ಕಲಬುರಗಿ…… ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಪೂಜ್ಯ ಜೈನ ಮುನಿಗಳಾದ ಕಾಮಕುಮಾರ ನಂದಿ ಅವರನ್ನು ದುಷ್ಕರ್ಮಿಗಳು ಬಬ೯ರವಾಗಿ,ಅಮಾನವೀಯವಾಗಿ ಹತ್ಯೆ ಮಾಡಿದ್ದು,ವಿಶ್ವ ಹಿಂದೂ ಪರಿಷತ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರಿಯ ಧಮಾ೯ಚಾಯ೯ ಸಂಪರ್ಕ ಪ್ರಮುಖರಾದ ಬಸವರಾಜ ಹಿರೇಮಠ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಸಾಧು ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಹೇಳಿದರು.
ಸಮಾಜಕ್ಕಾಗಿ ಬದುಕುವ ಸಾಧು ಸಂತರನ್ನು ಈ ರೀತಿ ಬಬ೯ರವಾಗಿ ಕೊಲೆ ಮಾಡಿದ್ದು,ಸಮಾಜಕ್ಕೆ ಅವಮಾನವಾದ ಸಂಗತಿಯಾಗಿದ್ದು,ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ನೀಡುವಲ್ಲಿಯೂ ಸಹ ಚಿಂತನೆ ಮಾಡಬೇಕು ಎಂದರು.
- Advertisement -
ಭಾರತ ದೇಶದಲ್ಲಿರುವ ಎಲ್ಲರಿಗೂ ಸಮಾನ ಕಾನೂನು ಇರಬೇಕೆಂಬ ಉದ್ದೇಶದಿಂದ ಶೀಘ್ರವೇ ಸಮಾನ ನಾಗರೀಕ ಸಂಹಿತೆ ದೇಶದಲ್ಲಿ ಜಾರಿಗೊಳಿಸಬೇಕು. ರಾಷ್ಟದಲ್ಲಿ ಎಲ್ಲರಿಗೂ ಒಂದೆ ಕಾನೂನು ಮೂಲಕ ರಾಷ್ಟ್ರದ ಹಿತ ಕಾಪಾಡಲು ಸಮಾನ ನಾಗರೀಕ ಸಂಹಿತೆಯನ್ನು ಆದಷ್ಟು ಬೇಗ ತರಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಲಿಂಗರಾಜಪ್ಪಾ ಅಪ್ಪಾ,ವಿಭಾಗದ ಕಾಯ೯ದಶಿ೯ ಶಿವರಾಜ್ ಸಂಗೋಳಗಿ,ನಗರ ಅಧ್ಯಕ್ಷ ಶ್ರೀಮಂತ ನವಲದಿ,ನಗರ ಕಾಯ೯ದಶಿ೯ ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.

