ಸತ್ಯಕಾಮ ವಾರ್ತೆ ಯಾದಗಿರಿ:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ಬಹು ವಿಜೃಂಭಣೆಯಿಂದ ಇದೇ ಶನಿವಾರ 26 ರಂದು ಬೆಳಿಗ್ಗೆ 10-30 ಕ್ಕೆ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಸಪ್ತಪದಿ ಕನ್ವೆಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಸಿದ್ದರಾಜರೆಡ್ಡಿ ತಿಳಿಸಿದರು.
ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡುತ್ತಾ, ಅಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿಗಳು, ನಾಲವಾರ ಕೋರಿಸಿದ್ದೇಶ್ವರ ಮಠದ ಷ.ಬ್ರ. ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಮತ್ತು ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿ ಷ.ಬ್ರ. ಶಾಂತಮಲ್ಲಿಕಾರ್ಜುನ ಪಂಡಿತಾರಾದ್ಯ ಮಹಾಸ್ವಾಮೀಜಿಗಳು ಪಾವನ ಸಾನಿಧ್ಯವನ್ನು ವಹಿಸಲಿದ್ದಾರೆ.
ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆಗಮಿಸಲಿದ್ದಾರೆ.
- Advertisement -
ವಿಶೇಷ ಸನ್ಮಾನಿತರಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಶಂಕರ ಮಹಾದೇವ ಬಿದರಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ, ನೇತೃತ್ವವನ್ನು ಅ.ಭಾ.ವೀ.ಲಿಂ ಮಹಾಸಭಾ ಯಾದಗಿರಿ ನೂತನ ಜಿಲ್ಲಾಧ್ಯಕ್ಷರಾದ ಚನ್ನಪ್ಪಗೌಡ ಮೋಸಂಬಿ, ತಾಲೂಕಾಧ್ಯಕ್ಷರಾದ ರಾಜಶೇಖರ್ ಸಿ ಪಾಟೀಲ್ ಚಾಮನಳ್ಳಿ ಇವರು ವಹಿಸುವರು.
ಸುದ್ದಿಗೋಷ್ಠಿ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಾಜಿ ಸಚಿವರಾದ ಡಾ. ಎಬಿ. ಮಾಲಕರೆಡ್ಡಿ, ಮಾಜಿ ಶಾಸಕರಾದ ಗುರುಪಾಟೀಲ ಶಿವಾಳ, ಸಮಾಜದ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ್, ಸಮಾಜದ ಮುಖಂಡರು ಹಿರಿಯ ನ್ಯಾಯವಾದಿಗಳಾದ ಎಸ್‌ಬಿ ಪಾಟೀಲ್, ಉದ್ಯಮಿಗಳು ಹಾಗೂ ಸಮಾಜದ ಮುಖಂಡರಾದ ಶರಣಪ್ಪಗೌಡ ಮಲ್ಹಾರ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನಾಯಕ ಮಾಲಿಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷರಾದ ಬಸವರಾಜ ಜೈನ್, ಸಮಾಜದ ಮುಖಂಡರು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪಾರ್ವತಿ ಕರೆಡ್ಡಿ ಮಲ್ಹಾರ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಅಯ್ಯಣ್ಣ ಹುಂಡೇಕಾರ, ಅ.ಭಾ.ವೀ.ಲಿಂ ಮಹಾಸಭಾದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಮಣ್ಣೂರ್, ನಿಕಟಪೂರ್ವ ತಾಲೂಕಾಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಮಹಾಸಭಾ ಶಹಾಪೂರ ತಾಲೂಕಾಧ್ಯಕ್ಷ ಸಿದ್ದಣ್ಣ ಆರಬೋಳ,ಸುರಪುರ ತಾಲೂಕಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಆಗಮಿಸುವರು.
ಇದೇ ವೇಳೆ ಯಡಿಯೂರುಸಿರಿ ಸಂಗೀತ ಪಾಠಶಾಲೆ ಯಾದಗಿರಿ ಇವರಿಂದ ವಚನ ಗಾಯನ ನಡೆಯಲಿದೆ.
ಸಮಾಜೋದ್ದಾರಕ, ಗುರುಪರಂಪರೆಯ ತಿಲಕ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸ್ವಾಮೀಜಿಯವರು ಸ್ಥಾಪನೆ ಮಾಡಿದಂತಹ ಅಖಿಲ ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಾಡಿನಲ್ಲಿ ಮಹೊನ್ನತ ಇತಿಹಾಸ, ಪರಂಪರೆ ಹೊಂದಿದೆ. ಸಂಸ್ಥಾಪಕ ಪೂಜ್ಯರ ಆಶಯದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸಿಕೊಂಡು ಸಮಾಜವನ್ನು ಅಖಂಡವಾಗಿ ಒಗ್ಗೂಡಿಸಿಕೊಂಡು ಹೋಗುವ ದಿಸೆಯಲ್ಲಿ ಸಮಾಜ ಸಂಘಟನೆಯ ಕಾರ್ಯ ಜಿಲ್ಲೆಯಲ್ಲಿ ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಜಿಲ್ಲೆಯ ಸಮಸ್ತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಬಾಂಧವರು ಈ ಪದಗ್ರಹಣ ಸಮಾರಂಭದಲ್ಲಿ ನಿಗಧಿತ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
- Advertisement -
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲ್ಲೂಕಾಧ್ಯಕ್ಷ ರಾಜಶೇಖರ ಪಾಟೀಲ ಚಾಮನಹಳ್ಳಿ,ಕೋಶಾಧ್ಯಕ್ಷ ಬಸನಗೌಡ ಕನ್ಯಾಕೋಳೂರ, ಅನ್ನಪೂರ್ಣ ಜವಳಿ, ವೀರಭದ್ರಪ್ಪ ಮೋಟಾರ್, ಜಗದೀಶ್ ಪಾಟೀಲ್, ಶರಣಪ್ಪ ಜಾಕ ಸೇರಿದಂತೆ ಇನ್ನಿತರರು ಹಾಜರಿದ್ದರು.
==================
ಯಾದಗಿರಿ ಜಿಲ್ಲಾ ಘಟಕ ರಚನೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರು, ಚನ್ನಪ್ಪಗೌಡ ಮೋಸಂಬಿ ಯಾದಗಿರಿ ಮತ್ತು ಉಪಾಧ್ಯಕ್ಷರುಗಳು ಸಂಗಾರೆಡ್ಡಿಗೌಡ ಪೋಲೀಸ್ ಪಾಟೀಲ ಮಲ್ಲಾರ ಯಾದಗಿರಿ, ಅಡಿವೆಪ್ಪ ಜಾತಾ ಶಹಾಪೂರ, ಶ್ರೀಮತಿ ಅನ್ನಪೂರ್ಣ ಡಾ. ಸಿ.ಎಂ. ಪಾಟೀಲ ಯಾದಗಿರಿ, ನರಸರೆಡ್ಡಿ ಪಾಟೀಲ ನಜರಾಪೂರ, ಪ್ರಧಾನ ಕಾರ್ಯದರ್ಶಿ ಡಾ. ಸಿದ್ಧರಾಜರೆಡ್ಡಿ ಯಾದಗಿರಿ, ಕೋಶಾಧ್ಯಕ್ಷರು ಬಸಣ್ಣಗೌಡ ಮಾಲಿ ಪಾಟೀಲ ಕನ್ಯಕೋಳೂರು ಯಾದಗಿರಿ, ಕಾರ್ಯದರ್ಶಿಗಳು ಚನ್ನಮಲ್ಲಿಕಾರ್ಜುನ ಅಕ್ಕಿ ಯಾದಗಿರಿ, ಬಸವರಾಜ ಅರುಣಿ ಶಹಾಪೂರ, ಶ್ರೀಮತಿ ಡಾ. ಕಮಲಾ ಇಂದೂಧರ ಶಿನ್ನೂರ ಯಾದಗಿರಿ, ಮಹೇಶ್ಚಂದ್ರ ಅನೇಗುಂದಿ ಶಹಾಪೂರ.
ಕಾರ್ಯಕಾರಿ ಸದಸ್ಯರುಗಳು: ಬಸವಂತ್ರಾಯಗೌಡ ಮಾಲಿ ಪಾಟೀಲ ಯಾದಗಿರಿ, ವೀರಭದ್ರಯ್ಯಸ್ವಾಮಿ ಜಾಕಾಮಠ ಯಾದಗಿರಿ, ಶಂಕ್ರಪ್ಪಗೌಡ ಗೋನಾಲ ಯಾದಗಿರಿ, ರುದ್ರಗೌಡ ಪಾಟೀಲ ಮಲ್ಲಾಬಿ ಯಾದಗಿರಿ, ವೀರಭದ್ರಪ್ಪ ಮೋಟರ ಯಾದಗಿರಿ, ಬಸವರಾಜ ರಾಯಕೋಟಿ ಚಂಡ್ರಿಕಿ, ಚಂದ್ರಶೇಖರ ಅರಳಿ ಯಾದಗಿರಿ, ಚೇತನ ಪಾಟೀಲ ಬಾನಾ, ಸಿದ್ದಲಿಂಗಪ್ಪ ದೇಶಮುಖ ಶಹಾಪೂರ, ಶರಣಪ್ಪ ಗುರಪ್ಪ ಜಾಕಾ ಯಾದಗಿರಿ, ನಾಗಣ್ಣ ಶೀಲವಂತಪ್ಪ ಸಾಹು ಶಹಾಪೂರ, ಬಸವರಾಜ ಹೇರುಂಡಿ ಶಹಾಪೂರ, ಭೀಮರಡ್ಡಿ ಚಂದ್ರಾಯಗೌಡ ಪಾಟೀಲ ಗೋಗಿ, ಉಮೇಶ್ಚಂದ್ರ ಶೀಲವಂತಪ್ಪ ಗೋಗಿ, ಅನ್ನಪೂರ್ಣ ಜವಳಿ ಯಾದಗಿರಿ, ಸವಿತಾ ಶರಣಗೌಡ ಮಾಲಿ ಪಾಟೀಲ ಯಾದಗಿರಿ, ದೀಪಾ ಶಂಕ್ರಪ್ಪ ಅರುಣಿ ಯಾದಗಿರಿ, ಮೇಘಾ ಶರಣಗೌಡ ಹೋತಪೇಟ್, ಮಂಜುಳಾ ಆರ್.ಪಾಟೀಲ ಯಾದಗಿರಿ, ಮೀನಾಕ್ಷಿ ಭೀಮಾಶಂಕರ ಮುತ್ತಗಿ ಗುರುಮಠಕಲ್, ಜೋತಿ ಚನ್ನನಗೌಡ ಶಹಾಪೂರ, ಅನ್ನಪೂರ್ಣ ಸುಧಾಕರ ಗುಡಿ ಶಹಾಪೂರ.
- Advertisement -
ಯಾದಗಿರಿ ತಾಲೂಕು ಘಟಕ ರಚನೆ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ತಾಲೂಕು ಘಟಕದ ಅಧ್ಯಕ್ಷರು ರಾಜಶೇಖರ ಸಿ.ಪಾಟೀಲ ಚಾಮನಹಳ್ಳಿ ಯಾದಗಿರಿ ಮತ್ತು ಉಪಾಧ್ಯಕ್ಷರುಗಳು ಶ್ರೀನಾಥ ಮಲ್ಲಕಾರ್ಜುನಪ್ಪ ಜೈನ ಯಾದಗಿರಿ, ಸ್ವಪ್ಪಾ ಮಂಜುನಾಥ ಲೇವಡಿ ಯಾದಗಿರಿ, ಪ್ರಧಾನ ಕಾರ್ಯದರ್ಶಿ ಅಯ್ಯಣ್ಣಗೌಡ ಮಲ್ಲಣ್ಣಗೌಡ ಕ್ಯಾಸಪ್ಪನಹಳ್ಳಿ, ಕೋಶಾಧ್ಯಕ್ಷರು ರಾಜಶೇಖರ ಮಹಾದೇವಪ್ಪ ಉಪ್ಪಿನ ಯಾದಗಿರಿ, ಕಾರ್ಯದರ್ಶಿಗಳು ಬಸರಡ್ಡಿ ಮಲ್ಲರಡ್ಡಿ ಪಾಟೀಲ ಎಂ.ಟಿ.ಪಲ್ಲಿ ಗುರುಮಠಕಲ್, ವಿಜಯಲಕ್ಷ್ಮೀ ಶಿವರಾಜ ಶಾಸ್ತ್ರೀ ಯಾದಗಿರಿ.
ಕಾರ್ಯಕಾರಿ ಸದಸ್ಯರುಗಳು: ರಮೇಶ ಗುರುನಾಥರಡ್ಡಿ ದೊಡ್ಡಮನಿ ಯಾದಗಿರಿ, ರಾಮರಡ್ಡಿ ಶಿವರಡ್ಡಿ ಯಾದಗಿರಿ, ಶರಣಬಸಪ್ಪ ಬಸವರಾಜಪ್ಪ ಅವಂಟಿ ಇಡ್ಲೂರು, ನಾಗಪ್ಪ ಶರಣಪ್ಪ ಸಜ್ಜನ ಯಾದಗಿರಿ, ರವೀಂದ್ರ ಜಾಕಾ ಯಾದಗಿರಿ, ಜಗದೀಶ ಪಾಟೀಲ ಆಶನಾಳ, ಜಗದೀಶ ದುಂಡಪ್ಪಗೌಡ ಪಾಟೀಲ ಯಾದಗಿರಿ, ನೂರಂದಪ್ಪ ಲೇವಡಿ ಯಾದಗಿರಿ, ಡಾ. ವಿನಾಯಕ ಸಿ. ಪಾಟೀಲ ಅಬ್ಬೆತುಮಕೂರ, ನಿರ್ಮಲಾ ಸುಭಾಶ್ಚಂದ್ರ ಕೌಲಗಿ ಯಾದಗಿರಿ, ಪ್ರಮಿಳಾದೇವಿ ಡಾ. ಪ್ರಕಾಶ ರಾಜಾಪೂರ, ವೀಣಾ ಚಂದ್ರಶೇಖರ ಸೌದ್ರಿ ಯಾದಗಿರಿ,ವೇದಾ ಬಸವಂತರಡ್ಡಿ ಕರಡ್ಡಿ ಮಲ್ಲಾರ ಯಾದಗಿರಿ,ಸುಧಾ ಆನಂದರಡ್ಡಿ ವಡವಟ್ ಯಾದಗಿರಿ.

