ಟ್ರಾನ್ಸಪರ್ ಗೆ ಕಾಸು ಇಸ್ಕೋಬೇಡ್ರಿ ಡಿಡಿಪಿಐ ಕೇಂದ್ರ ಸಚಿವ ಗರಂ..!
ಚರ್ಚೆಗೆ ಗ್ರಾಸವಾದ ಕೇಂದ್ರ ಸಚಿವರ ಭಾಷಣ
ಸತ್ಯಕಾಮ ವಾರ್ತೆ ಯಾದಗಿರಿ:
ಶಿಕ್ಷಕರ ವರ್ಗಾವಣೆ ಮಾಡಲು ಡಿಡಿಪಿಐ ಅವರು ಹಣ ಪಡೆಯುತ್ತಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
- Advertisement -
ಜಿಲ್ಲೆಯ ತಡಿಬಿಡಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಂಪೂರ್ಣತಾ ಅಭಿಯಾನ ಮೇಳ ಉದ್ಘಾಟಿಸಿ ಸಚಿವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ, ಏನ್ರೀ ಡಿಡಿಪಿಐ ಅವರೇ, ಟ್ರಾನ್ಸ್ಫರ್ ಮಾಡಲು ಕಾಸು ಇಸ್ಕೊತಿರಂತೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಯಾದಗಿರಿ ಜಿಲ್ಲೆಯೂ ಶಿಕ್ಷಣದಲ್ಲಿ ಕೊನೆಯ ಸ್ಥಾನದಲ್ಲಿದೆ ಎನು ಮಾಡುತ್ತಿರಿ ಶಿಕ್ಷಣ ಇಲಾಖೆಯಲ್ಲಿ 3 ಸಾವಿರ ಶಿಕ್ಷಕರಿಲ್ಲ ಇಲಾಖೆ ಮಾತ್ರ ಇದೆ ಎನು ಮಾಡತ್ತೀರಿ ರೀ ಡಿಡಿಪಿಐ ಹೋದ ಪುಟ್ಟ ಬಂದ ಪುಟ್ಟ ಎನ್ರೀ ಮಂಜುನಾಥ ಚಾಮರಾಜನಗರದಿಂದ ಯಾದಗಿರಿ ಬಂದಿದ್ದೂ ನಾಮಕಾವಸ್ಥೆ ಚಾಮರಾಜನಗರ ಅಂತಾ ಹೇಳಿದ್ರೆ ನನಗೆ ನಾಚಿಕೆಯಾಗುತ್ತೆ ಟ್ರಾನ್ಸಪರ್ ಗೆ ದುಡ್ಡು ತಗೋಬೇಡಿ ಹೀಗ ಕಾಲ ಮೊದಲಿನಂತಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಶಿಕ್ಷಣ ಇಲಾಖೆ ಅವ್ಯವಸ್ಥೆಯ ಕುರಿತು ಗರಂ ಆಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರಿಗೆ ತರಾಟೆ ತೆಗೆದುಕೊಂಡರು.
ವಿಡಿಯೋ: ಟ್ರಾನ್ಸಪರ್ ಗೆ ಕಾಸು ಇಸ್ಕೋಬೇಡ್ರಿ ಡಿಡಿಪಿಐ ಕೇಂದ್ರ ಸಚಿವ ಗರಂ..!
ಜಿಲ್ಲೆಯ ಶಿಕ್ಷಣ ಇಲಾಖೆಯ ಅವ್ಯವಸ್ಥೆ ಹಾಗೂ ವರ್ಗಾವಣೆಗೆ ಹಣ ಪಡೆಯುತ್ತಾರೆ ಎಂಬ ಆರೋಪಗಳಿಗೆ ಕೇಂದ್ರ ರೇಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಗರಂ ಮಾತು ಮತ್ತಷ್ಟು ಬಲ ತಂದಿದೆ. ಇದರ ಕುರಿತು ತನಿಖೆ ಮಾಡುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹಗಳು ಕೇಳಿಬಂದವು.

