ಹುಮ್ನಾಬಾದ್ :—– ಬೀದರ್ ಜಿಲ್ಲಾಧ್ಯಂತ
ಸಿಂಥೆಟಿಕ್ ಮಾದಕ ವಸ್ತು ಪ್ರಕರಣ ದಾಖಲಾಗಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ ವಾಗಿದೆ ಎಂದು ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನ ಬಸಣ್ಣ ಎಸ್ ಎಲ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹುಮ್ನಾಬಾದ್ ನಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ,ಅಪರಾಧ ತಡೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು ಹೆದ್ದಾರಿಗಳಲ್ಲಿ ಪ್ರತಿಯೊಂದು ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅಪರಾಧ ಸಂಖ್ಯೆ ಬಹುತೇಕ ಇಳಿಮುಖ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
ಹುಮ್ನಾಬಾದ್ ಮಾರ್ಗದಿಂದ ಹಾದುಹೋಗುವ ಮುಂಬೈಯಿಂದ ಹೈದರಾಬಾದಕ್ಕೆ ಹೋಗುತ್ತಿದ್ದ ಕಾರು ಒಂದರಲ್ಲಿ ಸಿಂಥೆಟಿಕ್ ಮಾದಕ ವಸ್ತು ಕೊಂಡೊಯ್ಯಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಆಂಟಿ ನೆರಕೊಟಿಕ್ಸ್ ಕಾರ್ಡ್ ಶಿವಂಶೂ ರಜಪೂತ್ ಎಸ್‌ಪಿ ರವರ ನೇತೃತ್ವದಲ್ಲಿ ರಚಿತಗೊಂಡ ಸ್ಕಾಡ ಹಠಾತನೆ ದಾಳಿ ನಡೆಸಿ 499 ಗ್ರಾಂ ಅಂದಾಜು 49 ಲಕ್ಷ 90,000 ರೂಪಾಯಿ ಮುದ್ದೆಮಾಲು ಹಾಗೂ ಕಾರು ಎರಡು ಮೊಬೈಲ್ ಹೀಗೆ 55 ಲಕ್ಷ 8 500 ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

