ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರದ ಸುಕ್ಷೇತ್ರ ಅಬ್ದುಲ್ ಭಾಷ ದೇವಾಲಯದ ಬಳಿ ಗುರುವಾರ ಮದ್ಯಾಹ್ನ ಜೂಜುಕೋರರು ಯಾರ ಭಯವಿಲ್ಲದೆ ರಾಜಾರೋಷವಾಗಿ ಜೂಜಾಟದಲ್ಲಿ ತೊಡಗಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೌದು ಇಬ್ರಾಹಿಂಪುರದ ಸುಕ್ಷೇತ್ರ ಅಬ್ದುಲ್ ಭಾಷ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಭಕ್ತಿ ಭಾವದಿಂದ ದೇವರ ಮೊರೆ ಹೋಗುತ್ತಾರೆ. ಕಷ್ಟಗಳನ್ನು ನಿಭಾಯಿಸುವ ಶಕ್ತಿ ನೀಡೆಂದು ಭಕ್ತರು ದೇವರ ಬಳಿ ಅಂಗಲಾಚುತ್ತಾರೆ. ಆದರೆ ಇತ್ತೀಚಿಗೆ ಇಂತಹ ಪುಣ್ಯಕ್ಷೇತ್ರದ ಬಳಿ ಜೂಜಾಕೋರರು ಯಾರ ಭಯವಿಲ್ಲದೆ ಜೂಜಾಟವಾಡುತ್ತಿದ್ದೂ, ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನು ಜೂಜುಕೋರರು ಇಸ್ಪೀಟ್ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದರೆ ಎಂದು ಭಕ್ತರು ಆರೋಪಿಸುತ್ತಿದ್ದಾರೆ.
ಭಗವಂತನ ಸನ್ನಿಧಿ ಅಕ್ರಮ ಚಟುವಟಿಕೆ ತಾಣವಾಗಿರುವುದು ಸರಿಯಲ್ಲ. ಈ ತಾಣಗಳು ವಿಶೇಷವಾಗಿ ದೇವಾಲಯಕ್ಕೆ ಬರುವ ಭಕ್ತರನ್ನು ಕೈಬೀಸಿ ಕರೆಯುತ್ತಿವೆ, ಇದ್ದರಿಂದ ದೇವಾಲಯಕ್ಕೆ ಬಂದ ಭಕ್ತರು ಜೂಜಾಟದಲ್ಲಿ ತೊಡಗಿಕೊಂಡು ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ಇಂತಹ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಪೊಲೀಸರು ಜೂಜಾಟ ತಡೆಯದಿದ್ದರೆ ದೇವಸ್ಥಾನದ ಸ್ಥಳಗಳು ಮುಂದಿನ ದಿನಗಳಲ್ಲಿ ನಾನಾ ಅಕ್ರಮಗಳ ತಾಣವಾಗಿ ಮಾರ್ಪಡುತ್ತವೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
- Advertisement -
ಪೊಲೀಸರು ಇತ್ತ ಗಮನಹರಿಸಿ ಜೂಜಾಟ ನಿಯಂತ್ರಣಕ್ಕೆ ಬ್ರೇಕ್ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

