ಕಲಬುರಗಿ : ಆಧಾರ್ ಲಿಂಕ್ ಅಪ್ಡೇಟ ಮಾಡಿಸಲ ಜನರಿಂದ ನಿಗದಿಪಡಿಸಿದಕ್ಕಿಂತ ಜಾಸ್ತಿ ಹಣ ಫಾರಂ ಪೀಸ್ ಎಂದು ಅಲ್ಲಿದ್ದ ಸಿಬ್ಬಂದಿಗಳು ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ ,ಈ ಹಣಕ್ಕೆ ರಸೀದಿ ಕೇಳಿದಕ್ಕೆ ಅವರನ್ನು ಬೈದು ಕಳುಹಿಸುತ್ತಿದ್ದಾರೆ ಹಣ ಕೊಡದಿದ್ದರೆ ಅವರನ್ನು ನಾಳೆ ನಾಡಿದ್ದು ಬನ್ನಿ ಎಂದು ಸತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ನಮ್ಮ ಪ್ರತಿನಿಧಿ ಗುಲ್ಬರ್ಗವನಿಗೆ ಭೇಟಿ ನೀಡಿದಾಗ ಅಲ್ಲಿದ್ದ ಜನರನ್ನು ಸಂಪರ್ಕಿಸಿದಾಗ ಜನರು ಇದು ಸತ್ಯ ಹೀಗೆ ಮಾಡುತ್ತಿರುವುದು ನಿಜ ಎಂದು ಒಪ್ಪಿಕೊಂಡರು. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸತ್ಯ ಅಸತ್ಯ ಬಗ್ಗೆ ತಿಳಿದು ಅಕ್ರಮವಿದ್ದಲ್ಲಿ ಕೂಡಲೇ ಸೂಕ್ತ ಕ್ರಮ ಕೈಗೊಂಡು ಜನರಿಗೆ ಪಾರದರ್ಶಕ ನ್ಯಾಯ ಒದಗಿಸಿ ಆಧಾರ್ ಅಪ್ಡೇಟ್ ಗೆ ಎಷ್ಟು ಶುಲ್ಕ ಇರುತ್ತದೋ ಅಷ್ಟೇ ತೆಗೆದುಕೊಂಡು ರಸೀದಿ ನೀಡಿದರೆ ಸೂಕ್ತ, ಅದಕ್ಕಾಗಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಬದ್ಧವಾದ ವ್ಯವಸ್ಥೆ ಮಾಡಿಸಬೇಕೆಂದು ಸತ್ಯಕಾಮ ಪತ್ರಿಕೆಯ ಮೂಲಕ ಸಾರ್ವಜನಿಕರು ಜಿಲ್ಲಾಡಳಿತಗೆ ಮನವಿ ಮಾಡಿದ್ದಾರೆ

