ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಫೆ.೨೬ ಹಾಗೂ ೨೭ರಂದು ನಡೆದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರು ಅವರಿಗೆ ನುಡಿ ನಮನ ಸಲ್ಲಿಸದೆ ಕಾರ್ಯಕ್ರಮ ನಡೆಸಿರುವುದು ವಿಪರ್ಯಾಸ.
ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮೊದಲು ದಿವಂಗತರಿಗೆ ಗೌರವ ನಮನ ಸಲ್ಲಿಸಿ ತದನಂತರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡಬೇಕಾಗಿತ್ತು. ಆದರೆ ಕಸಾಪ ಈ ಕೆಲಸ ಮಾಡದೆ ಅಗೌರವ ತೋರಿರುವುದು ಸಾಹಿತಿಕಾರರಿಗೆ ಹಾಗೂ ಕನ್ನಡಾಭಿಮಾನಿಗಳಲ್ಲಿ ಬೇಸರ ತರಿಸಿದೆ.
ಹೌದು ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರರವರು ಸಾಹಿತ್ಯ ಪರಿಷತ್ತಿಗೆ ನೀಡಿರುವ ಕೊಡುಗೆ ಅಪಾರ, ೧೯೯೫ರಲ್ಲಿ ಕಲ್ಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಿಗೆ ಸರ್ವಾಧ್ಯಕ್ಷ ಪಟ್ಟವನ್ನು ಕಟ್ಟಿ ಕನ್ನಡದ ತೆರನ್ನು ಎಳೆದವರು. ಅಲ್ಲದೆ ಕನ್ನಡದ ಕಂಪು ಕಲ್ಬುರ್ಗಿಯ ಜನರಿಗೆ ಉಣಬಡಿಸಿದರು, ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿ ಕಚೇರಿಯನ್ನಾಗಿ ಮಾಡುವುದರ ಜೊತೆಗೆ ಈಗಿರುವ ದಿ|| ಬಾಪುಗೌಡ ರಂಗಮಂದಿರಕ್ಕೆ ಭೂಮಿ ಪೂಜೆ ಆದದ್ದು ಕೂಡ ಇವರ ಕಾಲದಲ್ಲಿ ಎಂಬುದು ಈಗಿನ ಸಾಹಿತಿಗಳು ತಿಳಿದು ಕೊಳ್ಳಬೇಕು.
ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆಯ ಹಿರಿಮೆ ಗರಿಮೆಯ ಕನ್ನಡಿಗರ ಐಕ್ಯತೆಯ ಕನ್ನಡದ ಅಳಿವು ಉಳಿವಿನ ಕೋಟಿ ಲೆಕ್ಕದ ವೇದಿಕೆಯಾಗಬೇಕು. ಭಾಷೆಯೊಂದಕ್ಕೆ ಇಂತಹ ಅತೀ ದೊಡ್ಡ ಮನ್ನಣೆ ಸಿಗುತ್ತಿರುವಾಗ ಅದೊಂದು ರಾಜಕೀಯ ಜಾತ್ರೆಯಂತಾಗಿದ್ದು ಬೇಸರ.
ಒಂದರ್ಥದಲ್ಲಿ ರಾಜಕೀಯ ಅಸ್ಪೃಶ್ಯತೆ ಕೂಡ ಸಾಹಿತ್ಯ ಲೋಕದಲ್ಲಿ ನುಸುಳಿದೆ ಎಂದು ಹೇಳಬಹುದು. ಸಾಹಿತ್ಯ ಕ್ಷೇತ್ರವನ್ನು ಕಟ್ಟುತ್ತಿರುವುದು ಕವಿಗಳು ಮತ್ತು ಸಾಹಿತಿಗಳೆ ಹೊರತು ರಾಜಕೀಯದವರಲ್ಲ ಎಂಬುದನ್ನು ಮನದಟ್ಟಣೆ ಮಾಡಿಕೊಳ್ಳಬೇಕು. ಈ ಬೆಳವಣಿಗೆ ಸಾಹಿತ್ಯ ಲೋಕವನ್ನು ಮತ್ತು ಹಿರಿಯ ಸಾಹಿತಿಗಳನ್ನು ಬಹುಬೇಗಾ ದೂರತಳ್ಳುತ್ತಿರುವ ಮುನ್ಸೂಚನೆ ಕಂಡಬರುತ್ತಿದೆ.

