ಹುಮ್ನಾಬಾದ :— ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನಬಸಣ್ಣ ಎಸ್ ಎಲ್ ರವರ ದಿವ್ಯ ಮಾರ್ಗದರ್ಶನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಐತಿಹಾಸಿಕ ಗ್ರಾಮ ಜಲಸಂಗಿ ಯಲ್ಲಿ ಮಹಾದೇವ ಮಂದಿರದ ಸಮ್ಮುಖದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಜೂಜಾಟ ನಡೆದಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹುಮನಾಬಾದ್ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಪಿಎಸ್ಐ ಶ್ರೀ ತಿಮ್ಮಯ್ಯ ಬಿಕೆ ಸಿಬ್ಬಂದಿಗಳಾದ ಭಗವಾನ್ ಪ್ರಭುಲಿಂಗ ಸ್ವಾಮಿ ಬಸವರಾಜ್ ಬಾಲಾಜಿ ಸೂರ್ಯಕಾಂತ ಆಕಾಶ್ ವಜೀರ್ ಬಾಬುರಾವ್ ಕೋರೆ ಆಕಾಶ್ ರವರೊಂದಿಗೆ ಗ್ರಾಮಕ್ಕೆ ತೆರಳಿ ಜೂಜುಗಾರರ ಮೇಲೆ ದಾಳಿ ನಡೆಸಿ ಅವರಿಂದ 1,50,000 ರೂಪಾಯಿಗಳನ್ನು,ಅವರು ಬಳಸಿದ್ದ 52 ಇಷ್ಟು ಎಲೆಗಳು ಹಾಗೂ ಆರು ಮೊಬೈಲ್ ಐದು ದ್ವಿಚಕ್ರ ವಾಹನ ಸೇರಿ 4,15,000 ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು 15 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ವರದಿಯಾಗಿದೆ.

