ಸತ್ಯಕಾಮ ವಾರ್ತೆ ಯಾದಗಿರಿ:
ಆಧುನಿಕ ಯುಗದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದು ವಿಶೇಷವಾಗಿದೆ ಇಂತಹ ವಿವಾಹಗಳು ಹೆಚ್ಚಾಗಿ ನಡೆಯುವದರಿಂದ ಬಡತನ ಕುಟುಂಬಗಳಿಗೆ ಹಣ ಉಳಿತಾಯವಾಗಿ ಸಾಲದ ಹೊರೆ ತಪ್ಪುತ್ತದೆ ಎಂದು ಗಂಗಾಧರ ಮಹಾಸ್ವಾಮಿಗಳು ಸದ್ಗುರು ವಿಶ್ವಾರಾಧ್ಯ ಮಹಾ ಸಂಸ್ಥಾನ ಮಠ ಅಬ್ಬೆ ತುಮಕೂರು ಶ್ರೀಗಳು ನುಡಿದರು.
ನಗರದ ಹೈದರಾಬಾದ್ ರಸ್ತೆ ಸಮೀಪದ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಯುವ ಬ್ರಿಗೇಡ್ ಹಾಗೂ ಹರ್ಷವರ್ಧನ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಣಬಿ, ಇವರ ಸಂಯುಕ್ತಾಶ್ರಯದಲ್ಲಿ ನಡೆದ 21 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ಪೋಷಕರು ನಿಶ್ಚಯಿಸಿದ ಮದುವೆಗಳೇ ನಡೆಯುವುದೇ ಕಡಿಮೆಯಾಗಿದೆ ಅಂತದರಲ್ಲಿ ಸಾಮೂಹಿಕ ವಿವಾಹಗಳನ್ನು ಅದು ಉಚಿತವಾಗಿ ಏರ್ಪಡಿಸುವುದು ತುಂಬಾ ಜವಾಬ್ದಾರಿ ಕಾರ್ಯ ಮಾಡುವ ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದು ನುಡಿದರು.
ವೇದಿಕೆಯ ಮೇಲೆ ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ ಶಾಂತ ವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸ ಮಠ ಗುರುಮಠಕಲ್ ಸಾಮೂಹಿಕ ವಿವಾಹ ಎಂದರೆ ಅದು ಸಾಮರಸ್ಯ ಸಾರುವ ವಿವಾಹವಾಗಿವೆ, ಇಂತಹ ವಿವಾಹ ಏರ್ಪಾಟುಗಳು ವಿರಳಾತಿ ವಿರಳವಾಗಿವೆ ವಿವಾಹ ಏರ್ಪಾಟುಗಳು ಉಚಿತವಾಗಿ ಏರ್ಪಡಿಸುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ನುಡಿದರು.
ಮತ್ತೊರ್ವ ಶ್ರೀಗಳಾದ ಶ್ರೀ ಜ್ಞಾನ ಪ್ರಕಾಶ ಸ್ವಾಮಿ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠ ಮೈಸೂರು ಶ್ರೀಗಳು ರಾಜ್ಯದಲ್ಲಿ ಹಿಂದುಳಿದ ಪ್ರದೇಶಗಳ ಪೈಕಿ ಯಾದಗಿರಿ ಜಿಲ್ಲೆಯೂ ಒಂದಾಗಿದ್ದು ಇಂತಹ ಜಿಲ್ಲೆಯಲ್ಲಿ ಇಂತಹ ವಿವಾಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಸಮಾನತೆ ಸಂದೇಶ ಸಾರುವ ಜೋತೆ ಜೋತೆಗೆ ಬಡತನ ನಿರ್ಮೂಲನೆ ಮಾಡುವ ಜೋತೆ ಜೋತೆಗೆ ಬಡ ಕುಟುಂಬಗಳಿಗೆ ಹಣದ ಉಳಿತಾಯವಾಗಿ ತಂದೆ ತಾಯಿಯರಿಗೆ ಇರುವ ಭಾರವನ್ನು ಇಳಿಸುವ ಮಹಾ ಕಾರ್ಯ ಇಲ್ಲಿ ಆಯೋಜಿಸಿರುವ ತಂಡಕ್ಕೆ ಸಲ್ಲುತ್ತದೆ ಎಂದರು.
ಶ್ರೀ ಸಿದ್ದರಾಮ ಶಿವಯೋಗಿಗಳು ಉರಿಲಿಂಗ ಪೆದ್ದಿ ಮಹಾ ಸಂಸ್ಥಾನ ಮಠ ಮುಡುಕುತೊರೆ ಶ್ರೀ ಗಳು ನವ ವಿವಾಹಿತ ವಧು ವರರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿ ಜೋಡಿಗಳಿಗೆ ಶುಭ ಹಾರೈಸಿ ಆಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಚಲನಚಿತ್ರ ನಟ ಚೇತನ್ ಅಹಿಂಸಾ,ಡಿ ಎಸ್ ರಾಜಗೋಪಾಲ್, ರಾಜ್ಯಾಧ್ಯಕ್ಷ ಭೀಮ ಆರ್ಮಿ ಭಾರತ ಏಕ್ತಾ ಮಿಶನ್ ಬೆಂಗಳೂರು, ಜಿಲ್ಲಾ ಗೌರವ ಅಧ್ಯಕ್ಷ ಚಂದ್ರಕಾಂತ ಮಾಸ್ಟರ್,ಸವ್ಯಸಾಚಿ ಡಾ.ಜಿ, ಪರಮೇಶ್ವರ್ ಯುವ ಬ್ರಿಗೇಡ್ ಜಿಲ್ಲಾಧ್ಯಕ್ಷ ಬಸ್ಸು ನಾಟೇಕರ್, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಪ್ರಭು ಬುಕ್ಕಲ್ ರಾಜು ಅಣಬಿ, ಹರ್ಷವರ್ಧನ್ ಗ್ರಾ,ಸೇ,ಸ. ಯುವ ಮುಖಂಡ ಅನೀಲ್ ಕುಮಾರ್ ಹೆಡಿಗಿಮದ್ರಾ, ಸೈದಪ್ಪ ಕೂಲುರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

