*ಸತ್ಯಕಾಮ ವಾರ್ತೆ ಯಾದಗಿರಿ:*
Lkg ಮಕ್ಕಳನ್ನು ಪ್ರಸ್ತುತ ವರ್ಷ ಯಾವುದೆಂದು ಕೇಳಿದರೆ 2024 ಎಂದು ಉತ್ತರಿಸುತ್ತಾರೆ. ಆದರೆ ಈ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತುತ ವರ್ಷ ಯಾವುದೆಂದೆ ಗೊತ್ತಿಲ್ಲ, ಇಂತಹ ಅಧಿಕಾರಗಳಿಂದ ಜಿಲ್ಲೆ ಅಭಿವೃದ್ಧಿ ಹೇಗೆ ಕಾರ್ಯಗತವಾಗುತ್ತೆಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತೆ ಈ ಅಧಿಕಾರಿಗಳು ಮಾಡಿದ್ದಾರೆ.
ಹೌದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ, ಶಿಕ್ಷಣಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿಯಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತಕ್ಕೆ ಸಂಬಂಧಿಸಿದಂತೆ, ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ PCPNDT ( ಲಿಂಗ ಆಯ್ಕೆಯ ನಿಷೇಧ ಅಧಿನಿಯಮ,1994)ರ ಕುರಿತು ಜಿಲ್ಲೆಯ ಎಲ್ಲಾ ಸ್ಕಾನಿಂಗ್ ಸೆಂಟರ್ ಹೊಂದಿರುವ ವೈದ್ಯರು ಹಾಗೂ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಸಿಬ್ಬಂದಿಯವರೆಗೆ ತರಬೇತಿ ಕಾರ್ಯಗಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಇರುವ ಹಲವು ಲೋಪದೋಷಗಳು ಓದುಗರನ್ನು ಪೇಚಿಗೆ ಸಿಲುಕಿದ ಪ್ರಸಂಗ ಜರುಗಿದೆ.
ಫೆ.16 ರಿಂದ ಮತ್ತು 17 ರಂದು ನಡೆಯುತ್ತಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಕಾರ್ಯಕ್ರಮದ ಸಿಬ್ಬಂದಿಯವರೆಗೆ ತರಬೇತಿ ಕಾರ್ಯಗಾರದ ಆಮಂತ್ರಣ ಪತ್ರಿಕೆಯಲ್ಲಿ ಪ್ರಸುತ್ತ ವರ್ಷವನ್ನೇ ಬದಲಾಯಿಸಲಾಗಿದೆ, ಆಮಂತ್ರಣವನ್ನು ಒಮ್ಮೆ ಗಮನಿಸಿದರೆ, ಅಧಿಕಾರಿಗಳು ಇನ್ನೂ 2023ನೇ ವರ್ಷದಲ್ಲೆ ಇದ್ದಂತೆ ಕಾಣುತ್ತದೆ, ಅಷ್ಟೇ ಅಲ್ಲದೇ ಮುಖ್ಯ ಅತಿಥಿಗಳು ಪಟ್ಟಿಯಲ್ಲಿ ಶ್ರೀಮತಿ ಸಂಗೀತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯಾದಗಿರಿ ಜಿಲ್ಲಾ ಪಂಚಾಯತ್ ಎಂದು ಮುದ್ರಿಸಿಲಾಗಿದೆ,
- Advertisement -
ಅಧಿಕಾರಿಗಳೇ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಜ್ಞಾವಂತರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಮುಂದಾದರೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಮುದ್ರಿಸುವ ಮೊದಲು ಇಲಾಖೆ ಅಧಿಕಾರಿಗಳು, ಪರಿಣಿತಿ ಹೊಂದಿರುವ ನುರಿತ ಕನ್ನಡ ಪಂಡಿತರಲ್ಲಿ ವಿಷಯ ಬರೆಯಿಸಿಕೊಂಡು ಪ್ರಕಟಣೆ ಅಥವಾ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
*ಬಾಕ್ಸ್:*
*ಆಮಂತ್ರಣ ಪತ್ರಿಕೆಯಲ್ಲಿರುವ ತಪ್ಪುಗಳು*
*ಪ್ರಸ್ತುತ ಸಾಲಿನ ವರ್ಷ 2024 ರ ಬದಲಿಗೆ 2023
* ಯಾದಗಿರಿ ಜಿಲ್ಲೆಯ ಹೆಸರನ್ನು ಯಾದಗಿರಿರಿ
* ಫೆಬ್ರವರಿ ಬದಲಿಗೆ ಪೇಬ್ರವರಿ
- Advertisement -
*ತಾರತಮ್ಯ ಬದಲಿಗೆ ತಾರತಮ್ಮ
*ಸ್ವಾಗತ ಬದಲಿಗೆ ಸಾಗತ ಎಂದು ಮುದ್ರಿಸಲಾಗಿದೆ.

