ಕಾರ್ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಉದ್ಭವಗೊಂಡಿದೆ.
ಅದೇನೆಂದರೆ ರವಿ ಮಿರಾಸ್ಕರ್ DIPR Kalaburgi ಪೇಜ್ ನಲ್ಲಿ ದಿನ ನಿತ್ಯ ಅಪ್ಲೋಡ್ ಮಾಡುವ ಪೋಸ್ಟ್ ನಲ್ಲಿ ರವಿ ಮೀರಾಸಕರ್ ಪ್ರಾದೇಶಿಕ ಆಯುಕ್ತರು ಕಲಬುರ್ಗಿ ವಿಭಾಗ ಎಂಬ ಹ್ಯಾಶ್ಟ್ಯಾಗ್ ಕಾಣಿಸುತ್ತದೆ, ಇದು ನೋಡುಗರಿಗೆ ಬೇರೆ ರೀತಿಯ ಸಂದೇಶವನ್ನೇ ರವಾನಿಸುತ್ತದೆ,
ಹಾಗಾದ್ರೆ ಕಲಬುರಗಿ ಇಲಾಖೆಯ ಪ್ರಾದೇಶಿಕ ಆಯುಕ್ತರಾದ್ರು ಯಾರು.?
ಸಿಬ್ಬಂದಿಗಳು ಈ ರೀತಿಯಾಗಿ ತಮ್ಮ ಹೆಸರನ್ನು ಬಳಸಿ ಇಲಾಖೆಯ ಮೇಲಾಧಿಕಾರಿಗಳ ಹ್ಯಾಶ್ಟ್ಯಾಗ್ ಬಳಸಿದಾಗ DIPR ಕಲಬುರಗಿ ವಿಭಾಗದ ಆಯುಕ್ತರು ಇವರೇನಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ, ಇದ್ದರಿಂದ ಇಲಾಖೆಗೆ ಅರ್ಜಿ ಬರೆಯುವವರಿಗೆ ಇದು ತಪ್ಪು ಮಾಹಿತಿ ತಿಳಿಸುತ್ತದೆ ಅಲ್ಲದೆ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ನೋಡುವರಿಗೂ ಕೂಡ ಇಂತಹ ಹ್ಯಾಶ್ಟ್ಯಾಗ್ ತಪ್ಪು ಮಾಹಿತಿ ನೀಡುತ್ತದೆ.
ರವಿ ಮಿರಾಸ್ಕರ್ ಎಂಬತಾ ಪೋಸ್ಟ್ ಮಾಡುವ ವೇಳೆ ಹ್ಯಾಶ್ಟ್ಯಾಗ್ ನಲ್ಲಿ ಅಲ್ಪವಿರಾಮ ಚಿಹ್ನೆ ಬಳಸದೆ ಇಲಾಖೆಯ ಮುಖ್ಯಸ್ಥರ ಸ್ಥಾನದ ಹ್ಯಾಶ್ಟ್ಯಾಗ್ ಬಳಸಿರುವುದರಿಂದ ಈ ಪ್ರಶ್ನೆ ಉದ್ಭವವಾಗಿದೆ.
- Advertisement -
ಇಲ್ಲಿ ಮತ್ತೊಂದು ವಿಷಯವೇನೆಂದರೆ ಸಚಿವರು ಹೆಸರಿನ ಮುಂದೆಯೇ ಮೇಲಾದಿಕಾರಿಗಳ ಹೆಸರು ಬಳಸಬೇಕೆಂಬ ಪರಿಜ್ಞಾನತೆ ಇವರಿಗಿಲ್ವಾ. ಹಾಗಾದ್ರೆ ಮೇಲಾದಿಕಾರಿಗಳಿಗಿಂತ ಇವರೇ ದೊಡ್ಡವರಾ.?
ಓರ್ವ ಸರ್ಕಾರಿ ನೌಕರನು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ನೌಕರರು ಅಂತರ್ಜಾಲದ ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿಯಮಗಳ ಅವಕಾಶಗಳನ್ನು ಮೀರಿ ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ ವ್ಯಕ್ತಪಡಿಸುವುದು ಕಂಡುಬರುತ್ತಿದೆ.
ಮಾಹಿತಿ ಮತ್ತು ಸಂವಹನ ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿ ಕೊಂಡು ಫೇಸ್‌ಬುಕ್, ಟ್ವಿಟರ್, ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ವಾರ್ತಾ ಇಲಾಖೆ ಮುಂದಾಗಿದೆ. ಆದ್ರೆ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸಿ ಮುಂದೆ ಇಲಾಖೆಯ ಹ್ಯಾಶ್ ಟ್ಯಾಗ್ ಬಳಸಿದರೆ ಮೇಲಾಧಿಕಾರಿಗಳಿಗೆ ಇರುವ ಬೆಲೆಯಾದರು ಏನು?
- Advertisement -

