ಸತ್ಯಕಾಮ ವಾರ್ತೆ ಗುರುಮಠಕಲ್ :
ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ರೂಪಿಸುವ ಶಿಕ್ಷಕನ ಮೇಲೆ ಅತಿಹೆಚ್ಚು ಜವಾಬ್ದಾರಿ ಇದೆ. ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಮನೋಭಾವನೆಯನ್ನು ಅರಿತು ಅವರಿಗೆ ಶಿಕ್ಷಣ ನೀಡಬೇಕಿದೆ. ಶಿಕ್ಷಣದ ಆಳವನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ ಎಂದು ಪ್ರಾದೇಶಿಕ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಪಾಟೀಲ್ ಸೇಡಂ ಹೇಳಿದರು.
ಪಟ್ಟಣದ ಖಾಸಮಠ ಆವರಣದಲ್ಲಿ ಲಾಯನ್ಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಗುರುಮಠಕಲ್ ಸೇವಾ ಸದನ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಗುರುವಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಇದೇ ಸಂಧರ್ಭದಲ್ಲಿ ಗುರುಮಠಕಲ್ ಲಯನ್ಸ್ ಕ್ಲಬ್ ಸೇವಾ ಸಾಧನ ಅಧ್ಯಕ್ಷ ಸಂತೋಷ ಕುಮಾರ್ ನೀರೇಟಿ ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಮಕ್ಕಳಿಗೆ ಪ್ರಾಚೀನ ಮತ್ತು ಪ್ರಸ್ತುತ ಸಮಾಜದ ಆಗುಹೋಗುಗಳ ಕುರಿತು ಭೋದನೆ ಮಾಡಬಹುದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಠಬೋಧನೆ ಮಾಡಿದರೆ ಮಾತ್ರ ನೀವು ಮಕ್ಕಳ ಗಮನ ಸೆಳೆಯಬಹುದು ಎಂದರು.
- Advertisement -
ಕಾರ್ಯಕ್ರಮದಲ್ಲಿ ತಾಲೂಕಿನ ಸಮಾರು 300ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.
ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರವೃತ್ತಿಯನ್ನಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಕ್ಲಸ್ಟರ್ ನ 17 ಶಿಕ್ಷಕರನ್ನು ಆಯ್ಕೆ ಮಾಡಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿದರು. ಶಶಿಕಾಂತ್ ಜನಾರ್ಧನ್ ನಿರೂಪಣೆ ಮಾಡಿದರು.
ಈ ಸಂಧರ್ಭದಲ್ಲಿ ಅಖಂಡೇಶ್ವರ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಭೀಮಪ್ಪ ಮನ್ನೆ, ಉಪಾಧ್ಯಕ್ಷರಾದ ಶ್ರೀನಿವಾಸ್ ಮಡಿವಾಳ,ಸಿಆರ್‌ಪಿ ಸಿದ್ದಲಿಂಗಪ್ಪ ನೆಲ್ಲೋಗಿ, ಬಾಲಪ್ಪ ಸಿರಿಗೆಮ್, ರಾಮಕೃಷ್ಣ, ಪ್ರಕಾಶ್, ವೀರಾಶಾಸ್ತ್ರಿ, ರವೀಂದ್ರ ಚೌಹಾಣ, ಬಾಲಪ್ಪ ಸಿರಿಗಂ, ಸಿದ್ದು ಕಂದಕುರ್,ರಾಜೇಂದ್ರ, ಆಂಜನೇಯ, ವಿಜಯಲಕ್ಷ್ಮಿ ನಿಲ್ಲೋಗಿ, ಗಾಯತ್ರಿ ನಾಯಕಿನ್ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

