ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ಐತಿಹಾಸಿಕ ದೇವಾಲಯವಾಗಿದ್ದು ಸಾವಿರಾರು ವರ್ಷಗಳ ಇತಿಹಾಸದಾಗಿದೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾತ್ರೆ ಜರುಗುತ್ತದೆ ಅದರಂತೆ ಸೆಪ್ಟೆಂಬರ್ 2 ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಅತಿ ವಿಜೃಂಭಣೆ ಜಾತ್ರೆ ಜರುಗಲಿದೆ ಎಂದು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ತಿಳಿಸಿದರು.
ಶನಿವಾರ ದೇವಸ್ಥಾನದ ಯಾತ್ರಾ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಸವೇಶ್ವರ ಜಾತ್ರಾ ಮಹೋತ್ಸವ ಸೆ.2 ರಿಂದ 6 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರದಂದು ಬೆಳಿಗ್ಗೆ ಬಸವಣ್ಣನಿಗದ ಮಹಾಪೂಜೆ, ಮಧ್ಯಾಹ್ನ ಕಳಸದ ಮೆರವಣಿಗೆ ನಂತರ ಕಳಸ ಶಿಖರಕ್ಕೇರುವುದು. ಅಂದೇ ರಾತ್ರಿ ‘ಖಾನಾವಳಿ ಚನ್ನಿ’ ನಾಟಕ ಇರಲಿದ್ದು, ಕುಂಟೋಜಿ ಸಂಸ್ಥಾನ ಮಠದ ಗುರು ಚನ್ನವೀರ ಶಿವಾಚಾರ್ಯ ಸಾನಿಧ್ಯ, ಉದ್ಘಾಟನೆಯನ್ನು ಶಾಸಕ ಸಿ.ಎಸ್ ನಾಡಗೌಡ, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸೆ.3 ರಂದು ಬೆಳಿಗ್ಗೆ ಸಕಲ ವಾಧ್ಯ-ವೈಭವದೊಂದಿಗೆ ಪಲ್ಲಕ್ಕಿ ಉತ್ಸವದ ಬಳಿಕ ಸಂಗ್ರಾಣಿ ಕಲ್ಲು, ಚೀಲ, ಗುಂಡು, ಉಸುಕಿನ ಚೀಲ ಎತ್ತುವುದು. ಹಗ್ಗ ಜಗ್ಗುವ ಸ್ಪರ್ಧೆ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮ ಇರಲಿವೆ. ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಸಾನಿಧ್ಯವಹಿಸುವರು. ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಆನಂದ ಗಸ್ತಿಗಾರ ವಹಿಸಲಿದ್ದಾರೆ.
- Advertisement -
ಸೆ. 4 ರಂದು ಎತ್ತಿನಗಾಡಿ ರೇಸ್, ಪುಟ್ಟಿ ಗಾಡಿಯ ಸುತ್ತು ಗಾಡಿ ರೇಸ್, ಟ್ರ್ಯಾಕ್ಟರ್ ಇಂಜಿನ್ ಸ್ಪರ್ಧೆ ಹಾಗೂ ಕಲಾಚಿಂಚನ ಬಳಗದಿಂದ ರಸಮಂಜರಿ ಕಾರ್ಯಕ್ರಮ ಇರಲಿದ್ದು ಯಂಕಂಚಿ ಹಿರೇಮಠ ಸಂಸ್ಥಾನ ಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದರೆ, ಉದ್ಘಾಟನೆಯನ್ನು ಎಂ.ಎನ್ ಮದರಿ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ರಾಮಣ್ಣ ಹುಲಗಣ್ಣಿ ವಹಿಸುವರು.
ಸೆ.5 ರಂದು ಗಾಡಿ ರೇಸ್, ತೆರಬಂಡಿ ರೇಸ್, ಟ್ರ್ಯಾಕ್ಟರ್ ಹಿಂಬದಿಯ ಬಲ ಪ್ರದರ್ಶನ, ಪಗಡಿ ಸ್ಪರ್ಧೆ ಇರಲಿದೆ. ಅಂದೆ ರಾತ್ರಿ ‘ಮಗ ಹೋದರು ಮಾಂಗಲ್ಯ ಮುಖ್ಯ’ ನಾಟಕ ಇದೆ. ಜಾತ್ರೆ ನಡೆಯುವ ಐದು ದಿನಗಳು ಅನ್ನಸಂತರ್ಪಣೆ ಇರಲಿದೆ.
ಈ ದೇವಸ್ಥಾನದ ಉತ್ತರಕ್ಕೆ ಅಲ್ಲಿಸಾಬ ದರ್ಗಾ, ದಕ್ಷಿಣಕ್ಕೆ ಗಂಗಪ್ಪಯ್ಯನ ಗುಡಿ, ಪಶ್ಚಿಮಕ್ಕೆ ಘನಮಠೇಶ್ವರ, ಪೂರ್ವಕ್ಕೆ ಮಳಿ(ಮಳೆ) ಬಸವೇಶ್ವರ ದೇವಸ್ಥಾನಗಳ ಮದ್ಯಭಾಗದಲ್ಲಿ ನೆಲೆಸಿರುವನೇ ಕುಂಟೋಜಿ ನಂದಿ ಬಸವಣ್ಣ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ದೇವಸ್ಥಾನಕ್ಕೆ ಕಲ್ಯಾಣ ಚಾಲುಕ್ಯ ಜಯಸಿಂಹ-2, ಸೋಮೇಶ್ವರ- ಮತ್ತು ಮಾದವಸಿಂಗನವರು ದಾನಧರ್ಮ ಮಾಡಿದ ಮಾಹಿತಿಯು “ಸೌತ್ ಇಂಡಿಯನ್ ಇನ್ಸಕ್ರೀಪ್ಸ್‌ಷನ್” ಬುಕ್ಕಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ ಎಂದು ಜಾತ್ರಕಮಿಟಿಯ ಬಸವರಾಜ ಹುಲಗಣ್ಣಿ ಹೇಳಿದರು.
ಪ್ರತಿ ವರ್ಷ ಶ್ರಾವನ ಮಾಸದ ಕೊನೆಯ ಸೋಮವಾರದಂದು ನಡೆಯುವ ಕುಂಟೋಜಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ಜಾತ್ರೆ ದೊಡ್ಡ ಪ್ರಾಮಾಣದಲ್ಲಿ ನಡೆಯುತ್ತಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅದರಂತೆ ಎಲ್ಲಾ ಭಕ್ತರು ಬಂದು ಪಾಲ್ಗೊಂಡು ಬಸವಣ್ಣನ ಕೃಪೆಗೆ ಪಾತ್ರರಾಗಿ, ಜಾತ್ರೆ ನಡೆಯುವ ಐದು ದಿನವೂ ಉಪಹಾರ ವವ್ಯಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ತಿಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಉಪಾಧ್ಯಕ್ಷ ಆನಂದ್ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೇಕಾರ, ಖಜಾಂಚಿ ಬಸನಗೌಡ ಬಿರಾದಾರ, ಸದಸ್ಯರಾದ ಸಂಗಯ್ಯ ಮಠ್, ನಾಗಳಿಂಗಯ್ಯ ಮಠ, ವೀರಭದ್ರ ಪತ್ತಾರ, ನಾಗೇಶ ಸಜ್ಜನ್, ಪ್ರಕಾಶ ಹೂಗಾರ್, ವೀರಬಸ್ಸು ಊರಾನ, ಬಸವರಾಜ ಮಡಿವಾಳರ, ಹುಚ್ಛೆಸಾಬ ನಾಲತವಾಡ, ಹಣಮಂತ ಕುಂಬಾರ, ಮುತ್ತು ಜಾವುರ, ಕುಮಾರ ಹಡಪದ, ಹಣಮಂತ ಭಜಂತ್ರಿ, ಹಣಮಂತ ನಾಯಕ, ಲಕ್ಷ್ಮಣ ಮುರಾಳ, ದುರ್ಗಪ್ಪ ಕವಡಿಮಟ್ಟಿ ಹಾಗೂ ಗುರುಪಾದಪ್ಪ ಹೆಬ್ಬಾಳ, ಸಿದ್ದಪ್ಪ ಹೂಗಾರ, ಮಾಜಿ ಸೈನಿಕ ಬಸಯ್ಯ್ ಮಠ, ಅಧ್ಯಕ್ಷರು ಡಿಜೆ ಮಲಿಕರು ಸಂಘ ಶಿವಪ್ಪ ಕೋಲಕರ, ಗಂಗಾಧರ್ ಹುಲಗಣ್ಣಿ, ಮಲ್ಲಿಕಾರ್ಜುನ ಹೆಬ್ಬಾಳ, ಸಂತೋಷ ಬಿರಾದಾರ್, ಬಸವರಾಜ ಹುಲಗಣ್ಣಿ ಇದ್ದರು.
- Advertisement -

