- ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ ;ಸ್ಕಾಡಾ ಗೆಟ್ ಅಳವಡಿಕೆ, ರೈತರಲ್ಲಿ ಸಂತಸ
ಸತ್ಯಕಾಮ ನ್ಯೂಸ್ ಡೆಸ್ಕ್
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ಆಧುನಿಕರಣ, ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಜಲಾಶಯದಲ್ಲಿ ಬಳಕೆ ಆಗುತ್ತಿರುವ ನೀರು, ಕಾಲುವೆ ನಿರ್ವಹಣೆ ಹಾಗೂ ನೀರು ಬಳಕೆದಾರ ಸಹಕಾರ ಸಂಘಗಳ ಕಾರ್ಯ ಚಟುವಟಿಕೆ ಕುರಿತು “ಮಾಸಕೊಟ್ ಸಂಸ್ಥೆ” ಸೂಚನೆಯಂತೆ ಗುರುವಾರ ಅಧಿಕಾರಿಗಳೂ ಇಂಜನೀಯರುಗಳೂ ಹಾಗೂ ಸದಸ್ಯರು ಯೋಜನಾ ಪ್ರದೇಶದ ನಾರಾಯಣಪುರದಿಂದ ಹುಣಸಗಿಯ ತನಕ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಾರಾಯಣಪುರ ಜಲಾಶಯದ ಕಾಲುವೆ ಹಾಗೂ ನೀರು ನಿರ್ವಹಣೆ ತಂಡಗಳೊಂದಿಗೆ ಜಲ, ಗೆಟ್, ನೀರಿನ ವಿತರಣೆ, ನೀರು ಬಳಕೆದಾರ ಸಹಕಾರ ಸಂಗಗಳ ಕಾರ್ಯ ಚಟುವಟಿಕೆ ಕುರಿತು ಸರಕಾರಕ್ಕೆ ವರದಿ ಸಲ್ಲಿಸುವದಕ್ಕಾಗಿ ಅಧ್ಯಯನ ನಡೆಸುತ್ತಿರುವದಾಗಿ ಕೆ.ಇ.ಆರ್.ಎಸ್ ಮುಖ್ಯ ಎಂಜಿನಿಯರ್ ಕೆ.ಜಿ.ಮಹೇಶ ಹೇಳಿದರು.
- Advertisement -

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನಿರ್ಮಾಣದ ಹಲವು ದಶಕಗಳಿಂದ ನಿರಂತರವಾಗಿ ಕುಸಿತದಿಂದಾಗಿ, ಕಾಲುವೆ ನೀರು ಅಧಿಕ ಪ್ರಮಾಣದಲ್ಲಿ ಪೊಲಾಗುತ್ತಿತ್ತು. ಕಾಲುವೆ ಅಧುನಿಕರಣಕ್ಕಾಗಿ ಬೇಡಿಕೆ ಕಂಡು ಬಂತು.ತದ ನಂತರ ಕಾಲುವೆ ಅಧುನಿಕರಣ (ಇಆರ್‌ಎಮ್) ಕೈಗೊಳ್ಳಲಾಯಿತು.
ಮುಂದುವರೆದು ದೇಶದಲ್ಲಿ ಮೊದಲ ಬಾರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಕಾಡಾ ಅಡಿಯಲ್ಲಿ ೫ಸಾವಿರ ಕೊಟಿ ರೂಗಳಲ್ಲಿ ಸುರಕ್ಷಿತ ಗೇಟ್ ಅಳವಡಿಸಿದ ನಂತರ ನೀರು ಪೋಲಾಗುವದು ತಪ್ಪಿಸಿದಂತಾಗಿದೆ. ಅಲ್ಲದೆ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಲಭ್ಯವಾಗುತ್ತಿದ್ದು, ಇದರಿಂದಾಗಿ ನೀರಾವರಿ ಕ್ಷೇತ್ರ, ಅಧಿಕ ಇಳುವರ, ರೈತರ ಗುಳೆ ತಪ್ಪಿದಂತಾಗಿದೆ ಎಂಬುದು ಅಧ್ಯಯನದಿಂದ ಕಂಡು ಬಂದಿದೆ ಎಂದು ಮಹೇಶ ಹೇಳಿದರು.
ನೀರು ಬಳಕೆದಾರರ ಸಹಕಾರಿ ಸಂಘಗಳ ಪ್ರಮುಖ ಎಂ.ಆರ್.ಖಾಜಿ ಮಾತನಾಡಿ, ರೈತರಿಗೆ ನೀರನ್ನು
ಮುಟ್ಟಿಸುವಲ್ಲಿ ಸಂಗಗಳ ಚಟುವಟಿಕೆ ಉತ್ತಮವಾಗಿದ್ದು, ಆಡಳಿತದಲ್ಲಿ ಇರುವ ಯಾವುದೇ ಸರಕಾರ ಸಂಘಗಳನ್ನು ಬಲಡಪಸುವಲ್ಲಿ ತಮ್ಮ ಇಚ್ಛಾಶಕ್ತಿ ತೋರುತ್ತಿಲ್ಲಾ. ಕೃಷ್ಣಾ ಕಾಡಾ ಅಡಿಯಲ್ಲಿನ ನಾರಾಯಣಪುರ ವಲಯದ ನೀರು ಬಳಕೆದಾರ
ಸಹಕಾರ ಸಂಘಗಳು ಮಾತ್ರ ನೀರಿನ ಕರವನ್ನು ಮುಂಗಡವಾಗಿ ಪಾವತಿ ಮಾಡುತ್ತಿವೆ ಎಂದು ಹೇಳಿದರು.
- Advertisement -
ಈ ನಿಟ್ಟಿನಲ್ಲಿ ಸಂಘಗಳಿಗೆ ಉತ್ತೇಜನ ನೀಡುವದು ಅಗತ್ಯವಾಗಿದೆ ಎಂದು ಮನವಿ ಮಾಡಿದರು.
ನಾರಾಯಣಪುರ ಜಲಾಶಯ, ಸ್ಕಾಡಾ ಸೆಂಟರ್, ನಾರಾಯಣಪುರ ಎಡದಂಡೆ ಮುಖ್ಯ ನಾಲೆ, ಎಸ್ಕೇಪ ಗೆಟ್‌ಗಳನ್ನು ಪರೀಶಿಲನೆ ಮಾಡಿದರು.
ಈ ಸಂದರ್ಭದಲ್ಲಿ ಅಧಿಕ್ಷಕ ಅಭಿಯಂತರ ರಮೇಶ.ಜಿ. ರಾಠೋಡ. ಇಇಗಳಾದ ಹಣಮಂತ ಕೊಣ್ಣುರು, ರವಿಕುಮಾರ, ನಾಗೇಶ, ಎಇಇ ಆರ್.ಎಸ್.ರಾಠೋಡ, ಮಾನಪ್ಪ,ಮಹಾಲಿಂಗ ಹೊಕ್ರಾಣಿ, ವಿಜಯಕುಮಾರ ಅರಳಿ, ರಾಜಶೇಖರ ವಂದಲಿ, ವಿಶಾಲ ಇತರ ಅಧಿಕಾರಿಗಳು ಇದ್ದರು.
- Advertisement -

