- ಮೊಹರಂ ಆಚರಣೆಗೆ ಕಳೆ ಹೆಚ್ಚಿಸಿದ ಮುಂಗಾರು ಮಳೆ
- ಉತ್ತಮ ಮಳೆ ಬೆಳೆ ನಿರೀಕ್ಷೆ ತಂದ ಖುಷಿ, ಸರ್ವ ಧರ್ಮಿಯರ ಮೊಹರಂ ಖರೀದಿ ಜೋರು.
- ನಾಲತವಾಡ-ನಾರಾಯಣಪೂರದಲ್ಲಿ ಮೋಹರಂ ನಿಮತ್ತ ಜೋರಾದ ಖರೀದಿ
- ವರದಿ: ಪ್ರೀತಿ ಪಿ ರಾಠಿ
ಸತ್ಯಕಾಮ ವಾರ್ತೆ ನಾರಾಯಣಪೂರ:
ಈ ವರ್ಷ ಆರಂಭದಲ್ಲೇ ಮುಂಗಾರು ಮಳೆ ರೈತರಲ್ಲಿ ಆಶಾ ಭಾವನೆ ಮೂಡಿಸುವ ಮೂಲಕ ಈಗಾಗಲೇ ಬಿತ್ತನೆಯೂ ಮುಗಿದಿದೆ, ಅತ್ತ ಉತ್ತಮ ಫಸಲೂ ಸಹ ಚಿಗುರೊಡೆದಿದ್ದು ರೈತರಲ್ಲಿ ಮತ್ತಷ್ಟು ಖುಷಿ ತಂದಿದೆ, ಈಗಾಗಿ ಅಣ ಯಾಗಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆಯ ಹಿನ್ನಲೆಯಲ್ಲಿ ನಾರಾಯಣಪೂರ ವ್ಯಾಪ್ತಿಯ ಹಳ್ಳಿಗಾಡು ಪ್ರದೇಶದಲ್ಲಿ ಹಬ್ಬದ ಆಚರಣೆಯ ಸಾಮಾನುಗಳ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿದೆ ನಡೆದಿದೆ.
ಖರೀದಿ ಜೋರು: ನಾರಾಯಣಪೂರ ಸೇರಿದಂತೆ ಗಡಿ ಭಾಗದ ನಾಲತವಾಡ ಪಟ್ಟಣದ ಪ್ರಮುಖ ಮಾರುಕಟ್ಟೆ ಬಸವೇಶ್ವರ, ಕನಕ ವೃತ್ತ ಹಾಗೂ ಗಣೇಶ ವೃತ್ತದ ಬಳಿ ಸಿದ್ದಗೊಂಡಿರುವ ಮೋಹರಂ ಅಲಾಯಿ ದೇವರುಗಳಿಗೆ ಅವಶ್ಯಕತೆ ಹೂಗಳು ತುರಾಯಿ, ಪಂಜೆಗಳಿಗೆ ಬೆಳ್ಳಿ ಸಾಮಾನುಗಳು ಹಾಗೂ ಭಕ್ತರು ಅರ್ಪಿಸುವ ದಾರದ ಲಾಡಿ, ಚಿನ್ನಿ ಸಕ್ಕರೆ, ಉತ್ತತ್ತಿ ಮತ್ತು ಲೋಬಾನು ಖರೀದಿ ಪುರುಷೊತ್ತಿಲ್ಲದೆ ನಡೆದಿದೆ.
ಇಷ್ಟಾರ್ಥ ಪೂರೈಕೆ:
- Advertisement -
ಮೋಹರಂ ಶೋಕದ ಹಿನ್ನಲೆ ಹೊಂದಿದ್ದು ಭೇದ ಭಾವವಿಲ್ಲದೇ ಹಿಂದೂ ಮುಸ್ಲಿಂರ ಹಲವರು ಫಕೀರ್‌ಗಳು ಆಗುತ್ತಾರೆ, ಮೋಹರಂ ಹಬ್ಬವು ಪ್ರವಾದಿ ಮಹ್ಮದರ ಮೊಮ್ಮಕ್ಕಳಾದ ಹಸನ್ ಹುಸೇನ್‌ರ ಕರ್ಬಲಾ ಯುದ್ದದ ಪ್ರತೀಕವಾಗಿ ಆಚರಿಸಲಾಗುತ್ತಿದೆ.
ಗೂಳೆ ಹೋದವರು ತವರಿಗೆ:
ವರ್ಷವಿಡೀ ದುಡಿಯಲು ಪರ ರಾಜ್ಯಗಳಿಗೆ ಗೂಳೆ ಹೋದವರು ಮೋಹರಂ ಆಚರಿಸಲತ್ತಿದ್ದಾರೆ, ತಾವು ಬೇಡಿಕೊಂಡ ಅಲಾಯಿ ದೇವರುಗಳಿಗೆ ಇಷ್ಟಾರ್ಥ ಪೂರೈಸಲು ಪಂಜೆಗಳಿಗೆ ಮಲಮಲ ಬಟ್ಟೆ, ಡೋಲಿ ದೇವರುಗಳಿಗೆ ಬೆಳ್ಳಿ ಛತ್ರಿಗಳನ್ನು ಅರ್ಪಿಸುವ ನಿಟ್ಟಿನಲ್ಲಿ ಬಂಗಾರದ ಅಂಗಡಿಗಳಲ್ಲಿ ಖರೀದಿ ಜೋರಾಗಿ ನಡೆದಿದೆ.
ಮಣ್ಣಿನ ಮಡಿಕೆಗೆ ಡಿಮ್ಯಾಂಡ್:
ಅಲಾಯಿ ದೇವರುಗಳಿಗೆ ಸಾಂಪ್ರಾದಾಯಿಕವಾಗಿ ಆಚರಣೆ ವೇಳೆ ಹಲವರು ಮಣ್ಣಿನ ಮಡಿಕೆಯಲ್ಲಿ ಶರಬತ್, ನೈವೇದ್ಯ ತಯಾರಿಸಿ ಅರ್ಪಿಸುತ್ತಾರೆ, ಹಾಗಾಗಿ ಪಟ್ಟಣದಲ್ಲಿ ಮಣ್ಣಿನ ಮಡಿಕೆ ಖರೀದಿಗೂ ಜನ ಮುಂದಾಗಿದ್ದಾರೆ.
- Advertisement -

