ಕಮಲಾನಗರ-
ಇಂದು ಆಳಂದ ತಾಲೂಕಿನ ಕಮಲಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂಗ್ಯೂ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡಮನಿ ಮಾತನಾಡಿ ಡೆಂಗ್ಯ ಮತ್ತು ಚಿಕೂನ್ ಗುನ್ಯಾ ರೋಗಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ರೋಗ ಬಂದ ಮೇಲೆ ಆಸ್ಪತ್ರೆಗಳಿಗೆ ಪರದಾಡುವುದಕ್ಕಿಂತ ರೋಗದ ಕುರಿತು ತಿಳಿದುಕೊಂಡು ನಮ್ಮ ಮನೆ ಒಳಗೆ ಹೊರಗೆ ಸುತ್ತ ಮುತ್ತ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದರ ಮೂಲಕ ರೋಗ ಬರದಂತೆ ನಾವು ನಮ್ಮನ್ನು ಸಂರಕ್ಷಿಸಿಕೊಳ್ಳ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡುವುದರು.ಹಾಗೂ ಸೊಳ್ಳೆಗಳಿಂದ ಸಂರಕಗಷಣೆ ಮಾಡಿಕೊಳ್ಳುವ ಸರಳ ವಿಧಾನಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ತಮ್ಮ ಹಾಸ್ಯಚಟಾಕೆಗಳನ್ನು ಹಾರಿಸುವುದರ ಜೊತೆಗೆ ಮಕ್ಕಳಿಗೆ ಸಾಮಾನ್ಯದ ಆರೋಗ್ಯದ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಮೇಲ್ವಿಚಾರಕರಾದ ಸಂಜೀವ ಅರಳೆ,ಶಫಿ ಪಟೇಲ್,ಆರೋಗ್ಯ ಅಧಿಕಾರಿ ಅಮಿತಕುಮಾರ,ಆರೋಗ್ಯ ಸುರಕ್ಷತಾ ಅಧಿಕಾರಿ ಸುನಿತಾ ಶಿಕ್ಷಕರಾದ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶೈಲಾ , ವಹಿಸಿಕೊಂಡಿದ್ದರು.ಶಿಕ್ಷಕರಾದ ಮಡಿವಾಳಪ್ಪ. ಬಿರಾದಾರ,ಜೈಪ್ರಕಾಶ ಸ್ವಾಗತಿಸಿ ನಿರೂಪಣೆ ಮಾಡಿದರು.

