*ಸತ್ಯಕಾಮ ವಾರ್ತೆ ಕಲಬುರಗಿ:*
ಪೆಟ್ರೋಲ್ ಬಂಕ್ ನಿರಾಕ್ಷೇಪಣಾ ಪತ್ರ (ಎನ್‌ಒಸಿ)ವನ್ನು ನೀಡಲು 20 ಸಾವಿರ ಹಣ ಪಡೆಯುತ್ತಿದ್ದಾಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್ ರಾವ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿತ್ತಾಪೂರದ ರಾಜರಾಮಪ್ಪ ನಾಯಕ್ ಅವರು ತಮ್ಮ ಪೆಟ್ರೋಲ್ ಬಂಕ್ ಎನ್‌ಒಸಿ ಕೋರಿ ಅಗ್ನಿಶಾಮಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಎನ್ಒಸಿ ನೀಡುವುದಕ್ಕೆ ಕಲಬುರ್ಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್ ರಾವ್ ಒಂದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಬ್ಬರು ಫಲಾನುಭವಿಯಿಂದ ಮುಂಗಡವಾಗಿ 20 ಸಾವಿರ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್.ಪಿ.ಜಾನ್ ಆಂಟೋನಿ ನೇತೃತ್ವದಲ್ಲಿ ಡಿ.ಎಸ್.ಪಿ . ಮಂಜುನಾಥ್. ಇನ್‌ಸ್ಪೆಕ್ಟರ್ ದ್ರುವತಾರ, ಸಿಬ್ಬಂದಿ ಮಲ್ಲಿನಾಥ್. ಮಸೂದ್. .ದಾಳಿ ನಡೆಸಿದ್ದರು.

