ಕಲಬುರಗಿ :— ಇಂದಿನ ಕಂಪ್ಯೂಟರ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಗಳ ಬಳಕೆ ಅವಶ್ಯಕತೆಗಿಂತ ಜಾಸ್ತಿ ಉಪಯೋಗಿಸಿ ಅವುಗಳನ್ನೇ ಅವಲಂಬಿಸಿ, ಒಂದು ವೇಳೆ ಅವುಗಳಿಂದ ನಾವು ದೂರ ಉಳಿದರೆ ನಮ್ಮ ಸರ್ವಸ್ವವನ್ನೇ ಕಳೆದುಕೊಳ್ಳುತ್ತೇವೆ ಎಂಬ ಮಟ್ಟಿಗೆ ಅನೇಕ ಯುವಕ ಯುವತಿಯರು ಅದರಲ್ಲಿಯೂ ವಿದ್ಯಾರ್ಥಿಗಳು ತೀರ್ಮಾನಕ್ಕೆ ಬಂದಿದ್ದಾರೆ . ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಕೆಲವು ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿದು ಕೇವಲ ತಮ್ಮ ವಿದ್ಯಾಭ್ಯಾಸದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಪಿಯುಸಿ ದ್ವಿತೀಯ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತಮಟ್ಟದ ಅಂಕಗಳನ್ನು ಪಡೆದು ರಾಜ್ಯ ,ಜಿಲ್ಲಾಮಟ್ಟದ ಹಾಗೂ ಶಾಲೆಗೆ ,ಸಮಾಜಕ್ಕೆ, ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆಂದು ಶ್ರೀ ಎಂ ಜಿ ಘನಾತೆ ಅಧ್ಯಕ್ಷರು ಶ್ರೀ ಹಿಂಗುಲಾಂಬಿಕಾ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹಾಗೂ ಭಾವಸಾರ್ ಛತ್ರಿ ಸಮಾಜದ ಮುಖಂಡರು ಮಾತನಾಡುತ್ತಿದ್ದರು.
ಅವರು ನಗರದ ಪ್ರತಿಷ್ಠಿತ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆ ಏರ್ಪಡಿಸಿದ ಭಾವಸಾರ್ ಸಮಾಜದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿಷಯ ವ್ಯಕ್ತಪಡಿಸಿದರು.
ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಕುಮಾರಿ ಭೂಮಿಕಾ ಕಠಾರೆ 86. 83 ಪ್ರತಿಶತ ಅಂಕ ಪಡೆದು ಟಾಪ್ ಮಾಡಿದ ಅವಳಿಗೆ 5,000 ಕ್ಯಾಶ್ ಪ್ರೈಸ್, 79 ಪ್ರತಿಶತ ಅಂಕ ಪಡೆದ ದೀಕ್ಷಾಗೆ 2500 ರೂಪಾಯಿ ಹಾಗೂ ಶ್ರೇಯಸ್ ವೈಚೋಲೆ ಇವರಿಗೆ 1100 ಕ್ಯಾಶ್ ಪ್ರೈಸ್ ನೀಡಿ ಸನ್ಮಾನಿಸಲಾಯಿತು.
ಅದೇ ತರಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪ್ ಮಾಡಿದ ಭಾವಸಾರ್ ಕ್ಷತ್ರಿಯ ಸಮಾಜದ ವಿವಿಧ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದ ಟಾಪ್ ಮಾಡಿದ ಪ್ರಿಯಾಲ್ ನೌಲೇ 5000 ಕ್ಯಾಶ್ ಪ್ರೈಸ್, ದೀಕ್ಷಾ ಹಿಬಾರೆ 2500 ಹಾಗೂ ಕೃಪಾ ರಂಗದಾಳಗೆ 1100 ರೂಪಾಯಿ ಕ್ಯಾಶ್ ಪ್ರೈಸ್ ಹಾಗೂ ಭವ್ಯ ಸನ್ಮಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಹಿಂಗುಲಾಂಬಕಾ ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ರಂಗ ದಾಳ ನಿರ್ದೇಶಕರಾದ ನಂದ ಕಿಶೋರ್ ಚೌಹಾಣ ರಮೇಶ್ ರಂಗದಾಲ್ ನಂದಕುಮಾರ್ ಪುಕಾಳೆ ಸುನಿಲ್ ರಂಗ ದಾಳ ದೇವಿ ದಾಸ್ ಪಿಸ್ಸೆ ದತ್ತ ಕಠಾರೆ ರಾಜಕುಮಾರ್ ರಂಗ ದಾಳ ದಯಾನಂದ್ ಕಬಾಡೆ ಸುರೇಶ್ ತಲ್ವಾರ್ ಸುರೇಖಾ ಘನಾತೆ ಹಾಗೂ ಸದಸ್ಯರಾದ ವಿಠಾಬಾಯಿ ಹಿಬಾರಿ ಉಪಸ್ಥಿತರಿದ್ದರು.

