ಸತ್ಯಕಾಮ ವಾರ್ತೆ ಯಾದಗಿರಿ:
ತುರ್ತು ಪರಿಸ್ಥಿತಿಯಲ್ಲಿ ಕಲ್ಬುರ್ಗಿ, ರಾಯಚೂರು ಮುಖಮಾಡುವ ಪರಿಸ್ಥಿತಿ ಇರುವ ವೇಳೆ ನಗರದಲ್ಲಿ ಸಿಪಾಕಾದೊಂದಿಗೆ ಆರಂಭಿಸಿದ 24*7 ಸೇವೆ ನೀಡುವ ಐಸಿಯು ಸೇವೆ ಹಾಗೂ (ಸುವರ್ಣ ತಾಸುಗಳ) ಗೋಲ್ಡನ್ ಹವರ್ (Golden Hour)ಅವಧಿಯ ಚಿಕಿತ್ಸೆಯಿಂದ ಮೂರು ಅಮೂಲ್ಯ ಜೀವ ಉಳಿದಿವೆ ಎಂದು ಇಲ್ಲಿನ ವಿಬಿಆರ್ ಮುದ್ನಾಳ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೈದ್ಯರಾದ ಡಾ. ಅಮೋಘ ಸಿದ್ದೇಶ್ವರ ನರಸಣಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕದ ಮೊದಲ ಸಿಪಾಕಾ ಜಾಗತಿಕ ಗುಣಮಟ್ಟದ ಐಸಿಯು ಸೇವೆಯ ಸೌಲಭ್ಯ ಆರಂಭಿಸಿದ ನಂತರ ಅನೇಕ ಜನತೆಗೆ ಇದರಿಂದ ಉಪಯೋಗವಾಗಿದೆ.
ಅದರಲ್ಲೂ ವಿಶೇಷವಾಗಿ ಕಳೆದ ತಿಂಗಳೊಪ್ಪತ್ತಿನಲ್ಲಿ ಮೂರು ವಿಶಿಷ್ಟ ಸವಾಲಿನ ಪ್ರಕರಣಗಳು ಯಶಸ್ವಿಯಾಗಿ ನಿಭಾಯಿಸಿ ಜೀವ ಉಳಿಸಿದ ಘಟನೆಗಳು ನಡೆದಿವೆ ಎಂದು ವಿವರಿಸಿದ ಅವರು, ಬೆನ್ನು ಮೂಳೆ ನರ ಅಪ್ಪಚ್ಚಿಯಾಗಿದ್ದ ಪ್ರಕರಣವನ್ನು ಶಸ್ತçಚಿಕಿತ್ಸೆ ಮೂಲಕ ಗುಣಪಡಿಸಿದ್ದಲ್ಲದೇ ಕೇವಲ 6 ತಾಸಿನಲ್ಲಿಯೇ ರೋಗಿ ಐಸಿಯುನಿಂದ ಸಾಮಾನ್ಯ ನಂತೆ ನಡೆದುಕೊಂಡು ಹೋಗುವಂತೆ ಮಾಡಿದ ಪ್ರಕರಣ ಯಶಸ್ವಿಯಾಗಿತ್ತು ಎಂದು ತಿಳಿಸಿದರು.
- Advertisement -
ಎರಡನೇ ಪ್ರಕರಣದಲ್ಲಿ ರೋಗಿ 15 ಬಿಪಿ ಮಾತ್ರೆ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಸಂದರ್ಭದಲ್ಲಿ ತಕ್ಷಣವೇ ಗೋಲ್ಡನ್ ಹವರ್ಸ್ ನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ಕೊಟ್ಟ ಪರಿಣಾಮ ಬಹುತೇಕ ಸತ್ತೇ ಹೋಗಿದ್ದ ವ್ಯಕ್ತಿ 4 ದಿನಗಳಲ್ಲಿ ಬಿಪಿ ಹತೋಟಿಗೆ ತಂದು ಪುನರ್ಜನ್ಮದೊಪಾದಿಯಲ್ಲಿ ಬದುಕಿದ ಪ್ರಕರಣ ದಾಖಲಾಯಿತು ಎಂದು ತಿಳಿಸಿದರು.
ಜೊತೆಗೆ ಹೊಲದಲ್ಲಿ ಕ್ರಿಮಿನಾಶಕ ಸಿಂಪಡನೆ ವೇಳೆ ಅಪಾಯಕಾರಿ ಕ್ರಿಮಿನಾಶಕ ದೇಶ ಸೇರಿದ ಕೆವಲ ಅರ್ಧ ತಾಸಿನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ನೀಡಿದ್ದರಿಂದ ಆ ರೋಗಿಯೂ ಪ್ರಾಣ ಉಳಿಸಿದ ಪ್ರಕರಣ ಯಶಸ್ವಿಯಾಗಿ ನಿಭಾಯಿಸಲಾಯಿತು ಎಂದು ವಿವರಣೆ ನೀಡಿದರು.
ಮೂರು ಪ್ರಕರಣಗಳಿಂದ ಗೋಲ್ಟನ್ ಹವರ್ ಎಂತಹ ಪವಾಡ ಮಾಡುತ್ತದೆ ಎಂಬುದು ನಮ್ಮ ಭಾಗದ ಜನತೆಗೆ ತಿಳಿಸುವ ಅಗತ್ಯತೆ ಮನಗಂಡು ಮಾಧ್ಯಮಗಳ ಮುಂದೆ ಬಂದುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿ ವಿಶೇಷವಾಗಿ ಅಪಘಾತ, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಬರುವ ತುರ್ತು ಸಂದರ್ಭಗಳಲ್ಲಿ ಗೋಲ್ಡನ್ ಹವರ್ ನ ಸದುಪಯೋಗಕ್ಕೆ ಚೆನ್ನೆöÊನ ಸಿಪಾಕಾ ನೆರವಿನೊಂದಿಗೆ ಆರಂಭಿಸಿದ ಐಸಿಯು ನಲ್ಲಿ ಯುಕೆ (ಲಂಡನ್) ನ ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳನ್ವಯ ಕಾರ್ಯನಿರ್ವಹಣೆಯಿಂದಾಗಿ ಅಮೂಲ್ಯ ಮೂರು ಜೀವಗಳು ಉಳಿಸಲು ಸಾದ್ಯವಾಯಿತು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾರುತಿ ಕಲಾಲ್, ಭೀಮು ಹಾಗೂ ಗುಣಮುಖರಾದ ರೋಗಿಗಳ ಕುಟುಂಬದವರು ಇನ್ನಿತರರು ಇದ್ದರು.

